ಜಿಲ್ಲಾ ಹಾಗು ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಚಿಂತನೆ: ಸಚಿವ ಈಶ್ವರಪ್ಪ
ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ನಡೆಯಬೇಕಿದ್ದ ಜಿಲ್ಲಾ ಹಾಗು ತಾಲೂಕು ಪಂಚಾಯತಿ ಚುನಾವಣೆಗಳನ್ನು ಮುಂದೂಡಲು ಗ್ರಾಮೀಣಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕೋವಿಡ್ ರೂಪಾಂತರಿ ಸೋಂಕಿನ ಬಗ್ಗೆ ಸಚಿವ ಸುಧಾಕರ್ ನೀಡಿದ ಮಾಹಿತಿ
ಬೆಂಗಳೂರು: ಕೋವಿಡ್ ರೂಪಾಂತರಿ ಸೋಂಕಿಗೆ ಇದು ಶೇ.70 ರಷ್ಟು ಹರಡುವ ಗುಣವಿದೆ. ಆದರೆ ಈ ಸೋಂಕಿನ ತೀವ್ರತೆ ಕಡಿಮೆ ಇದೆ. ಹೀಗಿದ್ದರೂ ಇದನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುದಾಕರ್ ತಿಳಿಸಿದರು.
ರಷ್ಯಾ ಲಸಿಕೆ ಸುದ್ದಿ ನಂಬಿ ದಿಕ್ಕು ತಪ್ಪಿದ ‘ದೊಡ್ಡ’ ಮಾಧ್ಯಮ: ಅವಸರದ ನಡುವೆಯೂ ಉತ್ತರಪ್ರಭ ಸಂಯಮ
ಕಳೆದ ಭಾನುವಾರ ಮತ್ತು ಸೋಮವಾರ ಕೋರೊನಾ ಲಸಿಕೆ ಕುರಿತಂತೆ ಫೇಕ್ ಸುದ್ದಿಯನ್ನು ನಂಬಿದ ದೈತ್ಯ ಮೀಡಿಯಾ ಕಂಪನಿಗಳು ಎಡವಟ್ಟು ಮಾಡಿಕೊಂಡವು. ಆದರೆ ಉತ್ತರಪ್ರಭ ಸತ್ಯ ಪ್ರಕಟಿಸಿತ್ತು. ಈಗ ಅದನ್ನೇ ದೇಶದ ಮುಂಚೂಣಿ ಫ್ಯಾಕ್ಟ್ ಚೆಕ್ ಕಂಪನಿ ಅಲ್ಟ್ ನ್ಯೂಸ್ ಹೇಳಿದೆ.
ಆಶಾ ಕಾರ್ಯಕರ್ತೆಯರಿಗೆ ಜನರು ಸತ್ತ ಮೇಲೆ ಅವರಿಗೆ ದುಡ್ಡು ಕೊಡುತ್ತೀರಾ?
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಕೊರೊನಾ ಸಮಯದಲ್ಲಿ ಪ್ರತಿಭಟನೆಯಿಂದ ರಾಜ್ಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಿವೆ.
ಗದಗ ಜಿಲ್ಲೆ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಡಿಸಿ ಸುಂದರೇಶ ಬಾಬು
ಜಿಲ್ಲೆಯಲ್ಲಿ ಒಂದು ಹಂತಕ್ಕೆ ಕೋರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದ್ದು ತಕ್ಷಣಕ್ಕೆ ಯಾವುದೇ ಬಗೆಯ ಲಾಕ್ ಡೌನ್ ಜಾರಿ ಮಾಡುತ್ತಿಲ್ಲ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.