ಉತ್ತರಪ್ರಭ ಸುದ್ದಿ

ಆಲಮಟ್ಟಿ: ಜಾತಿ, ಮಥ, ಪಂಥ, ಧರ್ಮಕ್ಕಿಂತ ದೇಶ ದೊಡ್ಡದು. ಆ ಅಭಿಮಾನ,ಗೌರವಯುಳ್ಳ ದೇಶ ಪ್ರೇಮ ಇಂದಿನ ಯುವ ಜನಾಂಗದಲ್ಲಿ ಸದಾ ಚಿರಾಯುವಾಗಿ ಮೂಡಿಬರಲಿ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು. ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸೋಮವಾರ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ ಪ್ರತಿಫಲದಿಂದ ಇಂದು ನಾವು ಅಮೃತ ಮಹೋತ್ಸವದ ಸವಿಘಳಿಗೆ ಅನುಭವಿಸುತ್ತಿದ್ದೆವೆ ಎಂದರು. ಯುವಜನತೆಯಲ್ಲಿ ದೇಶದ ಒಳಿತಿಗಾಗಿ ಅಂತಃಶಕ್ತಿ ಜಾಗೃತವಾಗಬೇಕು. ಸ್ಪಷ್ಟ ಇಚ್ಚೆ ಇಲ್ಲಿ ವಿನಿಯೋಗವಾಗಬೇಕು. ಇಂದಿನ ಯುವಜನಾಂಗವೇ ದೇಶದ ವರ್ತಮಾನ.ಭವಿಷ್ಯ ನಿರ್ಧರಿಸಬಲ್ಲರು. ಅವರಿಂದಲೇ ದೇಶದ ಅದೃಷ್ಟ ಚಿತ್ರಣ ಬದಲಾವಣೆ ಕಾಣಲು ಸಾಧ್ಯ ಎಂದರು.
ಧನಾತ್ಮಕ ಚಿಂತನೆ ದೇಶಕ್ಕೆ ಹಾಗು ಸಮಾಜಕ್ಕೆ ಪೂರಕವಾಗಿವೆ. ರಾಷ್ಟ್ರ ಚಿಂತನೆಗಳೇ ಯುವಶಕ್ತಿಗೆ ಸ್ಪೂರ್ತಿ ಮತ್ತು ಪ್ರೇರಣೆಯ ಸೂತ್ರಗಳಾಗಿವೆ. ಯುವಜನತೆಯ ಹೃದಯದಲ್ಲಿ ದೇಶಭಕ್ತಿ ಭಾವನೆ ಉಚ್ಚಾಯ ಮಟ್ಟದಲ್ಲಿ ಮೊಳಗಬೇಕಲ್ಲದೇ ಸಮರ್ಪಣಾ ಭಾವದಿಂದಲೇ ರಾಷ್ಟ್ರೋನ್ನತಿ ಎಂದರು.


