ಗದಗ: ಮಾಜಿ ಸಚಿವ ಎಚ್. ವಿಶ್ವನಾಥ ಅವರು ಅನಾಥರಲ್ಲ. ವಿಶ್ವನಾಥ ಸಹ ನಮ್ಮ ಜೊತೆಯಲ್ಲೇ ಇದ್ದಾರೆ. ಬಂದಂಥಹವರಿಗೆ ಒಂದೊಂದು ಅವಕಾಶ ಆಗಿದೆ ಅದೇ ರೀತಿ ಮುಂದಿನದಿನ ವಿಶ್ವನಾಥ ಅವರಿಗೂ ಅವಕಾಶ ಸಿಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು, ನಮಗೆ ಹತ್ತೂ ಜನರಿಗೆ ಒಂದು ಸಾರಿ ಅವಕಾಶ ಆಯಿತು. ಇದೀಗ ನಾಗರಾಜು ಹಾಗೂ ಶಂಕರಗೆ ಅವಕಾಶ ಆಗಿದೆ. ಮುನಿರತ್ನಂ ಹಾಗೂ ಪ್ರತಾಪಗೌಡ ಪಾಟೀಲ್ ಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತೆ ಎಲ್ಲವೂ ಹಂತಹಂತವಾಗಿ ಅವಕಾಶಗಳು ಸಿಗುತ್ತವೆ. ವಿಶ್ವನಾಥ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಎಂಎಲ್ಸಿ ಸ್ಥಾನದ ಆಶ್ವಾಸನೆ ನೀಡಿದ್ದಾರೆ. ಯಾರಿಗೂ ಕೂಡ ಇಲ್ಲಾ ಅನ್ನುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ವಿಶ್ವನಾಥ ಸಮೇತ ಮುಖ್ಯಮಂತ್ರಿಗಳ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದೇವೆ. ಸದ್ಯದಲ್ಲೇ ಮುಂದಿನ ಸಲ ಅವಕಾಶ ಕೊಡ್ತೆವೆ ಅಂತ ಹೇಳಿದ್ದಾರೆ. ಇದಕ್ಕೆ ವಿಶ್ವನಾಥ ಕೂಡ ಒಪ್ಪಿಕೊಂಡಿದ್ದಾರೆ ಎಂದರು.