ಪಟ್ಟಣದ ಭೋವಿ ಸಮಾಜದವರು ಹಮ್ಮಿಕೊಂಡ ಸಿದ್ದರಾಮಶ್ವರ ಜಯಂತಿ

ಉತ್ತರಪ್ರಭ

ನರೆಗಲ್ಲ: “ಶರಣರಲ್ಲಿ ಬಸವಣ್ಣವರಷ್ಟೇ ಪ್ರಮುಖರಾಗಿದ್ದವರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರು. ಸಮಾಜದಲ್ಲಿ ಸತ್ಯ, ಶುದ್ಧ ಕಾಯಕದಲ್ಲಿ ತೊಡಗಬೇಕು ಎಂದು ಕರೆ ನೀಡಿದ ಅವರು ಕಾಯಕದ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು” ಎಂದು ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು. ಪಟ್ಟಣದ ಜಕ್ಕಲಿ ರಸ್ತೆಯ ದಿ. ವಾಯ್.ಎಚ್ಚ್.ಶಾಸ್ತ್ರಿಯವರ ಜಮೀನಿನಲ್ಲಿ ಭೋವಿ ಸಮಾಜದವರು ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರರ 851 ನೆ ಜಯಂತಿ ಕಾರ್ಯಕ್ರಮ ಉದ್ಘಾಟನೆ ನೇರವೆರಿಸಿ ಮಾತನಾಡಿದರು.

ಸಮಾಜದ ಬಂಧುಗಳು ಶಿಕ್ಷಣ ವಂತರಾದರೆ ಎನಾದರು ಸಾಧನೆ ಮಾಡಲು ಸಾಧ್ಯ, ಒಂದು ಸಮುದಾಯದವನ್ನು ಮುಂದುವರೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ ಪಟ್ಟಣದ ಭೋವಿ ಸಮಾಜ ಸಂಘಟಿತರಾಗಿ ತುಂಬಾ ಅಚ್ಚು ಕಟ್ಟಾಗಿ ಸಮಾಜವನ್ನು ಹಾಗೂ ಕಾರ್ಯಕ್ರಮವನ್ನು ನಡೆಸಿದ ಕಿರ್ತಿ ಪಟ್ಟಣದ ಭೋವಿ ಸಮಾಜಕ್ಕೆ ಸಲ್ಲುತ್ತದೆ,

ಶಿವಯೋಗಿ ಸಿದ್ದರಾಮೇಶ್ವರರು ಕಾಯಕದಿಂದ ಜ್ಞಾನೋದಯವಾಗಿ, ಕೆರೆಗಳನ್ನು ಕೃಷಿಗೆ ಒತ್ತು ನೀಡಿದ ಕಾಯಕಯೋಗಿ ವಿಚಾರ, ಆಚಾರದಲ್ಲಿ ಸಾಮ್ಯತೆ ಇದ್ದುದರಿಂದ ಬಸವಣ್ಣನವರ ಒಡನಾಟಕ್ಕೆ ಬಂದು ಕಾಯಕ ಸಮಾಜ ನಿರ್ಮಾಣ ಮಾಡಿದರು, ಅವರೊಬ್ಬ ಪವಾಡ ಪುರುಷ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಜನರು ಯಾವಾಗಲೂ ಸೋಮಾರಿತನದಿಂದ ಇರಬಾರದು. ಸದಾಕ್ರಿಯಾಶೀಲರಾಗಿರಬೇಕು, ಲೋಕದಹಿತಕ್ಕಾಗಿ ಶ್ರಮಿಸಬೇಕು ಎಂಬ ವಿಚಾರಧಾರೆಯನ್ನು ಸಮಾಜಕ್ಕೆ ಬೋಧಿಸಿದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರವಿ.ಎಲ್,ಗುಂಜೇಕರ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮುದಾಯದ ಜನರು ಹಿಂದೆಟು ಹಾಕುತ್ತಿದ್ದಾರೆ, ಅದೇ ಯಾಕೆ ಅನ್ನುವುದು ತಿಳಿತಿಲ್ಲ,ನಮ್ಮ ಸಮಾಜದ ಬಂಧುಗಳು ಸ್ವಾಭಿಮಾನ ಬಿಟ್ಟು ಸಂಘಟನೆಗೆ ಕೈಜೋಡಿಸಬೇಕು ಸರಕಾರಿ ಸೌಲಭ್ಯಗಳನ್ನು ಪಡೆಯಬೇಕು ಎಂದರು.