ಸ್ವಾತಂತ್ರ್ಯದ ಕಿಚ್ಚಿನಲ್ಲಿ ಮಡಿದ ಲಕ್ಷಾಂತರ ವೀರಯೋಧರ,ಮಹಾತ್ಮರ ರೋಚಕ ಚರಿತ್ರೆ ಮಕ್ಕಳಿಗೆ ಪರಿಚಯಿಸಿ ಸ್ಮರಣೆ ಮಾಡುವುದು ಅತ್ಯಗತ್ಯ. ಎಲ್ಲರಲ್ಲೂ ರಾಷ್ಟ್ರೀಯ ಭಾವೈಕ್ಯತೆ ಚಿಗುರಬೇಕು ಎಂದರು.‌ ಭಾರತೀಯ ಮೌಲ್ಯಕ್ಕೆ ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಇದೆ. ಅಂದಿನ ಗುರು ಹಿರಿಯರು ಕಂಡ ಗುರಿಗಳು ಹಿಮಾಲಯದಷ್ಟು ಎತ್ತರ. ಕನಸುಗಳು ಅಸಂಖ್ಯಾತ. ನಮ್ಮ ದೇಶದ ಶಕ್ತಿ ಹಿಂದೂ ಮಹಾಸಾಗರಕ್ಕಿಂತಲೂ ದೊಡ್ದದು. ಪ್ರಯತ್ನ ಗಂಗೆಕ್ಕಿಂತಲೂ ಪರಿಶುದ್ಧ. ಋಷಿ ಮುನಿಗಳು, ಸಾಧು ಸಂತರ ತಪಸ್ಸು, ದೇಶವಾಸಿಗಳ ತ್ಯಾಗ ಬಲಿದಾನದ ಕ್ರಾಂತಿ ಇತಿಹಾಸ ಕೇಳಿದರೆ ಮೈಮನಗಳೆಲ್ಲ ರೋಮಾಂಚನಗೊಳ್ಳುತ್ತದೆ. ಸ್ವಾತಂತ್ರ್ಯಕ್ಕಾಗಿ ನಿದ್ದೆಯಿಲ್ಲದ ಅದೆಷ್ಟೋ ರಾತ್ರಿಗಳು, ಬ್ರಿಟಿಷ್ ರ ಚಿತ್ರಹಿಂಸೆಯಿಂದ ನರಳಿ ಎದೆಗುಂದದೆ ನಡೆಸಿದ ದಿಟ್ಟ ಹೋರಾಟ ಇವೆಲ್ಲವೂ ಇಂದು ನಮಗೆ ಚತೋಹಾರಿ ಸ್ಮರಣೀಯವಾಗಿವೆ. ಸ್ವತಂತ್ರ ಭೂಮಿಗಾಗಿ ಪೂರ್ವಜರ ತ್ಯಾಗ, ಇತಿಹಾಸ ಒಂದು ತೆರೆದ ಅಭೂತಪೂರ್ವ ಅಧ್ಯಾಯವಾಗಿವೆ. ಪೂರ್ವಜರ ಇಂಥ ಅದ್ಬುತ ಚಿಂತನೆ, ಆದರ್ಶ ಸಂಕಲ್ಪಗಳಿಗೆ ಕಟಿಬದ್ದರಾಗಿ ನಾವೆಲ್ಲರೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕು ಎಂದರು.
ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ, ಡಿಸ್‌ಪ್ಲೇ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಇದೇ ಸಂದರ್ಭದಲ್ಲಿ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶ ಭಕ್ತಿ ಪ್ರೀತಿಯಲ್ಲಿ ದುಂಬಿಗಳಾಗಿ ನಲಿದಾಡಿದರು. ಈ ಪುಟ್ಟ ಮಕ್ಕಳು ಬಣ್ಣ ಬಣ್ಣದ ಉಡುಗೆ,ತೊಡುಗೆಯಲ್ಲಿ ಮುದ್ದಾಗಿ ಕಂಗೊಳಿಸಿದರೆ ಗುರುಮಾತೆ ಸಮೂಹ ರಾಷ್ಟ್ರಧ್ವಜದ ತ್ರಿವರ್ಣ ಬಣ್ಣದ ಉಡುಗೆ ಧರಿಸಿ ವಿಶೇಷ ಆಜಾದಿ ಕಾ ಅಮೃತ ಮಹೋತ್ಸವ ವೈವಿಧ್ಯದಿಂದ ಆಚರಿಸಿ ಕಲರ್ ಫೂಲ್ ಮೆರಗು ತಂದರು. ಮುಖ್ಯೋಪಾಧ್ಯಾಯನಿ ತನುಜಾ ಪೂಜಾರಿ,ಗುರುಮಾತೆಯರಾದ ಸಿದ್ದಮ್ಮ ಅಂಗಡಿ, ಕವಿತಾ ಮರಡಿ,ಕಾಂಚನಾ ಕುಂದರಗಿ,ಸರೋಜಾ ಕಬ್ಬೂರ,ಶೈನಾಬಾನು ಬಾಗಲಕೋಟ, ಮಂಜುಳಾ ಸಂಗಾಪುರ, ಶಂಕ್ರಮ್ಮ ಗುಳೇದಗುಡ್ಡ,ಸುನೀತಾ ಮಹೇಂದ್ರಕರ,ಪಲ್ಲವಿ ಸಜ್ಜನ, ಕವಿತಾ ಮಠದ, ಅಡುಗೆ ಮಾತೆಯರಾದ ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ,ದಾನಾಬಾಯಿ ಲಮಾಣಿ, ಗೋಪಾಲ ಬಸಪ್ಪ ಬಂಡಿವಡ್ಡರ, ಶಾಂತೂ ತಡಸಿ, ಆರ್.ಎಂ.ರಾಠೋಡ ಇತರರಿದ್ದರು. ಮಕ್ಕಳಿಗೆ ಡಿಸ್‌ಪ್ಲೇ ನೃತ್ಯ ಹೇಳಿಕೊಟ್ಟ ಸಾಗರ ಹಾಗು ಶಾನೂರ್ ಅವರಿಗೆ ಶಾಲೆ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಸ್ವಾಗತಿಸಿದರು. ಎಸ್.ಎಚ್.ನಾಗಣಿ ಪಥಸಂಚಲನ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

You May Also Like

ಮಾಜಿ ಸಚಿವ ಡಾ.ಮಮ್ತಾಜ್ ಇನ್ನಿಲ್ಲ

ಬೆಂಗಳೂರು: ಮಾಜಿ ಸಚಿವ, ನಿವೃತ್ತ ಪ್ರೊಫೆಸರ್ ಮಮ್ತಾಜ್ ಅಲಿಖಾನ್ (94) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ!

ನವದೆಹಲಿ : ಇಂದು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

ಲಾಕ್ ಡೌನ್ ಸಡಿಲಿಕೆಗೆ ಹಾವೇರಿ ಜನ ಡೋಂಟ್ ಕೇರ್

ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟುಕೆಗಳಿಗೆ ಸಡಿಲಿಕೆ ನೀಡಲಾಗಿದೆ. ಆದ್ರೆ ಗ್ರೀನ್ ಝೋನ್ ಸಡಿಲಿಕೆಗೂ ಕೆಲವೊಂದು ನಿಯಮಗಳಿಗೆ ಹಾವೇರಿ ಜನ ಕ್ಯಾರೆ ಎನ್ನುತ್ತಿಲ್ಲ.

ನಿಮ್ಮೊಡನಿದ್ದೂ ನಿಮ್ಮಂತಾಗದೆ

ಪ್ರಸ್ತುತ ಸಂದರ್ಭದಲ್ಲಿ ನಿಸಾರ್ ಅಹ್ಮದ್ ಅವರು ರಚಿಸಿದ ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವ ಕವನ ಇಂದಿನ ದಿನಮಾನಗಳಲ್ಲಿ ವಾಸ್ತವಕ್ಕೆ ಹತ್ತಿರವಾಗಿದ್ದು, ನಮ್ಮನ್ನಗಲಿದ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ‘ಉತ್ತರ ಪ್ರಭ’ದ ನುಡಿ ನಮನ…