ಉತ್ತರಪ್ರಭ ಸುದ್ದಿ
ನಿಡಗುಂದಿ:
ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ ಸೃಷ್ಟಿಸಿದರೆ ಇನ್ನೊಂದೆಡೆ ಮನೆ ಕಳ್ಳತನ,ಕಿಸೆ ಕಳ್ಳತನ,ಬೈಕ್ ಕಳ್ಳತನ ಸೇರಿದಂತೆ ಯಾಮಾರಿಸಿ ದೋಚುವ ಅಪರಾಧ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಈಗ ಆಡು,ಮೇಕೆಗಳ ಮೇಲೆ ಕಳ್ಳಕಾಕರ ಕಣ್ಣುಗಳು ನೆಟ್ಚಿವೆ. ಮೂಕ ಪ್ರಾಣಿಗಳನ್ನು ಸಹ ಕಳ್ಳ ಪೋಕರು ಬಿಡುತ್ತಿಲ್ಲ. ಇಂಥ ಮೂಕ ಜೀವಗಳನ್ನು ಹುಲ್ಲು,ಮೇವು ಆಸೆ ತೋರಿಸಿ ಎಗರಿಸುತ್ತಿದ್ದಾರೆ. ದೋಚುವ ಕಲೆ ಕರಗತಿ ಮಾಡಿಕೊಂಡೇ ಕಳ್ಳತನದ ಫೀಲ್ಡಿಗೆ ಇಳಿದಿರುವಂತಿದೆ ಈ ಪಕ್ಕಾ ಖದೀಮ ಕಳ್ಳರು! ಕಳ್ಳತನದ ಕಾಯಕ ಚೊಕ್ಕಾಗಿ,ನಿಟಾಗಿ ಶುರು ಹಚ್ಚಿಕೊಂಡಿದ್ದಾರೆ. ಆಡುಗಳ ಕಳ್ಳತನ ಆರಂಭಿಸಿರುವ ಪರಿ ಇಲ್ಲೊಮ್ಮೆ ನೋಡಿ!

ನಿಡಗುಂದಿ ಪಟ್ಟಣದ ಹೊರವಲಯದ ಕಮದಾಳ ಪುನರ್ವಸತಿ ಕೇಂದ್ರದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದು ಆಡು ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ಯಾರಿಗೂ ಗೊತ್ತಾಗದಂತೆ ಎರಡು ಆಡುಗಳನ್ನು ಕಳುವು ಮಾಡಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ. ಕಮದಾಳದ ಮುದ್ದಪ್ಪ ಹತಾರ ಅವರಿಗೆ ಸೇರಿದ ಸುಮಾರು 18 ಸಾವಿರ ರೂ ಮೌಲ್ಯದ ಎರಡು ಆಡುಗಳನ್ನು ದುಷ್ಟ ಕಿರಾತಕ ಖದೀಮರು ಕಳುವು ಮಾಡಿದ್ದಾರೆ.

ಸ್ಕಾರ್ಪಿಯೋ ವಾಹನದಲ್ಲಿ ಬಂದ ಆ ಕಳ್ಳರು, ಮನೆಯ ಹೊರಗಡೆ ನಿಂತಿದ್ದ ಆಡಿಗೆ ಸ್ವಲ್ಪ ಹುಲ್ಲು, ಮೇವು ಹಾಕಿದ್ದಾರೆ. ತಿನ್ನುವ ಆಸೆಯಿಂದ ವಾಹನದ ಕಡೆ ಆಡುಗಳು ಬಂದಾಗ ವಾಹನದಲ್ಲಿದ್ದ ಮಹಿಳೆಯೊಬ್ಬಳು ಎರಡು ಆಡುಗಳನ್ನು ಸ್ಕಾರ್ಪಿಯೋ ವಾಹನದ ಹಿಂಬದಿಯಲ್ಲಿ ಎಳೆದು ಹಾಕಿಕೊಂಡಳು ಆ ಚಾಲಾಕಿ ಮಹಿಳೆ ಎಂದು ದೂರದಿಂದ ನೋಡುತ್ತಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಕಾರ್ಪಿಯೋ ವಾಹನದ ಹಿಂಬದಿ ಸೀಟು ತೆಗೆಯಲಾಗಿತ್ತು ಎನ್ನಲಾಗಿದೆ.
ಕಳ್ಳತನ ಮಾಡಿದ ಬಗ್ಗೆ ಗಮನಕ್ಕೆ ಬರುವ ವೇಳೆಯಲ್ಲಿ ವಾಹನ ಪರಾರಿಯಾಗಿತ್ತು.

ಕಳೆದ ವಾರ ಕಮದಾಳದ ಬೇರೆಯವರ ಮೂರು ಆಡುಗಳನ್ನು ಕಳವು ಮಾಡಲಾಗಿತ್ತು. ಆ ಘಟನೆ ಮರೆಮಾಚುವ ಮುನ್ನವೇ ಮತ್ತೇ ಹಾಡುಹಗಲೇ ಕಳ್ಳತನವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ನಿಡಗುಂದಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ನಾನಾ ಕಡೆ ಅಳವಡಿಸಿದ ಸಿಸಿ ಕ್ಯಾಮರಾ ಪರಿಶೀಲಿಸಿ ವಾಹನದ ಮಾಲೀಕರನ್ನು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೊಬೈಲ್ ಕಳ್ಳರ ಹಾವಳಿಯೂ ಹೆಚ್ಚು! ಈ ಭಾಗದಲ್ಲಿ ಮೊಬೈಲ್‌ ಗಳ್ಳರ ಹಾವಳಿ ವಿಪರೀತವಾಗಿದೆ. ನಿಡಗುಂದಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಹತ್ತುವಾಗ ಅರಿವಿಗೆ ಬಾರದಂತೆ ಖದೀಮರು ಚಾಣಾಕ್ಷತನದಿಂದ ಕ್ಷಣಾರ್ಧದಲ್ಲಿ ಮೊಬೈಲ್ ಕದಿಯುತ್ತಾರೆ.

