ಆಲಮಟ್ಟಿ : ಕಾಯಕ ನಿಷ್ಟೆ,ಕಾಯಕ ಪ್ರಜ್ಞೆ ಪದಕ್ಕೆ ಪ್ರಸನ್ನ ಭಾವದ ಶಾಂತೂ ತಡಸಿ ವಿಶೇಷ ಮೌಲ್ಯ ಭರಿಸಿದ ಜೀವ. ಅಪರೂಪದ ವ್ಯಕ್ತಿತ್ವ ಅವರದು.ನಾಲ್ಕು ದಶಕಕ್ಕೂ ಹೆಚ್ಚು ಕಾಲ ಎಸ್.ವಿ.ವಿ. ಶಿಕ್ಷಣ ಸಂಸ್ಥೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಈ ವಿನಯಶೀಲ ನೌಕರ ಬುಧವಾರ ಗಣೇಶ ಪ್ರತಿಷ್ಟಾಪನೆ ಶುಭ ದಿನದಂದು ಸೇವಾ ನಿವೃತ್ತಿ ಹೊಂದಿದ್ದು ಒಂದೆಡೆ ಸಂತೋಷ. ಮತ್ತೊಂದೆಡೆ ನೋವಿನ ತೋಳಲಾಟ !
ಎಲ್ಲರ ಪ್ರೀತಿಗೆ ಪಾತ್ರರಾಗಿ ಸರಳತೆಯ ಭಾವದೊಂದಿಗೆ ಬೆರೆಯುತ್ತಿದ್ದ ಶಾಂತೂ ಸರ್ ಅವರ ಸೇವಾ ನಿವೃತ್ತಿ ಸಂಗತಿ ನಿಜಕ್ಕೂ ಒಡನಾಡಿಗಳ ಹೃದಯ ಭಾರ ಮಾಡಿದ್ದು ಕಟುಸತ್ಯ. ಅವರ ಸಜ್ಜನಿಕೆಯ ವ್ಯಕ್ತಿತ್ವ, ಸಮರ್ಪಣಾ ಭಾವ ಎಂದೂ ಮರೆಯಲಾಗದು. ಹೆಸರಿಗೆ ತಕ್ಕಂತೆ ಶಾಂತ ಸ್ವಭಾವ. ಮನಸ್ಸು ನಿರ್ಮಲ.ಸ್ಪಷ್ಟತೆಯ ಸೇವೆ.ಬೇಜಾರಿಲ್ಲದೇ ವೃತ್ತಿ ನಿಷ್ಟೆ. ಸದಾ ಹಸನ್ಮುಖಿ. ತೇಜಸ್ವಿ ಮೊಗ. ನುಡಿ,ನಡೆ ಪ್ರಭಾವಪೂರ್ಣ. ಬರಹ ವೈಶಿಷ್ಟ್ಯ. ಹೀಗೆ ಹಲವಾರು ಸಾಂಗತ್ಯ ಜೀವನ್ನುದ್ದಕ್ಕೂ ಮೇಳೈಸಿಕೊಂಡು ಸುಮಾರು ನಲವತ್ತೈರಡು ವಸಂತಗಳಕಾಲ ಯಶಸ್ವಿ ಸೇವಾ ಪಯಣ ಪೂರೈಸಿರುವ ಓರ್ವ ಸಮರ್ಥ ಕಾಯಕಯೋಗಿ ಎಂದರೆ ಅತಿಶೋಕ್ತಿವಾಗದು !


