ಮಸ್ಕಿ: ಕನಕಗಿರಿ ಕ್ಷೇತ್ರದ ಕುರುಬ ಸಮಾಜದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ನಾಗಪ್ಪ ಸಾಲೋಣಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಬೇಕೆಂದು ಇಲ್ಲಿನ ಕುರುಬ ಸಮಾಜದ ಯುವ ಮುಖಂಡ ಬೀರಪ್ಪ ವೆಂಕಟಾಪೂರ ಒತ್ತಾಯಿಸಿದ್ದಾರೆ.

ಹತ್ತಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ಪ್ರಾಭಲ್ಯ ಹೊಂದಿದ್ದಾರೆ. ಕ್ಷೇತ್ರದ ಶಾಸಕ ದಡೇಸಗೂರು ಹಾಗೂ ಸಂಸದ ಕರಡಿ ಸಂಗಣ್ಣ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಟೊಂಕ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚಿಸಿ ಕೆಲಸ ಮಾಡಿದ್ದಾರೆ. ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.

ಅವರ ಶ್ರಮಕ್ಕೆ ಪ್ರತಿಫಲ ಸಿಗಲು ಬಿಜೆಪಿ ಸರ್ಕಾರ ಗುರುತಿಸಿ ನಿಗಮ ಮಂಡಳಿಯ ಕಾಡಾ ಅಧ್ಯಕ್ಷ ಸ್ಥಾನ ನೀಡಬೇಕು. ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿದರೆ ಹಿಂದುಳಿದ ವರ್ಗಗಳ ಬೆಂಬಲ ಬಿಜೆಪಿ ಪಕ್ಷಕ್ಕೆ ಹೆಚ್ಚಿನದಾಗಿ ಸಿಗುತ್ತದೆ. ಹಾಗೂ ಕುರುಬ ಸಮಾಜಕ್ಕೆ ನ್ಯಾಯ ದೊರಕಿದಂತಾಗುತ್ತದೆ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ನಾಗಪ್ಪ ಸಾಲೋಣಿ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಬೇಕೆಂದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಮನಗರಕ್ಕೂ ಕೊರೋನಾ ಎಂಟ್ರಿ..!

ಈತನಕ ಯಾವುದೇ ಪ್ರಕರಣಗಳು ಕಂಡ ಬರದ ಹಿನ್ನೆಲೆ ಗ್ರೀನ್ ಝೋನ್ ನಲ್ಲಿದ್ದ ರಾಮನಗರದಲ್ಲಿ ಕೂಡ ಇದೀಗ ಕೊರೋನಾ ಖಾತೆ ತೆರೆದಿದೆ.

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ…

ಶಿರಹಟ್ಟಿ ಮಾಬುಸುಬಾನಿ ಉರುಸು ರದ್ದು

ಮಾಬುಸುಬಾನಿ ಉರುಸು ರದ್ದು ಪಟ್ಟಣದಲ್ಲಿ ಭಾವೈಕ್ಯತೆ ಸಂಕೇತವಾಗಿದ್ದ ಹಜರತ್ ಮೆಹಬೂಬ ಸುಬ್ಹಾನಿ(ರಹ) ದರ್ಗಾದ ಉರುಸು ಈ ಬಾರಿ ಕೊರೊನಾದಿಂದ ರದ್ದುಗೊಳಿಸಲಾಗಿದೆ. ಉರುಸು ನಿಮಿತ್ಯ ನವೆಂಬರ್ 25 ರಿಂದ 27ರವರೆಗೆ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರದ ನಿಯಮದಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಆದೇಶದ ಪ್ರಕಾರ ರದ್ದುಗೊಳಿಸಲಾಗಿದೆ.

ಗದಗ ಜಿಲ್ಲೆಯಲ್ಲಿ ಸೋಂಕಿನ ಏಕ್-ದಮ್ ನೆಗೆತ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯ ಮಟ್ಟಿಗೆ ಈ ಹಿಂದೆ ಒಂದೇ ದಿನ 24 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಗರಿಷ್ಠ…