ಗದಗ: ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಮಹಾತ್ಮ ಗಾಂಧೀಜಿಯವರಿಗೆ ತಮ್ಮ ಕೈಯಾರ ಅಡುಗೆ ಮಾಡಿದ ಬಡಿಸಿದ ಮಹಾತಾಯಿ ಸದ್ಯ ಬೆಟಗೇರಿ ನಿವಾಸಿಯಾಗಿರುವ ಮಾತೋಶ್ರೀ ಶ್ರೀಮತಿ ಶತಾಯುಷಿ ಶಾಂತಾಬಾಯಿ ಸುಬ್ಬರಾವ್ ವರ್ಣೆಕರ ಇವರನ್ನು ಅವರ ಸ್ವಗೃಹದಲ್ಲಿ ಸತ್ಕಾರ ಮಾಡುವ ಭಾಗ್ಯ ನಮಗೆ ಲಭ್ಯವಾಗಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ಸ್ವಾತಂತ್ರ‍್ಯ ಅಮೃತ ಮಹೋತ್ಸವ ಅಂಗವಾಗಿ ಶಾಂತಾಬಾಯಿ ಅವರನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನಿಸಿ, ಗೌರವಿಸಿ ನಂತರ ಮಾತನಾಡಿದರು. “ಮಹಾತ್ಮ ಗಾಂಧಿಜೀಯವರು, ಉಪ್ಪಿನ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ನಮ್ಮ ಮನೆಗೆ ಬಂದಿದ್ದರು” ಎಂದು ಇಳಿವಯಸ್ಸಿನ ಅಜ್ಜಿ ಶಾಂತಾಬಾಯಿಯವರು ಅನಿಲ ಮೆಣಸಿನಕಾಯಿಯವರಿಗೆ ತಮ್ಮ 103 ಇಳಿವಯಸ್ಸಿನ ಅಜ್ಜಿ ಖಡಕ್ಕಾಗಿ ಮಾತನಾಡಿ ಹೇಳಿದರು. ಸೋದರ ಸಂಬಂಧಿಗಳಿಬ್ಬರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಅವರ ಜೊತೆಗೆ ಮಹಾತ್ಮಗಾಂಧಿಜಿಯವರು ಅನೇಕ ದಿನಗಳ ಕಾಲ ಅಂಕೋಲಾ ಸೇರಿದಂತೆ ಸುತ್ತಮುತ್ತಲಿನ ನಗರ ಪ್ರದೇಶದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಎಂದು ತಿಳಿಸಿದರು. ಮಹಾತ್ಮಾ ಗಾಂಧಿಜಿಯವರು ಅಂಕೊಲಾಕ್ಕೆ ಉಪ್ಪಿನ ಸತ್ಯಾಗ್ರಹಕ್ಕಾಗಿ ಬಂದಾಗ ನಮ್ಮ ಮನೆಯಿಂದ ಅವರಿಗೆ ಅಡುಗೆ ಸಿದ್ಧಪಡಿಸಿ ಅನೇಕ ದಿನಗಳಕಾಲ ನೀಡಿದ್ದೆನೆ. ಗಾಂಧೀಜಿಯವರಿಗೆ ದಿನಾಲೂ ಊಟದ ವ್ಯವಸ್ಥೆ ನಾನೇ ಮಾಡುತ್ತಿದ್ದೆ . ಪ್ರತಿದಿನ ಅಡುಗೆ ಸಿದ್ಧಪಡಿಸಿ ತಮ್ಮ ಸಹೋದರರ ಕಡೆಯಿಂದ ಗಾಂಧೀಜಿಯವರಿಗೆ ಊಟದ ಬುತ್ತಿ ಕಳುಸುತ್ತಿದ್ದರು. ಎಂದರು. ಈಗ ಆ ಮಾಹಾತಾಯಿ ಅವರು ಸ್ವಾತಂತ್ರ್ಯ ಸಂಬಂಧಿಗಳಿಬ್ಬರು ಅಂಕೊಲಾದಿಂದ ಗದಗ ಭಾಗದಲ್ಲಿ ಬಂದು ನೆಲೆಸಿದ್ದಾರೆ.
ನಮ್ಮ ಗದಗನಲ್ಲಿ ಸಹ ಸ್ವಾತಂತ್ರ‍್ಯ ಸಿಕ್ಕನಂತರ ಮೊದಲ ಬಾವುಟವನ್ನು ನಮ್ಮ ಗದಗ ಬೆಟಗೇರಿಯಲ್ಲಿ ತಯಾರಿಸಿದ ಬಾವುಟವನ್ನು ಹಾರಿಸಿದ್ದರು. ಇಂತಹ ನೆಲದಲ್ಲಿ ನಾವೆಲ್ಲ ನೆಲೆಸಿರುವುದು ನಮ್ಮ ಭಾಗ್ಯ ಅಲ್ಲದೆ ಇಂತಹ ಮಹಾತಾಯಿಯನ್ನು ನೋಡುವುದಾಗಲಿ, ಅವರಿಗೆ ಸತ್ಕರಿಸಿ ಗೌರವಿಸುವುದು ಮಹಾತ್ಮ ಗಾಂಧೀಜಿಯವರನ್ನು ಗೌರವಿಸಿದಷ್ಟು ಸಂತೋಷವಾಗುತ್ತಿದೆ. ಎಂದು ಅನಿಲ ಮೆಣಸಿನಕಾಯಿ ಹೇಳಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಮಾದುಸಾ ಮೆಹರವಾಡೆ, ಹಿರಿಯ ಮುಖಂಡರಾದ ಕಾಂತಿಲಾಲ ಬನ್ಸಾಲಿ, ಉದಯ ವರ್ಣೇಕರ್, ರಮೇಶ ಹತ್ತಿಕಾಳ, ರಾಜು ಕಣವಿ, ಮುತ್ತಪ್ಪ ಖಾನಾಪೂರ, ಈರಣ್ಣ ಜ್ಯೋತಿ, ಬಸಣ್ಣ ಬೇಲೇರಿ, ಮಂಜುನಾಥ ಮ್ಯಾಗೇರಿ, ಮಂಜುನಾಥ ತಳವಾರ, ಡಿ.ಆರ್. ಟಿಕಾನದಾರ, ಪರಮೇಶ ನಾಯಕ್, ಸತೀಶ ಮುದಗಲ್ಲ, ಆನಂದ ಗುರುಸ್ವಾಮಿ, ಮಂಜುನಾಥ ಸ್ವಾಮಿ, ಬಾಬು ಯಲಿಗಾರ, ಪ್ರಭು ಪಾಟೀಲ, ಉಮೇಶ ಹಡಪದ, ವಿಜಯಲಕ್ಷ್ಮಿ ಮಾನ್ವಿ, ಜಯಶ್ರೀ ಉಗಲಾಟ, ವಂದನಾ ವರ್ಣೇಕರ್, ರತ್ನಾ ಕುರುಗೋಡ, ಚನ್ನಮ್ಮ ಹುಳಕನ್ನವರ, ಕಮಲಾಕ್ಷಿ ಬಳಿಶೆಟ್ರ, ಜಯಶ್ರೀ ಅಣ್ಣಿಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.