ಅಪ್ರಾಪ್ತ ಯುವಕರೊಂದು ತಂಡವೇ ಇಂಥ ಕೃತ್ಯ ಎಸುಗುವಲ್ಲಿ ನಿಸ್ಸಿಮವಾಗಿದೆ ಎಂದು ಸಾರ್ವಜನಿಕ ಪ್ರಯಾಣಿಕರು ದೂರಿ ಗೋಳು ತೋಡಿಕೊಳ್ಳುತ್ತಾರೆ. ನಿಡಗುಂದಿ ಹಾಗು ಆಲಮಟ್ಟಿ ಸಂತೆ ಮಾರುಕಟ್ಟೆಯಲ್ಲಿ, ಕಾಯಿಪಲ್ಯೆ ಸಂತೆ ದಿನವಂತೂ ಕಳ್ಳರ ಕೈಚಳಕಕ್ಕೆ ಸಂತೆಗೆ ಬರುವ ಜನತೆಯ ಕಿಸೆಯಲ್ಲಿನ ಅದೆಷ್ಟೋ ಮೊಬೈಲ್ ಗಳು ಮಂಗಮಾಯವಾಗಿವೆ. ಈ ಬಗ್ಗೆ ದೂರುಗಳು ವ್ಯಾಪಕ ಕೇಳಿಬಂದಿವೆ.

ವದಂತಿ ಜೋರು! ಜಿಲ್ಲೆಯಲ್ಲಿಗ ಚಿಕ್ಕ ಮಕ್ಕಳ ಕಿಡ್ನ್ಯಾಪ್ ನಡೆಯುತ್ತಿದೆನ್ನಲಾದ ವದಂತಿಗಳು ಹರಡುತ್ತಿವೆ. ಈ ಬಗ್ಗೆ ಅಲ್ಲಲ್ಲಿ ಚಚೆ೯, ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಕೆಲ ಪಾಲಕ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಪುಟ್ಟ ಮಕ್ಕಳನ್ನು ಮನೆಯಿಂದಾಚೆ ಎಲ್ಲೂ ಕಳಿಸಬೇಡಿ. ಮಕ್ಕಳನ್ನು ಅಪಹರಿಸುವರು ಬಂದಿದ್ದಾರೆನ್ನಲಾದ ಚಚೆ೯ಗಳು ಕಾಡ್ಗಿಚ್ಚಿನಂತೆ ಹರಿದಾಡುತ್ತಿವೆ. ಓಣಿ,ಬೀದಿಗಳಲ್ಲಿನ ಜನತೆ ತಮ್ಮ ತಮ್ಮಲ್ಲಿ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಲ್ಲಿದೆ. ಯಾವುದಕ್ಕೂ ಜನ ಸ್ವಯಂ ಹುಷಾರದಿಂದಿರಬೇಕು ಎಂಬುದೇ ಪ್ರಜ್ಞಾವಂತರ ಅಂಬೋಣ.

Leave a Reply

Your email address will not be published. Required fields are marked *

You May Also Like

ಆದರ್ಶ ವಿದ್ಯಾಲಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ತಾಲೂಕಿನ ಇಟಗಿಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು 17.03.2021 ರವರೆಗೆ ವಿಸ್ತರಿಸಲಾಗಿದೆ.

ಕೆಎಎಸ್ ಅಧಿಕಾರಿ ಸುಧಾ ಅವರ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಎಷ್ಟು ಗೊತ್ತಾ?

ಬೆಂಗಳೂರು : ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಬರೋಬ್ಬರಿ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಡರಗಿ ಮಿನಿ ವಿಧಾನಸೌಧಕ್ಕೂ ಶುರುವಾಯಿತೆ ಕೊರೊನಾ ಭೀತಿ..!

ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಮುಂಡರಗಿಯ ಜನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ದಿಂದ ಆತಂಕಕ್ಕೀಡಾಗಿದ್ದಾರೆ. ಆದರೆ ಇಂದು ಪಟ್ಟಣದ ಮಿನಿವಿಧಾನ ಸೌಧ ಕಾರ್ಯಾಲಯ ಗೇಟ್ ಗೆ ಬೀಗ ಹಾಕಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮಹಾಶಕ್ತಿ ಕೇಂದ್ರ ಮುಖಂಡರು ಬಿಜೆಪಿಗೆ ಶಕ್ತಿ: ಪ್ರತಾಪಗೌಡ

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದ ಬಳಿಕ ಮಾತನಾಡಿ, ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಗುರಿ ನಮ್ಮದಾಗಬೇಕು, ಎದುರಾಳಿ ಮುಖಂಡರ ಪ್ರಭಾವ ಇರುವ ಬೂತ್ ಗಳಲ್ಲಿ ಬಿಜೆಪಿ ಲೀಡ್ ಮಾಡಿ ತೋರಿಸಬೇಕು. ಈ ನಿಟ್ಟಿನಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಕೆಲಸ ನಿರ್ವಹಿಸಬೇಕೆಂದು ಹೇಳಿದರು.