ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಶಿಕ್ಷಣ ಇಲಾಖೆಯ ಅಭಿವೃದ್ಧಿ ಕಾರ್ಯಕ್ಕೆ ಇಡೀ ಇಲಾಖೆ, ಶಿಕ್ಷಕರು, ಮಕ್ಕಳು, ಸಂಘಟನೆಗಳು, ಪಾಲಕರು-ಪೋಷಕರು, ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿ.ಸಿ. ನಾಗೇಶ್ ರವರ ನಾಯಕತ್ವದಲ್ಲಿ ಶಿಕ್ಷಣ ಇಲಾಖೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.

ಒಟ್ಟಾರೆಯಾಗಿ ಶಿಕ್ಷಣ ಇಲಾಖೆ ಹಾಗು ಶಿಕ್ಷಕರ ಮತ್ತು ಶಾಲಾ ಮಕ್ಕಳ ಅಭುಧ್ಯೇಯಕ್ಕಾಗಿ ಸಚಿವರು ಕೈಗೊಂಡಿರುವ ಸಮಯೋಚಿತ ಕಾರ್ಯಗಳು ಸ್ತುತ್ಯಾರ್ಹವಾಗಿವೆ ಎಂದರು. ಶೈಕ್ಷಣಿಕ ವಲಯ ಗುಣಮಟ್ಟದೊಂದಿಗೆ ಪ್ರಗತಿಯತ್ ಪ್ರಾಂಜಲ್ಯ ಮನಸ್ಸಿನಿಂದ ಕೊಂಡೊಯ್ಯಲು ಯತ್ನಿಸುತ್ತಿರುವುದು ನವದಿಸೆಯ ಸಂಚಲನ ಎಲ್ಲರಲ್ಲೂ ಮೂಡಿಸುತ್ತಿದೆ ಎಂದು ಅವರು ಸಚಿವ ಬಿ.ಸಿ.ನಾಗೇಶ್ ಅವರ ವ್ಯಕ್ತಿತ್ವ ಬಣ್ಣಿಸಿದ್ದಾರೆ.

ಈ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಶಿಕ್ಷಣ ಸಚಿವರು, ಪ್ರಧಾನ ಕಾರ್ಯದಶಿ೯ಗಳು, ಆಯುಕ್ತರು ಸ್ಪಂದಿಸುತ್ತಿದ್ದು, ಶೇ 25 ಖಾಲಿ ವಗಾ೯ವಣೆ ಇಲ್ಲ ಎಂಬ ಅಂಶ ಹೊರತುಪಡಿಸಿ ಇನ್ನುಳಿದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ, ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೆವೆ ಎಂದರು. ವರ್ಗಾವಣೆಯ ವಿಷಯದಲ್ಲಿಯೂ ಇನ್ನಷ್ಟು ಪ್ರಯತ್ನ ಮುಂದುವರೆಸಲಾಗುತ್ತದೆ ಎಂದು ಶಂಭುಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

6 ತಿಂಗಳ ನಂತರವೂ ಕೇಂದ್ರಕ್ಕೆ ಗೊಂದಲವೇ?: ಕವಾಟವಿರುವ ಎನ್-95 ಮಾಸ್ಕ್ ಅಪಾಯಕಾರಿ’

ಕೇಂದ್ರ ಆರೋಗ್ಯ ಸೇವೆಗಳ ಡೈರೆಕ್ಟರ್ ಜನರಲ್ ಹೊರಡಿಸಿದ ಸುತ್ತೋಲೆ ಈಗ ಜನರನ್ನು ಗೊಂದಲಕ್ಕೆ ತಳ್ಳಿದೆ.ಸದ್ಯ ಬಳಕೆಯಲ್ಲಿರುವ ಕವಾಟ ಅಥವಾ ರಂಧ್ರಗಳಿರುವ ಎನ್-95 ಮಾಸ್ಕ್ ಸೋಂಕು ತಡೆಯಲಾರವು.

ಗದಗ ಜಿಲ್ಲೆಯಲ್ಲಿ ಸೋಂಕು ಸರ್ವ ವ್ಯಾಪಿ: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ಶನಿವಾರ ದಿ. 18 ರಂದು 82 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ…

ಭಾರಿ ಮಳೆಗೆ ಹಾರಿ ಹೋದ ಮೇಲ್ಛಾವಣಿ

ಹಾವೇರಿ: ಜಿಲ್ಲೆಯಾದ್ಯಂತ ಬಿರುಗಾಳಿ ಸಮೇತ ಮಳೆ ಹಿನ್ನೆಲೆ ಬಿರುಗಾಳಿ ಹೊಡೆತಕ್ಕೆ ಸರ್ಕಾರಿ ಶಾಲೆಯ ಚಾವಣಿ ಹಾರಿ…

ಕರ್ನಾಟಕದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಹಾವಳಿ..!

ರಾಜ್ಯದಲ್ಲಿ ಒಂದೇ ದಿನದಲ್ಲಿ 760 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 331 ಸೋಂಕಿತರು ಗುಣಮುಖರಾಗಿದ್ದು, ಆರು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.