ಉತ್ತರಪ್ರಭ


ಕೊಪ್ಪಳ: ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಾನಂದಯ್ಯ ಕುಣಿಕೇರಿಮಠ, ಉಪಾಧ್ಯಕ್ಷರಾಗಿ ಅರುಣಾ ಜೂಡಿ, ಕಾರ್ಯದರ್ಶಿಯಾಗಿ ಮೈಲಾರಗೌಡ ಹೊಸಮನಿ, ಸಹ ಕಾರ್ಯದರ್ಶಿಯಾಗಿ ಶೇಖರಪ್ಪ ಅಂಕದ, ಖಜಾಂಚಿಯಾಗಿ ಕಳಕಪ್ಪ ಬಿನ್ನಾಳ, ಸಂಘಟನಾ ಕಾರ್ಯದರ್ಶಿಯಾಗಿ ಕೊಟೇಪ್ಪ ಮೇಟಿ, ರಾಜ್ಯ ಪರಿಷತ್ ಸದಸ್ಯರಾಗಿ ಸೋಮರಡ್ಡಿ ಡಂಬಳ್ಳಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣಾ ಅಧಿಕಾರಿ ಎಸ್.ಎಫ್. ಸಂಗಟಿ ತಿಳಿಸಿದ್ದಾರೆ.