ಉತ್ತರಪ್ರಭ
ಆಲಮಟ್ಟಿ: ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಗೈಯುವ ಸೇವಾ ಮನೋಭಾವ ಸಂತೃಪ್ತಿ, ಗೌರವ ತಂದು ಕೊಡುತ್ತದೆ. ಸಾಂಸ್ಕೃತಿಕ ಪಾರಂಪಾರಿಕ ಜನಪದ ಕಲೆಗಳು ನಮ್ಮ ಬದುಕಿಗೆ ನವ ದಿಸೆಯ ಎನಜಿ೯ ನೀಡಬಲ್ಲವು. ನಿಜಕ್ಕೂ ಅವು ಜೀವನೋತ್ಸಾಹ ಇಮ್ಮಡಿಗೊಳಿಸುತ್ತವೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ಆಲಮಟ್ಟಿ ವಲಯದ ಮುಖ್ಯ ಇಂಜನಿಯರ್ ಹೆಚ್.ಸುರೇಶ ಹೇಳಿದರು.


ರಾಣೆಬೆನ್ನೂರ ಸೌರಭ ಕಲಾ ವೇದಿಕೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ಸಹಯೋಗದೊಂದಿಗೆ ಇಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿಯ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರ ಬಾಯಿಂದ ಬಾಯಿಗೆ ಹರಿದಾಡಿ ನಲಿದಾಡುವ ಜನಪದ ಸಾಹಿತ್ಯ ಸ್ಪರ್ಶದ ಹಾಡು,ಕಲೆಗಳು ಸಹೃದಯಿ ಮನಗಳ ಹೃನ್ಮನ ತಣಿಸುತ್ತವೆ.ಜನಪದ ಕಲೆಗಳು ನಾಡಿನ ಕಲಾಸಿರಿ ಸಂಪತ್ತಗಳಾಗಿವೆ.ಅವು ನಮ್ಮ ಭವ್ಯ ಸಂಸ್ಕೃತಿಯ ಹಳೆ ಬೇರುಗಳಾಗಿವೆ. ಮಾನವೀಯ ಸಂಬಂಧಕ್ಕೆ ಉತ್ತೇಜಿಸುವ ದಿವ್ಯ ಕಲಾ ಪರಂಪರೆಗಳಾಗಿವೆ. ಹೃದಯ ಮನಸ್ಸು ಬೇಸೆಯುವ ಶಕ್ತಿಗಳಾಗಿವೆ. ಜನತೆಯ ನಾಡಿ,ಮಿಡಿತಗಳಲ್ಲಿ ಅವು ಸರಾಗವಾಗಿ ಸೋಕಿವೆ.ಆ ಕಾರಣ ಜನಪದ ವೈಶಿಷ್ಟ್ಯ ಕಲೆಗಳನ್ನು ಎಂದಿಗೂ ಮರೆಯಬಾರದು. ಪೋಷಿಸಿ ಬೆಳೆಸುವ ಮಹೋನ್ನತ ಇಚ್ಚೆ ಸಕಲರಲ್ಲೂ ಉಮ್ಮಳಿಸಬೇಕು ಎಂದರು.
ಜನಪದ ಕಲೆಗಳ ಸಂಸ್ಕೃತಿಯ ಮೌಲ್ಯ ಮುಂದಿನ ಜನಾಂಗಕ್ಕೆ ನೀಡಿ ಪ್ರೇರಿಪಿಸುವುದು ಇಂದಿನ ಅಗತ್ಯವಾಗಿದೆ. ತಂತ್ರಜ್ಞಾನದ ದಿನಮಾನದಲ್ಲಿಂದು ಜನಪದ ಕ್ಷೇತ್ರ ನರಳುತ್ತಿದೆ. ನಾನಾ ಪ್ರಕಾರದ ಕಲೆಗಳು ಜನಮಾನಸದಿಂದ ದೂರಾಗುತ್ತಿವೆ. ಬೆರಳೆಣಿಕೆಯಷ್ಟು ಕಲೆಗಳು ಉಳಿದಿರುವುದು ಬೇಸರ ತಂದಿದೆ. ಕಲೆ,ಸಂಸ್ಕೃತಿಗಳ ಪರಿಚಯ ಮಾಡಿ ಕೊಡುವ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಸಾಗಬೇಕು. ಜತೆಗೆ ಕಲಾವಿದರ ಆಥಿ೯ಕ ಸ್ಥಿತಿ ಸುಧಾರಣೆಯಾಗಬೇಕು. ಅಂದಾಗ ಮಾತ್ರ ಮುಂದಿನ ತಲೆ ಮಾರಿಗೆ ಜನಪದ ಕಲೆಗಳ ಸವಿರುಚಿ ಉಣಬಡಿಸಲು ಸಾಧ್ಯವಾದೀತೆಂದರು.
ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಪೈ ಮಾತನಾಡಿ, ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಪಕ್ಷಿ ಸಂಕುಲ ಹಾಗೂ ವನ್ಯ ಜೀವಿಗಳ ವಾಸ ಸ್ಥಾನವಾಗಿದ್ದು ಪಕ್ಷಿ ಸಂಕುಲದ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಲು ಸಕಾ೯ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಶೀಘ್ರವೇ ಈ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಸಕಾ೯ರ ಅದಿಸೂಚನೆ ಹೊರಡಿಸುವ ವಿಶ್ವಾಸವಿದೆ ಎಂದು ಹೇಳಿದರು.
