ಉತ್ತರಪ್ರಭ ಸುದ್ದಿ

ಮಸ್ಕಿ‌: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕನ ಬಗ್ಗೆ ಮಾತನಾಡಲು ಪ್ರತಾಪಗೌಡ ಪಾಟೀಲಗೆ ಯಾವ ನೈತಿಕತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರು ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಉಪ ಚುನಾವಣೆಯಲ್ಲಿ ಪ್ರತಾಪಗೌಡ ಸೋಲಿಗೆ ಕೆ.‌ಶಿವನಗೌಡ ನಾಯಕರೇ ಕಾರಣ ಎಂದು ಪ್ರತಾಪಗೌಡ ಹೇಳಿಕೆ‌ ನೀಡಿರುವುದು ಖಂಡನೀಯವಾಗಿದೆ. ತಾವು ಮೂರು ಭಾರಿ ಶಾಸಕರಾಗಿದ್ದ ಅವಧಿಯಲ್ಲಿ ಸರಿಯಾಗಿ ಆಡಳಿತ ನೀಡದೇ, ಪಕ್ಷದ ಕಾರ್ಯಕರ್ತರ ಕಾಳಜಿ ವಹಿಸದ ಪರಿಣಾಮವಾಗಿ ಸೋಲು ಅನುಭವಿಸಿದ್ದಾರೆ, ಹೊರತು ದೇವದುರ್ಗ ಶಾಸಕ ಶಿವನಗೌಡ ಕಾರಣವಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಕ್ಷೇತ್ರದ ಜನತೆ ಪ್ರತಾಪಗೌಡ ಪಾಟೀಲ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು, ಅಧಿಕಾರ ಅವಧಿಯನ್ನು ಅನುಭವಿಸದೇ ಜನರ ಆದೇಶವನ್ನು ಧಿಕ್ಕರಿಸಿ ಹಣದ ಆಸೆಗಾಗಿ, ಅಧಿಕಾರದ ಹಪಾಹಪಿಗಾಗಿ ಮರಳಿ ಬಿಜೆಪಿಗೆ ಬಂದಿರುವ ಪ್ರತಾಪಗೌಡರಿಗೆ ಕ್ಷೇತ್ರದ ಮತದಾರರು ಉಪ ಚುನಾವಣೆಯಲ್ಲಿತಕ್ಕ ಪಾಠ ಕಲಿಸಿದ್ದಾರೆ, ಆದರೆ ಸೋಲಿನ ಹತಾಸೆದಿಂದಾಗಿ ಅನಗತ್ಯ ಹೇಳಿಕೆಗಳನ್ನು ಕೆ.‌ಶಿವನಗೌಡ ನಾಯಕನ ವಿರುದ್ಧ ನೀಡುವುದು ಸರಿಯಿಲ್ಲ, ಇದೇ ರೀತಿ ಹೇಳಿಕೆ ನೀಡಿದರೆ ಶಿವನಗೌಡ ಅಭಿಮಾನಿ ಬಳಗದಿಂದ ಮಸ್ಕಿಯಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಜೇಂದ್ರಗಡದಲ್ಲಿ ಉಪ ಖಜಾನೆ ಕಚೇರಿ ಆರಂಭ

ಸರ್ಕಾರದ ಹಣಕಾಸಿನ ವ್ಯವಹಾರವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಗಜೇಂದ್ರಗಡ ತಾಲೂಕಿನಲ್ಲಿ ಉಪ ಖಜಾನೆ ಕಚೇರಿ ಆರಂಭಿಸುವ ಮೂಲಕ ತಾಲೂಕಾ ಕೇಂದ್ರಕ್ಕೆ ಮತ್ತೊಂದು ಇಲಾಖೆ ಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕಾ ಕೇಂದ್ರದ ಎಲ್ಲ ಇಲಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಹೇಳಿದರು.

ಮದ್ಯೆದಂಗಡಿ ಪ್ರಾರಂಭಕ್ಕೆ ಲಂಬಾಣಿ ಸಂಘಟನೆ ವಿರೋಧ

ಒಂದು ಕಾಲ ಘಟ್ಟದಲ್ಲಿ ಲಂಬಾಣಿ ಸಮಾಜ ಭಟ್ಟಿ ಸಾರಾಯಿ ಮಾರಾಟ ಮಾಡಿಯೇ ತಮ್ಮ ಬದುಕು ಕಟ್ಟಿಕೊಂಡಿತ್ತು. ಆದರೆ ಇದೀಗ ಸಮಾಜದಲ್ಲಿ ಜಾಗೃತಿ ಮೂಡಿದೆ ಎನ್ನುವುದಕ್ಕೆ ಯುವಕರ ಕಾರ್ಯ ಇದಕ್ಕೆ ಉದಾಹರಣೆಯಾಗಿದೆ.

ರೈತರಿಗೆ ಕಿರುಕುಳ: ಆ. 10 ರಂದು ಅಧಿಕಾರಿಗಳ ವಿರುದ್ಧ ಸತ್ಯಗ್ರಹ

ಉತ್ತರಪ್ರಭ ಸುದ್ದಿ: ಗದಗ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ಇತರಣೆ ಮಾಡದೇ ಇರುವುದು…