ಉತ್ತರಪ್ರಭ ಸುದ್ದಿ

ಬಸವನಬಾಗೇವಾಡಿ:

ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ ಸಿದ್ಧರಾಮಯ್ಯ ಆಗಮಿಸಿ ಕುರುಬ ಸಮಾಜ ಸೇರಿದಂತೆ ಎಲ್ಲಾ ಜನಾಂಗಗಳು ಪಾಟೀಲರಿಗೆ ಬೆಂಬಲಿಸಲು ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ಅಹಿಂದ ಮತಗಳು ಕ್ರೋಡಿಕೃತಗೊಂಡು ಶಿವಾನಂದ ಪಾಟೀಲ ಆರಿಸಿ ಬರಲು ಸಾಧ್ಯವಾಯಿತು.

ಆದರೆ ಈಚೆಗೆ ದಾವಣಗೆರೆಗೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡದ ಕಾರಣ, ಸಿದ್ಧರಾಮಯ್ಯನವರ ಅಭಿಮಾನಿಗಳು ತಾಲ್ಲೂಕಿನಾದ್ಯಂತ ಸ್ವಂತ ಖರ್ಚಿನಲ್ಲಿ ಹೋಗಬೇಕಾಯಿತು. ಇದು ಬಡ ಅಭಿಮಾನಿಗಳಿಗೆ ತೊಂದರೆಯಾಯಿತು ಎಂದು ಅವರು ಆರೋಪಿಸಿದ್ದಾರೆ.

ಬೇನಾಳ, ಅರಳದಿನ್ನಿ, ಬೀರಲದಿನ್ನಿ, ಗಣಿ, ಚಿಮ್ಮಲಗಿ, ಕುರಬರದಿನ್ನಿ, ಕವಲಗಿ ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳ ಸಿದ್ಧರಾಮಯ್ಯ ಅಭಿಮಾನಿಗಳಿಗೆ ತೊಂದರೆಯಾಗಿದೆ, ಈ ಬಗ್ಗೆ ಶಾಸಕರ ಆಪ್ತರಿಗೆ, ಬಸವನಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕರೆ ಮಾಡಿದರೂ ಸ್ಪಂದನೆ ದೊರೆಯಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

2018 ರಲ್ಲಿ ಅಲ್ಪ ಮತದಿಂದ ವಿಜಯಿಯಾದ ಶಿವಾನಂದ ಪಾಟೀಲರು ವಿಜಯೋತ್ಸವದಲ್ಲಿ ಬಹಿರಂಗ ಭಾಷಣದಲ್ಲಿ, ತಮಗೆ ಬೆಂಬಲ ನೀಡಿದ ಜನಾಂಗಗಳು ಹಾಗೂ ಪ್ರದೇಶಗಳ ಬಗ್ಗೆ ಹೇಳಿಕೊಂಡಿದ್ದರು. ಜಯದ ಹಿಂದೆ ಸಿದ್ಧರಾಮಯ್ಯನವರ ಅಭಿಮಾನಿಗಳು ಹಾಗೂ ತಾಲ್ಲೂಕಿನ ಇಡೀ ಹಾಲುಮತ ಸಮಾಜ ಸೇರಿ ಅಹಿಂದ ಮತದಾರರು ಇದ್ದಾರೆ, ಮುಂದಿನ ಚುನಾವಣಾ ಸಂದರ್ಭದಲ್ಲಿ ಯಾವ ಮಾನದಂಡ ಅನುಸರಿಸಬೇಕು ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದು ಸಿದ್ಧರಾಮಯ್ಯ ಅಭಿಮಾನಿ ಯುವಕರು ತಿಳಿಸಿದ್ದಾರೆ.

ಈ ಹೇಳಿಕೆಗೆ ಪ್ರವೀಣ ವಾಲೀಕಾರ, ರಮೇಶ ಮಾಗಿ, ಬಸವರಾಜ ಕುರಿ, ಜಾನು ಸಿದ್ಧನಾಥ, ಯಲಗೂರೇಶ ಮೇಟಿ, ರವಿ ಕಾಳಗಿ, ನಾಗು ಹೊಸಮನಿ, ಬಸು ಹಳೇಮನಿ, ಬೀರು ಸುನಗದ ಕೂಡಾ ಈ ಹೇಳಿಕೆಗೆ ಬೆಂಬಲಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯಸಭೆ ಕಲಾಪಕ್ಕೆ ಸರಕಾರವೇ ಹೊಣೆ: ಮಲ್ಲಿಕಾರ್ಜುನ ಖರ್ಗೆ

“ನಮ್ಮ ಧ್ವನಿಯನ್ನು ಹತ್ತಿಕ್ಕಲು ನಾವು ಬಿಡುವುದಿಲ್ಲ. ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ನಾವು ಮೋದಿಜಿ ಯವರ ಯಾವುದೇ ಸರ್ವಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ.”

ಲಕ್ಷ್ಮೇಶ್ವರಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ರಕ್ಷಣಾ ವೇದಿಕೆ ನಗರ ಘಟಕದ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಇಂದು 69 ಕೊರೋನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

ಇಂದು ರಾಜ್ಯಲ್ಲಿ ಒಟ್ಟು 69 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಕುರಿತು ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದೆ.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್ ನ್ಯೂಸ್

ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಸಿಹಿಸುದ್ದಿ ನೀಡಿದ್ದು, ಮುಂಬರುವ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಗೌರವಧನ ಹೆಚ್ಚಳ ಮಾಡಲು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.