ಸೌರಭ ಜನಪದ ಕಲಾ ತಂಡದ ರೂವಾರಿ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಕೆ.ಸಿ.ನಾಗರಜ್ಜಿ ಮಾತನಾಡಿ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾನಯನದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೆಲ,ಜಲ,ಪರಿಸರ ಸಂರಕ್ಷಣೆ ಕುರಿತು ತಮ್ಮ ತಂಡ ಬೀದಿ ನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಿದೆ ಎಂದರು.
ಕಳೆದ ಮೂರು ದಶಕಗಳಿಂದ ಸೌರಭ ಜನಪದ ಕಲಾ ವೇದಿಕೆಯು ಜಾನಪದ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃಧ್ಧಿಗಾಗಿ ಶ್ರಮಿಸುತ್ತಿದೆ. ಪ್ರಸ್ತುತ ಮೂಲ ಜನಪದ ಕಲೆ ಮತ್ತು ಕಲಾವಿದರ ಆಥಿ೯ಕ ಮಟ್ಟ ಸ್ಥಿತಿಗತಿ ಶೋಚನೀಯವಾಗಿದೆ. ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ತಮ್ಮ ನೈಜ ಕಲಾ ಪಾಂಡಿತ್ಯ ಮರೆತು ಕೂಲಿ,ಹಮಾಲಿಗಾಗಿ ವಲಸೆ ಹಾದಿ ತುಳಿಯುತ್ತಲ್ಲಿದ್ದಾರೆ. ಹೀಗಾಗಿ ಮೂಲ ಜನಪದ ಕಲೆಗಳಾದ ಹಂತಿ ಪದ,ಬೀಸುವ ಪದ,ಸೋಬಾನ ಪದ,ಅದರಲ್ಲೂ ವಿಶೇಷವಾಗಿ ಸೂತ್ರದ ಗೊಂಬೆಯಾಟ ಸಾಂಸ್ಕೃತಿಕ ಲೋಕ ಆಶ್ವಾಧಿಸುವ ಜನಮನದಿಂದ ದೂರಾಗುತ್ತಿವೆ. ನಿರ್ಲಕ್ಷಿಸಿದರೆ ಭವಿಷ್ಯತ್ತಿನ ಮಕ್ಕಳಿಗೆ ಜನಪದ ಕಲೆಗಳ ಸುಗಂಧ ಪರಿಚಯಿಸುವುದು ಕಷ್ಟಕರವಾದೀತು. ಈ ಕಲೆಗಳಿಗೆ ಹಾಗೂ ಕಲಾವಿದರಿಗೆ ಪುನರುಜ್ಜೀವನ ನೀಡುವುದು ಅತ್ಯಗತ್ಯ. ಆ ದಿಸೆಯಲ್ಲಿ ಸಕಾ೯ರ ಎಚ್ಚೇತ್ತು ಮೂಲ ಜನಪದ ಕಲೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಅಲವತ್ತುಕೊಂಡರು.
ಅಧೀಕ್ಷಕ ಇಂಜನಿಯರ್ ಡಿ.ಬಸವರಾಜ,ಕಾರ್ಯಪಾಲಕ ಇಂಜನಿಯರ್ ಮೋಹನ ಹಲಗತ್ತಿ,ಆಯ್.ಎಲ್.ಕಳಸಾ, ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ, ರಾಜು ಪಿ.ಲಮಾಣಿ, ರೋಡಲ್ ಬಂಡಾ ವಲಯ ಅರಣ್ಯಾಧಿಕಾರಿಗಳು ಸತೀಶ ಗಲಗಲಿ ಇತರರು ವೇದಿಕೆ ಮೇಲಿದ್ದರು.
ಮುಖ್ಯ ಇಂಜನಿಯರ್ ಎಚ್.ಸುರೇಶ ಕಲಾ ತಂಡದ ಅಭಿನಯ ಕುರಿತು ಶ್ಲಾಘಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾ ತಂಡದ ಕಾರ್ಯದರ್ಶಿ ಅರೀಪ್ ಕಿಲ್ಲೆದಾರ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.

Leave a Reply

Your email address will not be published. Required fields are marked *

You May Also Like

ಕೆರೆಗೆ ಮರುಜೀವ ನೀಡಿದ ಧರ್ಮಸ್ಥಳ ಯೋಜನೆ

ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊAಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿಂದು 5007 ಕೊರೊನಾ ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 5007 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85870 ಕ್ಕೆ ಏರಿಕೆಯಾದಂತಾಗಿದೆ.

ಪ್ಲಾಸ್ಮಾ ಚಿಕಿತ್ಸೆಯಿಂದ ಗಂಭೀರ ಪರಿಸ್ಥಿತಿಯ ಸೋಂಕಿತರ ರಕ್ಷಣೆ ಕಷ್ಟ: ಕೇಜ್ರಿವಾಲ್

ದೆಹಲಿ: ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಜೀವವನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಉಳಿಸುವುದು ತೀರಾ ಕಷ್ಟ ಎಂದು…