ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಗಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ವನಶ್ರೀ ಸ್ಟೋನ್ ಕ್ರಷರ್‌ನಿಂದ ಸುತ್ತಮುತ್ತಲಿನ ರೈತರಿಗೆ ತೊಂದರೆ ಆಗುತ್ತಿದೆ ಎಂದು ರೈತರು ಆರೋಪಿಸಿದರು.

ಈ ಕುರಿತು ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ ಲಕ್ಷ್ಮಣ ಲಮಾಣಿ, ಶಿವಪ್ಪ ಲಮಾಣಿ, ಬಸವರಾಜ ವಡ್ಡರ, ಆರ್.ಟಿ. ಲಮಾಣಿ, ಉಮಲೆಪ್ಪ ಲಮಾಣಿ, ಯಲ್ಲಪ್ಪ ಸಂಕದಾಳ, ಖೇಮಪ್ಪ ಲಮಾಣಿ, ಕ್ರಷರ್‌ನಿಂದ ಹೊರಡುವ ಧೂಳು ಮತ್ತು ರಾಸಾಯನಿಕ ಪದಾರ್ಥಗಳಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ ಎಂದು ತಿಳಿಸಿದ್ದಾರೆ.

ರೈತರು ಕೊಳವೆ ಬಾವಿಗಳು ಬಂದ್ ಆಗಿವೆ. ಕಲ್ಲಿನ ಗುಡ್ಡಗಳನ್ನು ಸಿಡಿಸಿದಾಗ ಅಪಾರ ಪ್ರಮಾಣದ ರಾಸಾಯನಿಕಯುಕ್ತ ಹೊಗೆ ಬರುತ್ತದೆ. ಸಹಿಸಲಸಾಧ್ಯ ಶಬ್ದ ಬರುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸುತ್ತಮುತ್ತಲಿನ ಹೊಲಗಳಲ್ಲಿ ಕಲ್ಲಿನ ತುಂಡುಗಳು ಸಿಡಿದು ಬೀಳುತ್ತವೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳ ಬಳಿ ಹೋದರೆ
ನಮ್ಮನ್ನೇ ಬೈದು ಕಳುಹಿಸುತ್ತಿದ್ದಾರೆ. ಒಂದು ವಾರದೊಳಗೆ ಪರಿಹಾರ ದೊರಕಿಸುವುದರೊಂದಿಗೆ ಹಾಳಾದ ಕೊಳವೆ ಬಾವಿಗಳಿಗೆ ಸೂಕ್ತ ಪರಿಹಾರವನ್ನೂ ನೀಡಬೇಕು. ಇಲ್ಲದಿದ್ದರೆ ಸ್ಥಳದಲ್ಲೇ ಉಪವಾಸ ಸತ್ಯಾಗ್ರಹ ಕೈಗೊಂಡು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ರೈತರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಎಸಿಬಿ ದಾಳಿ ಬಿಜೆಪಿ ಯುವ ಮುಖಂಡ ಬಂಧನ

ಗದಗ: ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ…

ಗದಗ : ಗ್ರಾಮೀಣಾಭಿವೃದ್ಧಿ ವಿವಿ ಪರೀಕ್ಷೆ ಮುಂದೂಡಿಕೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏಪ್ರೀಲ್ 19 ಮತ್ತು 20 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೊನ್ನಪ್ಪ ವಡ್ಡರ ಹೇಳಿದರು.

ನೇತ್ರ ದಾನ

ಉತ್ತರಪ್ರಭ ನೇತ್ರದಾನ ಮಾಡಬೇಕೆಂದು ಕೊಂಡಿದ್ದೇನೆನೊಂದಾಯಿಸಿಕೊಳ್ಳಿ ನನ್ನೆಯ ಹೆಸರನ್ನಉರಿಯುವ ಬೆಂಕಿಯಲಿಟ್ಟರೆ ಬೂದಿಯಾಗುತ್ತೇನೆಮಣ್ಣಿನೊಳಗೆ ಹುಗಿದರೆ ಕೊಳೆತು ಹೋಗುತ್ತೇನೆ ಸತ್ತ…