ಉತ್ತರಪ್ರಭ ಸದ್ದಿ
ಆಲಮಟ್ಟಿ: ಇಲ್ಲಿಗೆ ಸಮೀಪದ ಸಿದ್ದನಾಥ ಸಕಾ೯ರಿ ಪ್ರೌಢಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತೋತ್ಸವ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಎಸ್.ಡಿ.ಎಂ.ಸಿ.ಅಧ್ಯಕ್ಷ ರೇವಣಪ್ಪ ಬೀರಕಬ್ಬಿ ಅಧ್ಯಕ್ಷತೆ ವಹಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶಾಭಿಮಾನದ ಒಗ್ಗಟ್ಟು ಎಲ್ಲ ಜನಸ್ತೋಮ ಸಾರಬೇಕು. ವಿವಿಧತೆಯಲ್ಲಿ ಏಕತೆ ಇದ್ದರೆ ಭಾರತೀಯರ ಮೌಲ್ಯ ಹಾಗು ದೇಶ ಘನತೆ,ಗೌರವ ಹೆಚ್ಚಾಗುವುದು ಎಂದರು.


ಮುಖ್ಯ ಅತಿಥಿ ಮಾಜಿ ತಾಪಂ ಸದಸ್ಯ ಶಿವಾನಂದ ಅಂಗಡಿ ಮಾತನಾಡಿ, ಅನೇಕ ಹುತಾತ್ಮರ ತ್ಯಾಗ, ಬಲಿದಾನದ ಪ್ರತೀಕ ನಮಗೆ ಸ್ವಾತಂತ್ರ್ಯ ದೊರೆತಿದೆ. ಪ್ರತಿಯೊಬ್ಬ ಭಾರತೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ದೇಶದ ಮಹನೀಯರ ಸ್ಮರಣೆ ಮನಸ್ಸಾಪೂರಕ ಮಾಡಬೇಕು. ಆ ಚೇತನ ಶಕ್ತಿಗಳೇ ಚೆಲ್ಲಿದ ರಕ್ತ, ಪ್ರಾಣದಿಂದ ಇಂದು ನಾವುಗಳು ನೆಮ್ಮದಿಯಿಂದ ಉಸಿರಾಡುತ್ತಿದ್ದೆವೆ. ನಮ್ಮ ದೇಶ ಬಹು ಗ್ರಾಮಗಳನ್ನು ಹೊಂದಿರುವ ಬಲಿಷ್ಠ ದೇಶ. ಗ್ರಾಮಗಳ ಉನ್ನತಿಗೆ, ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರ. ಆ ದಿಸೆಯಲ್ಲಿ ಯುವಜನತೆ ಗುಣ ಮಟ್ಟದ ಶಿಕ್ಷಣ ಪಡೆದು ಸ್ವಗ್ರಾಮಗಳ ಶ್ರೇಯೋಭಿವೃದಿಗೆ ಸಂಕಲ್ಪ ಮಾಡಬೇಕು.ಸಮಾಜಕ್ಕಾಗಿ ಪರೋಪಕಾರ ಗುಣ ಹೊಂದಬೇಕು. ಇಲ್ಲಿನ ಶಾಲಾಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದರು.
ಸಹ ಶಿಕ್ಷಕ ವಿ.ಎಸ್.ಕಾಖಂಡಕಿ, ಯಲ್ಲಪ್ಪ ಬೇಲಿ ಮಾತನಾಡಿ, ಮಕ್ಕಳೇ ಭವಿಷ್ಯತ್ತಿನ ಕಿರಣಗಳು. ಅವರಲ್ಲಿ ಒಳ್ಳೆಯ ಸಂಸ್ಕಾರ,ಸಂಪ್ರದಾಯ, ಸಂಸ್ಕೃತಿ,ಭವ್ಯ ಭಾರತ ದೇಶದ ಪರಿಕಲ್ಪನೆ ಮೂಡಿಸುವುದು ಇಂದಿನ ಅಗತ್ಯ ಎಂದರು. ಶಾಲಾ ಅಭಿವೃದ್ಧಿಗೆ ದೇಣಿಗೆ ನೀಡಿದ ಶಿಕ್ಷಣಾಭಿಮಾನಿಗಳಿಗೆ ಹಾಗು ಸೈನಿಕರಿಗೆ ಸನ್ಮಾನ ನಡೆಯಿತು. ಸ್ವಾತಂತ್ರ್ಯ ದಿನದ ನಿಮಿತ್ಯ ಶಾಲಾ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ, ಭಾಷಣ, ಗಾಯನ, ರಂಗೋಲಿ ಮೊದಲಾದ ಸ್ಪಧೆ೯ ಆಯೋಜಿಸಲಾಗಿತ್ತು. ಸ್ಪಧಾ೯ ವಿಜೇತರಿಗೆ ಪ್ರಶಸ್ತಿ ಪುರಸ್ಕಾರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು. ಕುಮಾರಿ ಮಲ್ಲಮ್ಮ, ಪವಿತ್ರ ಸಂಗಡಿಗರು ಪ್ರಾರ್ಥನೆ ಹೇಳಿದರು. ಪ್ರಭಾರಿ ಮುಖ್ಯ ಶಿಕ್ಷಕ ಆರ್.ಎಸ್.ಹಕೀಮ ಸ್ವಾಗತಿಸಿದರು. ಚಿತ್ರಕಲೆ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಹೆಚ್.ಸಿ.ಹೂಗಾರ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳು ನಡೆಯಿಸಿಕೊಟ್ಟರು. ಸಿ.ಹೆಚ್.ಮಟ್ಯಾಳ ವಂದಿಸಿದರು.