ಉತ್ತರಪ್ರಭ ಸುದ್ದಿ
ನಿಡಗುಂದಿ:
ಆಧುನಿಕ ಯುಗದಲ್ಲಿ ರಂಗಭೂಮಿ ಕಲಾವಿದರು ಮೂಲೆ ಗುಂಪಾದರು ಎಂಬ ಮಾತೆಲ್ಲ ಶುದ್ಧ ಸುಳ್ಳು. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ಕೂಡ ರಂಗಭೂಮಿ ತನ್ನ ಗತ ಪರಂಪರೆಯೊಂದಿಗೆ ವಾಸ್ತವಿಕ ಜಗತ್ತಿನ ಆವಿಷ್ಕಾರಗಳನ್ನೆಲ್ಲ ಮೈ ಗೂಡಿಸಿಕೊಂಡು ಮರುಜನ್ಮ ಪಡೆದಿದೆ ಎಂದು ಹಿರಿಯ ಅಪ್ಪಟ ಸ್ತ್ರೀ ರಂಗ ಕಲಾವಿದ ವಿಜಯಕುಮಾರ್ ಮಾನ್ವಿ ಹೇಳಿದರು. ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಹಾಗೂ ಮತ್ತರ‍್ವ ಹಿರಿಯ ರಂಗ ಕಲಾವಿದೆ ಕೆ.ಅಂಜನಾ ಅವರನ್ನು ಸ್ಥಳೀಯ ರಂಗಭೂಮಿ ಅಭಿಮಾನಿಗಳ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ದೂರದರ್ಶನ ಮೊಬೈಲ್ ನಡುವೆಯೂ ರಂಗಭೂಮಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿರುವಲ್ಲಿ ಇಲ್ಲಿನ ನೈಜ ಕಲೆಯೇ ಮೂಲ ಕಾರಣವಾಗಿದೆ. ಕಲಾ ಪ್ರೇಮಿಗಳೆಲ್ಲರೂ ರಂಗಭೂಮಿಯನ್ನು, ಕಲಾವಿದರನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಗೌರವಿಸುವ ಅನಿವರ‍್ಯತೆಯೂ ಇದೆ ಎಂದರು. ಸಂಗೀತ ಕಲಾವಿದ ಪ್ರಭು ಗುಡ್ಡದ ಮಾತನಾಡಿ, ಆಧುನಿಕ ವೈಭವದ ನಡುವೆಯೂ ಕಳೆದ ಎರಡು ದಶಕಗಳಿಂದ ಪುರುಷರಾಗಿದ್ದರೂ ಅಪ್ಪಟ ಸ್ತ್ರೀ ಕಲಾವಿದೆಯ ಪಾತ್ರ ನಿರ್ವಹಣೆ ಮಾಡಿ, ಜನರನ್ನು ರಂಜಿಸುತ್ತಾ ಬಂದಿರುವ ವಿಜಯಕುಮಾರ್ ಮಾನ್ವಿ ಅವರು ಒಂದು ಪವಾಡವೇ ಸರಿ ಎಂದರು.
ದೇವಾಂಗಮುನಿ ದೇವಾಂಗಮಠ, ಅಮೃತ ಯಾದವ, ವಿನೋದ ಭಜಂತ್ರಿ, ಜಗದೀಶ ಕಮತಗಿ, ರೇಖಾ ಕುಪ್ಪಸ್ತ, ಚಂದ್ರಶೇಖರ ಜಾಧವ, ರಾಜಕುಮಾರ ಬಡಿಗೇರ ಇದ್ದರು.

Leave a Reply

Your email address will not be published. Required fields are marked *

You May Also Like

ಬೆಂಗಳೂರಿನತ್ತ ಮುಖ ಮಾಡಿದ ಜನರು!

ಬೆಂಗಳೂರು: ಲಾಕ್ ಡೌನ್ ಆರಂಭವಾಗುತ್ತಿದ್ದಂತೆ ಬೆಂಗಳೂರಿನಿಂದ ಕಾಲ್ಕಿತ್ತ ಜನರು ಸದ್ಯ ಮತ್ತೆ ನಗರದತ್ತ ಮುಖ ಮಾಡುತ್ತಿದ್ದಾರೆ.…

ಸ್ಟೋನ್ ಕ್ರಷರ್ ನಿಂದಾಗುತ್ತಿರುವ ತೊಂದರೆ ತಪ್ಪಿಸಿ: ಲಕ್ಷ್ಮೇಶ್ವರದಲ್ಲಿ ರೈತರ ಮನವಿ

ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಗಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ವನಶ್ರೀ ಸ್ಟೋನ್ ಕ್ರಷರ್‌ನಿಂದ…

ಅಗಸ್ಟ್ 5 ರಂದು ಸಂಕಲ್ಪ ಯಾತ್ರೆಗೆ ಆಲಮಟ್ಟಿಯಲ್ಲಿ ಚಾಲನೆ

ಉತ್ತರಪ್ರಭಆಲಮಟ್ಟಿ : ದೇಶ, ನಾಡು ಕಟ್ಟುವಗೊಸ್ಕರ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮಹನೀಯರ ಸ್ಮರಣೆಗಾಗಿ…

ಪಶ್ಚಿಮ ಬಂಗಾಳದ ಹೌರಾ ಘಟನೆಗೆ ಪವನ್ ಮೇಟಿ ಖಂಡನೆ

ಪಶ್ಚಿಮ ಬಂಗಾಳ ರಾಜ್ಯವು ಗೂಂಡಾ ರಾಜ್ಯವಾಗಿ ಪರಿವರ್ತನೆಯಾಗಬಹುದು ಎಂಬ ದೃಷ್ಟಿಯಿಂದ ಹೌರಾ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಪವನ್ ಮೇಟಿ ಆಗ್ರಹಿಸಿದ್ದಾರೆ.