ಸಾನಿಧ್ಯ ವಹಿಸಿ ಆಶ್ರಿವಚನ ದಯಪಾಲಿಸಿದ ಭೋವಿ ಸಂಸ್ಥಾನ ಮಠ, ಬಾಗಲಕೋಟ ಹಾಗೂ ಚಿತ್ರದುರ್ಗದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಗುಡಿಯಲ್ಲಿ ದೇವರ ಕಾಣೋದಕ್ಕಿಂತ ಮನುಷ್ಯನಲ್ಲಿ ದೇವರ ಕಾಣಬೇಕಿದೆ, ಕಾಣೆಕೆ ಹಾಕುತ್ತೇವೆ, ಅನ್ನದಾನ ಮಾಡುತ್ತವೆ, ಎಲ್ಲದಕ್ಕಿಂತ ಮಿಗಿಲಾದ ದಾನ ಯಾವುದೇಂದರೆ ಅದು ಮತ್ತೊಬ್ಬರಿಗೆ ಹಿಂಸೆಯನ್ನು ಕೊಡದೆ ಜೀವನ ಸಾಗಿಸುವದು ಎಂದ ಅವರು ಪಟ್ಟಣದ ನಮ್ಮ ಸಮಾಜದ ಬಂಧುಗಳು ಇಷ್ಟೊಂದು ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಂಡದ್ದು ನಮಗೆ ತುಂಬಾ ಸಂತಸ ತಂದಿದೆ, ಅದೇ ಸಮುದಾಯದ ಜನರು ಸಂಘಟಿತರಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳದರೆ ಸಾಕಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ದಿವ್ಯ ಸಾನಿಧ್ಯವನ್ನು ಸ್ಥಳೀಯ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಈ ಸಂಧರ್ಭದಲ್ಲಿ ರಾಜು ಮಣ್ಣೋಡ್ಡರ, ಮುದಿಯಪ್ಪ ಮುದೋಳ, ವಿದ್ಯಾಧರ ದೊಡ್ಡಮನಿ, ವಿಜಯಲಕ್ಷ್ಮಿ ಚಲವಾದಿ, ಅಕ್ಕಮ್ಮ ಮಣ್ಣೋಡ್ಡರ, ಹನಮಂತಪ್ಪ ಮಣ್ಣೋಡ್ಡರ, ಮುತ್ತಣ್ಣ ಕಡಗದ, ಚಿನ್ನಪ್ಪ ವಡ್ಡಟ್ಟಿ, ಜಯಮ್ಮ ಕಳ್ಳಿ, ಈರಪ್ಪ ಮಣ್ಣೋಡ್ಡರ, ಸಹದೇವ ಕೋಟಿ, ದಾವುದಾಲಿ ಕುದರಿ, ಎಚ್.ವಾಯ್.ಸುಂಕದ, ವೆಂಕಪ್ಪ ಬಳ್ಳಾರಿ, ಶ್ರೀ ಶೈಲಪ್ಪ ಬಂಡವಾಳ, ಸುವರ್ಣಾ ಜೋಗಿನ, ಎಫ್,ಎಸ್,ಕರಿದುರಗನವರ, ಬಸವರಾಜ ಬಳ್ಳಾರಿ, ಇದ್ದರು.

Leave a Reply

Your email address will not be published. Required fields are marked *

You May Also Like

ನಿವೃತ್ತ ಪ್ರಾಚಾರ್ಯ ಡಿ.ಡಿ. ಕಡೇಮನಿ ನಿಧನ

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್…

ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಗದಗ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 228 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು ಈವರೆಗೆ 128 ಕೇಸ್ ಗಳು. 96 ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ಥ್ ಬುಲೆಟಿನ್ ತಿಳಿಸಿದೆ

ಗುಲಾಬ ನಬಿ ಆಜಾದರ ನಿರ್ಣಯ ಕೋಮುವಾದಿ ಶಕ್ತಿಗೆ ಬಲ ತಂದಂತಾಗಿದೆ: ಎಚ್ ಕೆ ಪಾಟೀಲ

ಉತ್ತರಪ್ರಭಗದಗ: ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಎಂಬ ರ್ಯಾಲಿಯ ಮೂಲಕ ಕೋಮುವಾದಿ ಶಕ್ತಿಗಳಿಗೆ ಶಡ್ಡು ಹೋಡೆದು…