ನವದೆಹಲಿ : ಅಮೆರಿಕದ ವರ್ತನೆ ಯಾವ ಸಂದರ್ಭದಲ್ಲಿ ಹೇಗೆ ಇರುತ್ತದೆ ಎಂಬುವುದೇ ತಿಳಿಯದಂತಾಗಿದೆ. ಕಳೆದ ಮೂರು ವಾರಗಳ ಹಿಂದೆಯಷ್ಟೇ ಭಾರತದ ಪ್ರಧಾನಿಯನ್ನು ಹೊಗಳಿ, ಮೋದಿ ಅವರ ಅಕೌಂಟ್ ಫಾಲೋ ಮಾಡಲು ಪ್ರಾರಂಭಿಸಿದ್ದ ಶ್ವೇತಭವನ ಈಗ ಅನ್ ಫಾಲೋ ಮಾಡಿದೆ.

ಅಮೆರಿಕದಲ್ಲಿ ಕೊರೊನಾ ಅಬ್ಬರ ತಾಂಡವಾಡುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮಲೇರಿಯಾ ಔಷಧಿ ಮತ್ತು ಮಾತ್ರೆಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಅವರ ಮನವಿ ಸ್ವೀಕರಿಸಿದ್ದ ಪ್ರಧಾನಿ ಮೋದಿ, ಸಹಾಯ ಮಾಡಿದ್ದರು. ಇದಕ್ಕೆ ಕೃತಜ್ಞತೆ ಸಲ್ಲಿಸಿದ್ದ ಟ್ರಂಪ್, ಆ ಸಂದರ್ಭದಲ್ಲಿ ಮೋದಿ ಅವರನ್ನು ಕೊಂಡಾಡಿದ್ದರು.

ಆ ನಂತರ ಅಮೆರಿಕದ ಶ್ವೇತಭವನ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್‌ ಮೂಲಕ ಪ್ರಧಾನಿ ಮೋದಿ, ಪ್ರಧಾನಿ ಕಚೇರಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಷ್ಟ್ರಪತಿ ಭವನ, ಭಾರತದ ರಾಯಭಾರ ಕಚೇರಿ ಹಾಗೂ ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಫಾಲೋ ಮಾಡಲು ಪ್ರಾರಂಭಿಸಿತ್ತು.

ಆದರೆ, ಸದ್ಯ ಪ್ರಧಾನಿ ಮೋದಿ ಅವರನ್ನು ಸೇರಿಸಿದಂತೆ ಒಟ್ಟು 6 ಅಕೌಂಟ್ ಗಳನ್ನು ಅನ್ ಫಾಲೋ ಮಾಡಿದೆ. ಯಾವ ಕಾರಣಕ್ಕೆ 6 ಅಕೌಂಟ್ ಗಳನ್ನು ಅನ್ ಫಾಲೋ ಮಾಡಿದೆ ಎಂಬುವುದು ಮಾತ್ರ ನಿಗೂಢವಾಗಿದೆ.

Leave a Reply

Your email address will not be published. Required fields are marked *

You May Also Like

ಭಾರತೀಯ ಯೋಧರ ದಾಳಿಗೆ , ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂ ಹತ

ಭಾರತದ ಶತ್ರು, ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂನನ್ನು ಭದ್ರತಾ ಪಡೆ ಯೋಧರು ಮುಗಿಸಿದ್ದಾರೆ.

ಗದಗ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 210…

ರಾಜ್ಯಕ್ಕೆ ಮುಂಗಾರು ಯಾವಾಗ ಪ್ರವೇಶಿಸುವುದು ಯಾವಾಗ ಗೊತ್ತಾ?

ಪ್ರತಿ ವರ್ಷ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತಿತ್ತು. ಆದರೆ, ಈ ಬಾರಿ ಜೂ. 5ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ

ನಿನ್ನೆ ಒಂದೇ ದಿನ ದಾಖಲೆಯ ಸೋಂಕಿತರು

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದೆ. ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆಯಾಗುತ್ತಿದ್ದಾರೆ.…