ಗ್ಯಾಂಗ್ ರೇಪ್ ಪ್ರಕರಣದ ಉಳಿದ ಆರೋಪಿಗಳು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ- ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ಪೊಲೀಸರು ಅದನ್ನು ಪತ್ತೆ ಹಚ್ಚಿ ಗ್ಯಾಂಗ್ ನ್ನು ಹಿಡಿದಿದ್ದಾರೆ.

ಒಂದು ಮಶಿನ್ ಹೊತ್ತ ಟ್ರಕ್: ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ!

ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು. ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

ಸುಪ್ರೀಂಕೋರ್ಟ್ ಆದೇಶ: ಅನಂತ ಪದ್ಮನಾಭ ದೇವಸ್ಥಾನ ಆಡಳಿತ ರಾಜಮನೆತನದ ಹಕ್ಕು

ಈ ಐತಿಹಾಸಿಕ ದೇವಸ್ಥಾನದ ಆಡಳಿತದ ಮೇಲೆ ಹಿಡಿತ ಸಾಧಿಸಲು ಟ್ರಸ್ಟ್ ಒಂದನ್ನು ಸ್ಥಾಪಿಸುವಂತೆ ಕೇರಳ ಹೈಕೋರ್ಟ್ ಕೇರಳ ಸರ್ಕಾರಕ್ಕೆ ನೀಡಿದ್ದ ಆದೇಶ ರದ್ದು.

ಕೊರೋನಾ ಸಂಕಷ್ಟ ವಲಸಿಗರ ವಿಚಾರದಲ್ಲೂ ರಾಜಕಾರಣ..!

ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ.