ಕೆ.ಎಸ್.ಆರ.ಟಿ.ಸಿ ನೌಕರರಿಗೆ 1 ವರ್ಷ ಸಂಬಳರಹಿತ ರಜೆ ನೀಡಲು ಹೊರಟಿರುವುದು ಕಾರ್ಮಿಕ ವಿರೋಧಿ ನಡೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು: ಕೆ.ಎಸ್.ಆರ.ಟಿ.ಸಿ ನೌಕರರಿಗೆ ಒಂದು ವರ್ಷ ವೇತನರಹಿತ ಮತ್ತು ಭತ್ಯೆರಹಿತ ರಜೆ ನೀಡುವ ಸರ್ಕಾರದ ಯೋಚನೆ ಕಾರ್ಮಿಕ ವಿರೋಧಿ ಮತ್ತು ಅಮಾನವೀಯ ಕ್ರಮ ಎಂದು ಸರ್ಕಾರವನ್ನು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಗಳವಾರ ಸಾಯಂಕಾಲ ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆ.ಎಸ್ಆರ್.ಟಿ.ಸಿ ಮೇಲ್ಪಂಕ್ತಿಯನ್ನು ಇತರ ಇಲಾಖೆಗಳು ಮತ್ತು ಖಾಸಗಿ ಕಂಪನಿಗಳು ಅನುಸರಿಸಿದರೆ ಲಕ್ಷಾಂತರ ಕಾರ್ಮಿಕರ ಪಾಡೇನು? ಎಂದಿರುವ ಅವರು, ಸರ್ಕಾರ ದಿವಾಳಿಯಾಗಿದೆಯೇ? ಎಂದೂ ಪ್ರಶ್ನಿಸಿದ್ದಾರೆ.
ಟ್ವೀಟ್ ಜೊತೆಗೆ, ಇದೇ ವಿಷಯವಾಗಿ ಜುಲೈ 10ರಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬರೆದ ಪತ್ರವನ್ನೂ ಲಗತ್ತಿಸಿದ್ದಾರೆ.

ಪತ್ರದಲ್ಲಿ, ‘ಪ್ರಯಾಣಿಕರು ಇಲ್ಲದ ಕಾರಣಕ್ಕೆ ನೌಕರರು ಕೆಲಸವಿಲ್ಲದೇ ಇದ್ದರೆ ಅವರ ಸೇವೆಯನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳಬಹುದು. ಆದರೆ ವೇತನರಹಿತ ಮತ್ತು ಭತ್ಯೆರಹಿತ ರಜೆ ನೀಡುವುದು ಕ್ರೌರ್ಯದ ಪರಮಾವಧಿ ಆಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
1 comment
Good sir