ಕಳೆದ ಒಂದು ದಶಕದಿಂದಲೂ ಆಲಮಟ್ಟಿಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಕರಣಿಕರಾಗಿ ಸಾರ್ಥಕ ಸೇವೆ ನೀಡಿ ಸಹೃದಯಿಗಳ ಮನ ಸೆಳೆದು ಹೃದಯ ಗೆದ್ದಂಥ ವಿಭಿನ್ನ ರೀತಿಯ ಹೃದಯವಂತ ಎಫ್.ಎನ್.ತಡಸಿ ಅಥಾ೯ತ ಫಕೀರಪ್ಪ ತಡಸಿ.ಆದರೆ ಎಫೆಕ್ಟ್ ವ್ಹೂ ನಾಮ ಶಾಂತೂ ! ಶಾಲಾ ಮಕ್ಕಳಾದಿಯಾಗಿ ಎಲ್ಲರೂ ಪ್ರೀತಿ ಮೆಚ್ಚುಗೆಯಿಂದ ಕರೆಯಲ್ಪಡುತ್ತಿದ್ದ ಹೆಸರೇ ಶಾಂತೂ ಶಾಂತೂ ಶಾಂತೂ..! ಅಷ್ಟೊಂದು ಅಕ್ಕರೆ ! ಪ್ರೀತಿ ಸಿಂಚನದ ಸಕ್ಕರೆ ಆ ಹೆಸರಲ್ಲಿ ತುಂಬಿದಂತಿತ್ತು ! ಇಂಥ ಸ್ನೇಹಜೀವಿ,ಅಜಾತಶತ್ರು ನಮ್ಮಯ ಕಂಗಳಲ್ಲಿ ಸೆರೆಯಾಗುವುದು ಅತಿ ವಿರಳ !
ಸೇವಾಭಾವದ ಕ್ರಿಯಾಶೀಲ ಗುಣದಾತ ಶಾಂತೂ ಅವರ ಸೇವೆ ಇನ್ನೂ ಇಲ್ಲಿ ಮುಂದುವರೆಯಲಿ ಎಂಬ ಆಶಯ ಕಿರಣ ಹೊತ್ತಿರುವ ಅದೆಷ್ಟೋ ಮನಗಳಿವೆ. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಪಟ್ಟಣಶೆಟ್ಟರ ಸರ್ ಅವರು ಸಹ ಶಾಲೆಗೆ ಈಚೆಗೆ ಭೇಟಿಯಿತ್ತಾಗ ಇದೇ ಇಂಗಿತ ವ್ಯಕ್ತಪಡಿಸಿದ್ದು ಗಮನಾರ್ಹ ! ಮುಖ್ಯೋಪಾಧ್ಯಾಯರಾದ ಜಿ.ಎಂ.ಕೋಟ್ಯಾಳ ಹಾಗು ಪ್ರಾಚಾರ್ಯರಾದ ಹೇಮಗಿರಿಮಠ ಅವರದು ಇದೇ ಅಭಿಮತ ! ಈ ಬಹುಮತದ ಭಾವನೆಗಳಿಗೆ ಶಾಂತೂಜಿಯವರು ಸ್ಪಂದಿಸಿ ಅಭಿಲಾಷೆ ಈಡೇರಿಸಲು ಮುಂದಾಗಬೇಕು. ನಂಬಿಕೆ ಗಟ್ಟಿಗೊಳಿಸಲಿ ಎಂಬ ಆಶಯ ಗುರು ವೃಂದ ಹೊಂದಿದೆ !


ವೃತ್ತಿಯಿಂದ ನಿವೃತ್ತರಾಗಿದ್ದಾರಷ್ಟೇ. ಹೃದಯ ಮನದಿಂದಲ್ಲ ! ದೇವರು ಸಕಲ ಆಯುರಾರೋಗ್ಯ ಕೊಟ್ಟು ನೆಮ್ಮದಿ, ಸಂತಸ ಶಾಂತೂ ತಡಸಿ ಹಾಗು ಕುಟುಂಬ ಪರಿವಾರಕ್ಕೆ ದಯಪಾಲಿಸಲಿ ಎಂಬ ಶುಭ ಹಾರೈಕೆ ಇಲ್ಲಿನ ಸಮಸ್ತ ಗುರು ಬಳಗದವರು ಹರಿಸಿದ್ದಾರೆ.
ಪ್ರೀತಿಯ ದ್ಯೋತಕ ಸಂಮಾನ…! ಹಳಕಟ್ಟಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಶಾಂತೂ ತಡಸಿ ದಂಪತಿಗಳಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಗುರುಗಳು, ಪ್ರಾಚಾರ್ಯರು,ಶಾಲಾ ಸಿಬ್ಬಂದಿ ಬಳಗ,ವಿದ್ಯಾರ್ಥಿ ಸಮೂಹ,ಅಕ್ಷರ ದಾಸೋಹ ಮಾತೆಯರ ಸಮೂಹ ಈ ಸ್ಮರಣೀಯ ಅಭೂತಪೂರ್ವ ದೃಶ್ಯಕ್ಕೆ ಸಾಕ್ಷಿಯಾದರು. ಶಾಂತೂ ಅವರ ಸೇವೆ ಇಲ್ಲಿ ಮುಂದುವರೆಯಲಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿಯುತ್ತಾರೆ
ಬರಹ : ಗುಲಾಬಚಂದ ಜಾಧವ

Leave a Reply

Your email address will not be published. Required fields are marked *

You May Also Like

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!

ಅತಿಥಿ ಉಪನ್ಯಾಸಕರು: ಅವೈಜ್ಞಾನಿಕ ಹೊಸ ಆದೇಶ ರದ್ದು ಪಡಿಸಲು ಆಗ್ರಹ

ಉತ್ತರಪ್ರಭ ಸುದ್ದಿ ನರೇಗಲ್:‌ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ…

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ: ಸಚಿವ ಸುರೇಶ ಕುಮಾರ್

ನಿರೀಕ್ಷೆಗಿಂತ ಮೊದಲೇ ಪಿಯುಸಿ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.