ಬೆಂಗಳೂರು: ಈಗಾಗಲೇ ಮೇ.3ರ ವರೆಗೆ ಲಾಕ್ ಡೌನ್ ಘೋಷಣೆಯಾಗಿದ್ದು ನಂತರ ರಾಜ್ಯದಲ್ಲಿ ಸ್ಥಿತಿಗತಿ ಹೇಗಿರಬಹುದು ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ರಾಜ್ಯ ಸರ್ಕಾರ ರೆಡ್, ಗ್ರೀನ್, ಯಲ್ಲೋ ಮೂರು ವಿಭಾಗಗಳನ್ನು ಮಾಡಿದ್ದು ಆಯಾ ವಿಭಾಗಕ್ಕೆ ತಕ್ಕಂತೆ ನಿಯಮಗಳನ್ನು ಸಡಿಲಿಸಲಿದೆ. ಯಾವ ಜಿಲ್ಲೆಗಳು ಯಾವ ವಿಭಾಗದಲ್ಲಿವೆ ಎನ್ನುವ ವಿವರ ಇಲ್ಲಿದೆ ನೋಡಿ

ಝೋನ್ ಗಳ ವಿವರ

ರೆಡ್‌: ವಿಜಯಪುರ, ಕಲಬುರಗಿ, ಬೆಂಗಳೂರು, ಮೈಸೂರು, ಬೆಳಗಾವಿ, ಬಾಗಲಕೋಟೆ,

ಗ್ರೀನ್: ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಚಾಮರಾಜನಾಗರ, ಕೋಲಾರ, ಯಾದಗಿರಿ, ರಾಯಚೂರು, ಉಡುಪಿ, ಕೊಪ್ಪಳ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ,

ಯೆಲ್ಲೋ: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೀದರ್‌, ಗದಗ, ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಳ್ಳಾರಿ, ತುಮಕೂರು,

ಆಯಾ ಜಿಲ್ಲೆಯ ಸ್ಥಿತಿಗತಿಯ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಹಿತಿ ಪಡೆದುಕೊಂಡಿದ್ದಾರೆ. ಲಾಕ್ ಡೌನ್ ಅವಧಿ ಮುಗಿದ ನಂತರ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸುವ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಈಗಾಗಲೇ ರಾಜ್ಯದಲ್ಲಿ ಮೂರು ಝೋನ್‌ಗಳನ್ನಾಗಿ ವಿಭಾಗಿಸಲಾಗಿದೆ. ರೆಡ್‌ ಝೋನ್‌ನಲ್ಲಿ 6 ಜಿಲ್ಲೆಗಳಲ್ಲಿವೆ. ರೆಡ್ ಝೋನ್ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಯಲಿದೆ. ಉಳಿದಂತೆ ಗ್ರೀನ್‌ ಮತ್ತು ಯೆಲ್ಲೋ ಝೋನ್‌ಗಳಲ್ಲಿ ಲಾಕ್‌ಡೌನ್‌ ಮೇ 3ರ ನಂತರ ಸಡಿಲಗೊಳ್ಳುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ಮೇ.3ರ ನಂತರವೆ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇನ್ನು ಇದೆ ವೇಳೆ  ಗ್ರೀನ್ ಝೋನ್ ನಲ್ಲಿರುವ ಯಾದಗಿರಿ, ಕೊಪ್ಪಳ, ರಾಯಚೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕೈಗಾರಿಕೆ ಚಟುವಟಿಕೆ ಆರಂಭಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ ಎನ್ನಲಾಗಿದೆ.

ಗಡಿ ಓಪನ್‌ ಡೌಟ್..!

ಸರಕು ಸಾಗಣೆಯಂತಹ ಅಗತ್ಯ ವಸ್ತುಗಳ ಸಂಚಾರ ಸೇವೆ ಹೊರತುಪಡಿಸಿ ಬೇರೆ ವಾಹನಗಳ ಓಡಾಟಕ್ಕೆ ಮೇ 3ರ ಬಳಿಕವೂ ತಕ್ಷಣ ಅನುಮತಿ ನೀಡಬಾರದು ಎಂದು ಗಡಿ ಜಿಲ್ಲೆಗಳ ಡಿಸಿಗಳು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೇ 3ರವರೆಗೆ ರಾಜ್ಯದ ಗಡಿ ಓಪನ್‌ ಮಾಡಬಾರದು. ರಾಜ್ಯದ ಒಳಗೂ ರೆಡ್‌ ಝೋನ್‌ ಜಿಲ್ಲೆಗಳಿಂದ ಆರೆಂಜ್‌, ಗ್ರೀನ್‌ ಝೋನ್‌ ಜಿಲ್ಲೆಗಳಿಗೆ ಪ್ರವೇಶ ನಿರ್ಭಂಧಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.




		
Leave a Reply

Your email address will not be published. Required fields are marked *

You May Also Like

Регистрация На Сайте Leonbets Обзор И Особенности Официального Сайта Leonbets

See Who Reacted To This 35949 Leonbets Kz Онлайн И Оффлайн Казино,…

ರಾಜ್ಯದಲ್ಲಿ ಅಬ್ಬರಿಸುತ್ತಿದೆ ಮಹಾಮಾರಿ – ಇಂದು ಮತ್ತೆ 10 ಸಾವಿರ ಗಡಿ ದಾಟಿದ ಸೋಂಕು!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇಂದು ಕೂಡ ರಾಜ್ಯದಲ್ಲಿ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ.

ಸಾಲೋಣಿ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

ಕನಕಗಿರಿ ಕ್ಷೇತ್ರದ ಕುರುಬ ಸಮಾಜದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ನಾಗಪ್ಪ ಸಾಲೋಣಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಬೇಕೆಂದು ಇಲ್ಲಿನ ಕುರುಬ ಸಮಾಜದ ಯುವ ಮುಖಂಡ ಬೀರಪ್ಪ ವೆಂಕಟಾಪೂರ ಒತ್ತಾಯಿಸಿದ್ದಾರೆ.

17 ಜನ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿದ ಅಧಿಕಾರಿಗಳು!

ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.