ಉತ್ತರಪ್ರಭ, ಗದಗ :
ಗದಗ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಸಿ.ಎನ್.ಶ್ರೀಧರ ಇವರನ್ನು ತಕ್ಷಣವೆ ಜಾರಿಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಗೋವಿಂದ ರೆಡ್ಡಿ, (ಐಎಎಸ್)
ಗೋವಿಂದ ರೆಡ್ಡಿ,(ಐಎಎಸ್):
ಹೌದು ಮಂಗಳವಾರ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿರನ್ನು ಕೆವಲ ತಮ್ಮ ಆರು ತಿಂಗಳ ಅವಧಿಯಲ್ಲಿದ್ದ ಇವರನ್ಮು ಯಾವುದೇ ಹುದ್ದೆಗೆ ನೇಮಿಸದೆ ವರ್ಗಾವಣೆ ಮಾಡಲಾಗಿದೆ. ಹಾಗೂ ಇವರ ಸ್ಥಾನಕ್ಕೆ ಸಾಮಾಜಿಕ ಲೆಕ್ಕ ಪರಿಶೋಧಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿದ್ದ ಸಿ.ಎನ್.ಶ್ರೀಧರ ಇವರನ್ನು ನೇಮಕಮಾಡಿ ತಕ್ಷಣವೇ ಜಾರಿಗೆಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿ.ಎನ್.ಶ್ರೀಧರ, (ಐಎಎಸ್):
ಇವರು 2022ರಲ್ಲಿ ಕೆಎಎಸ್ ಇಂದ ಐಎಎಸ್ ಗೆ ಬಡ್ತಿ ಹೊಂದಿದ್ದು, ಇವರು ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ನಿರ್ದೇಶಕರಾಗಿ, ಕಂದಾಯ ಇಲಾಖೆಯಲ್ಲಿ ಸರ್ವೆ ಮತ್ತು ಸೆಟಲ್ಮೆಂಟ್ ಆಯುಕ್ತರಾಗಿ, ಮತ್ತು ಹಾಲಿ ಸಾಮಾಜಿಕ ಲೆಕ್ಕ ಪರಿಶೋಧಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ಹೀಗೆ ಅನೇಕ ಇಲಾಖೆಯ ಆಡಳಿತದಲ್ಲಿ ಅನುಭವಿಗಳಾಗಿದ್ದಾರೆ. ಸದ್ಯ ಇವರ ನಿವೃತ್ತುಗೆ ಕೊನೆಯ ಎರಡು ವರ್ಷ ಬಾಕಿ ಇದ್ದು ಇವರನ್ನು ಗದಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಆದೇಶ ಪ್ರತಿ

Leave a Reply

Your email address will not be published. Required fields are marked *

You May Also Like

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸೇರಿ ಮೂವರು ಎಸಿಬಿ ಬಲೆಗೆ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಚ್.ವೈ.ರುದ್ರಾಕ್ಷಿ ಹಾಗೂ ಅವರ ವಾಹನ ಚಾಲಕ ಫಕ್ಕೀರಪ್ಪ ಪೂಜಾರ, ಜ್ಯೂಸ್ ಸೆಂಟರ್ ಮಾಲಿಕ ಪ್ರತೀಕ್ ಬೇವಿನಕಟ್ಟಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

2ನೆ ವಾರ್ಡ ಕಾಂಗ್ರೆಸ್ ಮತ್ತು 14 ನೆ ವಾರ್ಡ ಜೆಪಿಗೆ ಜಯ

ಗದಗ : ನಗರಸಭೆ ಚುನಾವಣೆ 2ನೆ ವಾರ್ಡ ಕಾಂಗ್ರೆಸ್ ಮತ್ತು 14 ನೆ ವಾರ್ಡ ಬಿ…

ರಾಜ್ಯದಲ್ಲಿಂದು 239 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 239 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5452…

ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರೆಗೌಡ ಪಾಟೀಲ ನಿಧನ

ಉತ್ತರಪ್ರಭಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರೆಗೌಡ ಪಾಟೀಲ (87)ಇಂದು ವಯೋಸಹಜ…