ಜಕ್ಕಲಿ ಗ್ರಾ. ಪಂ. ಯಲ್ಲಿ ಕಮಿಷನ್‌ ಆರೋಪ : ಗುತ್ತಿಗೆದಾರನ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ

ಉತ್ತರಪ್ರಭ

ನರೆಗಲ್ಲ:‌ ಸಮೀಪದ ಜಕ್ಕಲಿ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಕೆಲಸವನ್ನು ಮಾಡಲು ಚುನಾಯಿತ ಸದಸ್ಯರು ಶೇ. 5 ರಿಂದ 10 ವರೆಗೆ ಕಮಿಷನ್‌ ಬೇಡಿಕೆಯನ್ನು ಇಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಎಸ್.‌ ಎಚ್.‌ ತಳವಾರ ಪಿಡಿಒ ಅವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿ ವೈರಲ್‌ ಆಗುತ್ತಿದೆ.

ಪದವಿಧರ ನಿರುದ್ಯೋಗಿ ಹಾಗೂ 4ನೇ ದರ್ಜೆಯ ಗುತ್ತಿಗೆದಾರನಾಗಿರುವ ಇವರು ನರೇಗಾದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಗ್ರಾ.ಪಂ. ಕೆಲವು ಚುನಾಯಿತ ಸದಸ್ಯರು ಶೇ. 10 ರವರೆಗೆ ಕಮಿಷನ್‌ ನೀಡದಿದ್ದರೆ ಕಾಮಗಾರಿಯ ಬಿಲ್‌ ಮಾಡಿಸಿಕೊಡುವುದಿಲ್ಲ, ಯಾವ ಗುತ್ತಿಗೆದಾರ ಹೆಚ್ಚಿಗೆ ಕಮಿಷನ್‌ ನೀಡುತ್ತಾರೋ ಅವರಿಗೆ ಕೆಲಸ ಕೊಡಿಸುತ್ತೇವೆ ಎಂದು ಒತ್ತಾಯ ಹಾಗೂ ಬೇಡಿಕೆಯನ್ನು ನೀಡುತ್ತಿದ್ದಾರೆ. ಆದ್ದರಿಂದ ಅಂತಹ ಸದಸ್ಯರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಯಾವ ಸದಸ್ಯರು ಕಮಿಷನ್ ಕೇಳಿದ್ದಾರೆ ಎನ್ನುವ ಮಾಹಿತಿ ನಮಗಿಲ್ಲ ಹಾಗೂ ಈ ರೀತಿಯಲ್ಲಿ ಕಮಿಷನ್ ಕೇಳಬಾರದು ಎಂದು ಸಾಮೂಹಿಕವಾಗಿ ಎಲ್ಲಾ ಸದಸ್ಯರಿಗೆ ಹೇಳಲಾಗಿದೆ.

ವೀರಪ್ಪ ವಾಲಿ, ಜಕ್ಕಲಿ ಗ್ರಾ.ಪಂ‌. ಅಧ್ಯಕ್ಷ

Leave a Reply

Your email address will not be published. Required fields are marked *

You May Also Like

ಒಂದೇ ಕುಟುಂಬದ ನಾಲ್ವರಲ್ಲಿ ಕಂಡು ಬಂದ ಕೊರೊನಾ!

ಇಲ್ಲಿಯ ಕೆಂಜಾರು ತಂಗಡಿ ಪ್ರದೇಶದ ಒಂದೇ ಮನೆಯ ನಾಲ್ಕು ಜನರಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ.

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಕಲಬುರಗಿಗೂ ಲಾಕ್ ಡೌನ್ ಸಡಲಿಕೆಗೂ ಸಂಬಂಧವಿಲ್ಲ!!

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಕಾಟ ಇನ್ನೂ ತಪ್ಪುತ್ತಿಲ್ಲ. ಸದ್ಯ ಕೊರೊನಾ ಅರ್ಧ ಶತಕ ಮೀರಿ ಸಾಗುತ್ತಿದೆ. ಜಿಲ್ಲೆಯಾದ್ಯಂತ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ.

ಬಸವ ತತ್ವ, ಧರ್ಮಸೂತ್ರ ಪರಿಪಾಲಿಸಿ ಭವ್ಯ ಹಿಂದು ಧರ್ಮ ಉಳಿವಿಗೆ ಸಂಕಲ್ಪ ಮಾಡಿ- ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ

ಆಲಮಟ್ಟಿ: ಪವಿತ್ರ ಬಸವ ಭೂಮಿಯ ನಾಡಿನಲ್ಲಿ ಇನ್ನೂ ಅಸ್ಪೃಶ್ಯತೆ ಪೂರ್ಣ ತೊಲಗಿಲ್ಲ. ಕಂದಾಚಾರ,ಅನಾಚಾರ,ಮೂಡನಂಬಿಕೆಗಳಂಥ ಮೌಢ್ಯಗಳು ಅಲ್ಲಲ್ಲಿ…