ಕೊಡುಗು: ಕಾಫಿ ನಾಡು ಕೊಡುಗಿನಲ್ಲೀಗ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಲಾಕ್ ಡೌನ್ ಪರಿಣಾಮದಿಂದ ಕಾಫಿ ಉದ್ಯಮದ ವಹಿವಾಟು ಸ್ಥಗಿತವಾಗಿದ್ದು, ಸಾವಿರಾರು ಬೆಳೆಗಾರರು ಹಾಗೂ ಕಾಫಿ ಉದ್ಯಮವನ್ನೆ ನಂಬಿಕೊಂಡ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇಲ್ಲಿನ ಕುಶಾಲನಗರದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ 35ಕ್ಕೂ ಹೆಚ್ಚು ಕಾಫಿ ಉದ್ಯಮಕ್ಕೆ ಸಂಬಮಧಿಸಿದ ಕೈಗಾರಿಕೆಗಳಿವೆ. ರಾಜ್ಯದಲ್ಲಿ ಹೆಚ್ಚು ಕಾಫಿ ಉತ್ಪಾದನೆ ಆಗುವುದೇ ಕೊಡುಗಿನಲ್ಲಿ. ಆದರೆ ಇದಿಗ ಲಾಕ್ ಡೌನ್ ಹಿನ್ನೆಲೆ ಸಾಗಣೆ ಮತ್ತು ರಫ್ತು ಅಸಾಧ್ಯವಾಗಿದೆ. ಸರ್ಕಾರ ಈಗಾಗಲೇ ಸಗಟು ಸಾಗಣೆಗೆ ವಿನಾಯಿತಿ ನೀಡಿದರೂ ಕೂಡ ಈ ಕಾಫಿ ಉದ್ಯಮಕ್ಕೆ ಅದರದ್ದೆ ಆದ ಕೆಲವು ಮಿತಿಗಳಿರುವುದರಿಂದಾಗಿ ರಫ್ತು ಸಾಧ್ಯವಾಗುತ್ತಿಲ್ಲ.

ಕಾಫಿಗೆ ಸಂಬಂಧಿಸಿದ ಉದ್ಯಮಗಳಿಂದಲೇ ಜಿಲ್ಲೆಯಲ್ಲಿ ವಾರ್ಷಿಕ 4 ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಆದರೆ ಬಹುತೇಕ ಕೈಗಾರಿಕೆಗಳು ಬಂದ್ ಆಗಿರುವುದರಿಂದ ಟಷ್ಟು ಹಾನಿಯಾಗಲಿದೆ ಎನ್ನುವ ಲೆಕ್ಕಾಚಾರವೇ ಊಹೆ ನಿಲುಕದ್ದಾಗಿದೆ. ಒಂದೆಡೆ ಕೈಗಾರಿಕೆ ಬಂದ್ ಆಗಿರುವದರಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾದರೆ ಮತ್ತೊಂದೆಡೆ ಕೊಡಗು ಜಿಲ್ಲೆಯ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರಿಗೆ ಕೆಲಸಕ್ಕೆ ಬರುವುದು ಅಸಾಧ್ಯವಾಗಿದೆ.

2500 ಕಾರ್ಮಿಕರು

ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪ ಕೂಡ್ಲೂರಿನಲ್ಲಿ ಕೈಗಾರಿಕೆಯಲ್ಲಿ ಕಾಫಿ ಉದ್ಯಮವನ್ನೆ ನಂಬಿಕೊಂಡು 2500 ಕಾರ್ಮಿಕರಿದ್ದಾರೆ. ಆದರೆ ಇದೀಗ ಉದ್ಯಮ ಸ್ಥಗಿತವಾಗಿರುವುದರಿಂದ ಕಾರ್ಮಿಕ ಕುಟುಂಬಳ ಸ್ಥಿತಿ ಹೇಳತೀರದಾಗಿದೆ. ಇದರ ಜೊತೆಗೆ ಕಾಫಿ ಉದ್ಯಮಕ್ಕೂ ಕೂಡ ಅಪಾರಪ್ರಮಾಣದ ಹಾನಿಯಾಗಿದೆ. ಇಂತಹ ಅದೆಷ್ಟೋ ಉದ್ಯಮಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಕುಸಿತ ಕಾಣುತ್ತಲೇ ಸಾಗಿದೆ. ದುಡಿಯವ ವರ್ಗದ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ.

1 comment
  1. ಕೊರೋನಾ ಎಲ್ಲವನ್ನೂ ಕಟ್ಟಿ ಹಾಕುತ್ತಿದೆ…. ಸರ್ಕಾರ ಈ ಕುರಿತು ಶೀಘ್ರವಾಗಿ ಕೆಲವು Rapid Action ಗಳನ್ನು ಕಂಡುಕೊಳ್ಳಬೇಕಿದೆ.

Leave a Reply

Your email address will not be published. Required fields are marked *

You May Also Like

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…

ಹೆಚ್ಚು ಮದ್ಯ ಕುಡಿದಿದ್ದಾನೆ ಎಂಬ ಕಾರಣಕ್ಕೆ ಕೊಲೆ!

ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿಯ ಆರ್.ಟಿ. ನಗರದಲ್ಲಿ ನಡೆದಿದೆ.

ಗದಗ ಜಿಲ್ಲೆಯಲ್ಲಿಂದು 2 ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆ

ಇಂದು ಕೂಡ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು ಗದಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ.