ಆಲಮಟ್ಟಿ: ಮುಂಗಾರು ಹಂಗಾಮಿಗಾಗಿ ಕಾಲುವೆಗಳ ಮೂಲಕ ಕೃಷ್ಣೆಯ ಜಲನಿಧಿ ರೈತರ ಭೂವೊಡಲು ಸೇರುವ ಮೂರ್ಹತ ಇದೀಗ ಕೂಡಿಬಂದಿದೆ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ಪ್ರಸ್ತುತ ಲಭ್ಯವಿರುವ ನೀರಿನ ಲೆಕ್ಕಾಚಾರದ ಬಗ್ಗೆ ಚರ್ಚಿಸಿದ ಬಳಿಕ ಅಂತಿಮವಾಗಿ, ಮುಂಗಾರು ಹಂಗಾಮಿಗೆ ಜುಲೈ 26ರಿಂದಲೇ ಅನ್ವಯವಾಗುವಂತೆ ಮುಂಗಾರು ಹಂಗಾಮಿಗೆ ಜಲಾಶಯಗಳಿಂದ ನೀರು ಪೂರೈಸಲು ಮಂಗಳವಾರ ಇಲ್ಲಿನ ಕೆಬಿಜೆಎನ್‌ಎಲ್ ಕಚೇರಿ ಸಭಾಂಗಣದಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯು ತೀರ್ಮಾನ ತೆಗೆದುಕೊಂಡಿತು. ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ, ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ ಕತ್ತಿ ಅವರ ಸಮ್ಮುಖದಲ್ಲಿ ಜುಲೈ 26ರಂದು ನಡೆದ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಚರ್ಚೆ ನಡೆಯಿತು.
ಆಲಮಟ್ಟಿ ಮತ್ತು ನಾರಾಯಣಪುರ ಎರಡೂ ಜಲಾಶಯಗಳಲ್ಲಿ 97.491 ಟಿಎಂಸಿ ಜೀವಜಲ ಲಭ್ಯವಿದೆ. ಮುಂಗಾರು ಹಂಗಾಮಿನ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರಿನ ಪ್ರಮಾಣದ ಅಗತ್ಯವಿದೆ. ಅಗತ್ಯ ಬಳಕೆಗೆ ಮುಂಗಾರು ಹಂಗಾಮಿಗೆ 13 ಟಿಎಂಸಿ ನೀರು ಬೇಕಾಗುತ್ತದೆ. ಇವೆರಡು ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರಿ ಬೇಕಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹಣೆಯಾಗಿದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣವು ಜಲಾಶಯದಲ್ಲಿ ಸಂಗ್ರಹಣೆಯಾಗಿರುವುದರಿAದ ಹಾಗೂ ಮುಂಬರುವ ದಿನಗಳಲ್ಲಿ ಬರುವ ಒಳಹರಿವನ್ನು ಗಮನದಲ್ಲಿರಿಸಿಕೊಂಡು 2022-23 ರ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲ, ಆಣಿಕಟ್ಟು ಹಾಗೂ ಮುಖ್ಯ ಸ್ಥಾವರಗಳ ಕ್ಲೋಜರ್ ಅವಧಿಯ ಕಾಮಗಾರಿಗಳ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುಂಗಾರು ಹಂಗಾಮಿಗೆ ಜುಲೈ 26 ರಿಂದ ನವ್ಹಂಬರ್ 24 ರವರೆಗೆ ನೀರು ಪೂರೈಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.
ಒಳಹರಿವು ಇರುವವರೆಗೆ ನಿರಂತರ ನೀರು, ಒಳಹರಿವು ಸ್ಥಗಿತಗೊಂಡ ನಂತರ 14 ದಿನ ಚಾಲು 8 ದಿನ ಬಂದ್ ಪದ್ಧತಿ ಅನುಸರಿಸಲಾಗುವುದು ಎಂದರು.
ಗುತ್ತಿ ಬಸವಣ್ಣ ಏತ ನೀರಾವರಿಯ 7 ಪಂಪಸೆಟ್ ಗಳು ದುರಸ್ತಿ ಕಾರ್ಯ ನಡೆದಿದ್ದು, ಇದೇ ಆಗಷ್ಟ್ 15 ರಿಂದ ನಾಲ್ಕು ಪಂಪಸೆಟ್ ಮೂಲಕ ನೀರು ಹರಿಸಲಾಗುವುದು ಎಂದರು. ಶಾಸಕರಾದ ಅಮರೇಗೌಡ ಬಯ್ಯಾಪುರ, ರಮೇಶ ಭೂಸನೂರ, ಶಿವನಗೌಡ ನಾಯಕ, ರಾಜುಗೌಡ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ಡಿ.ಎಸ್. ಹೂಲಗೇರಿ, ಬಸನಗೌಡ ದದ್ದಲ್ ಸೇರಿ ಹಲವರು ಸಭೆಯಲ್ಲಿದ್ದರು. ಕೆಬಿಜೆಎನ್ ಎಲ್ ಎಂಡಿ ಬಿ.ಎಸ್. ಶಿವಕುಮಾರ, ಜಿಲ್ಲಾಧಿಕಾರಿಳಾದ ವಿಜಯಮಹಾಂತೇಶ ದಾನಮ್ಮನವರ, ಪಿ.ಸುನೀಲಕುಮಾರ, ಮುಖ್ಯ ಎಂಜಿನಿಯರ್ ಪ್ರದೀಪಮಿತ್ರ ಮಂಜುನಾಥ, ಎಚ್. ಸುರೇಶ ಸೇರಿದಂತೆ ಹಲವರು ಇದ್ದರು.
ರೈತರಲ್ಲಿ ಮನವಿ:
ಸಮಸ್ತ ಅಚ್ಚುಕಟ್ಟು ರೈತ ಬಾಂಧವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೋಲಾಗದಂತೆ ಹಿತಮಿತ ಬಳಸಲು ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳೊಂದಿಗೆ ಸಹಭಾಗಿತ್ವ ನೀಡಲು ಇದೆ ವೇಳೆ ಸಚಿವರಾದ ಸಿಸಿ ಪಾಟೀಲ ರೈತ ಬಾಂಧವರಲ್ಲಿ ಮನವಿ ಮಾಡಿದರುನವೆಂಬರ್ ಅತ್ಯಂಕ್ಕೆ ಸಭೆ: ನವೆಂಬರ್ 2022ರಲ್ಲಿ ಎರಡೂ ಜಲಾಶಯಗಳ ಸಂಗ್ರಹಣೆಯನ್ನು ಗಮನದಲ್ಲಿರಿಸಿಕೊಂಡು 2022-23ನೇ ಸಾಲಿನ ಹಿಂಗಾರು ಹಂಗಾಮಿನ ನೀರವಾರಿ ಸಲಹಾ ಸಮಿತಿ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Leave a Reply

Your email address will not be published. Required fields are marked *

You May Also Like

ಶುದ್ಧ ನೀರು ಪೂರೈಕೆಗೆ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಒತ್ತಾಯ

ರೋಗ ರುಜಿನಗಳಿಗೆ ಕಲುಷಿತ ನೀರು ಕಾರಣವಾಗುತ್ತಿದ್ದು, ಅದರಲ್ಲೂ ಇದೀಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನಿಂದ ಅನೇಕ ಸಮಸ್ಯೆಗಳು ಉದ್ಬವಾಗುತ್ತಿದ್ದು ಪಟ್ಟಣದಲ್ಲಿ ಅನೇಕ ಹೋಟೆಲ್‌ಗಳು ಡಾಬಾ ಬೇಕರಿ ಹಾಗೂ ಬೀದಿ ಬದಿ ಆಹಾರ ಮಾರಾಟ ಮಾಡುವವರು ಜನರಿಗೆ ಕಲುಷಿತ ನೀರು ಪೂರೈಸುವುದರಿಂದ ರೋಗಗಳು ಹೆಚ್ಚುವಂತಾಗಿದೆ.

ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

2020-21 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ರಾಜ್ಯದಲ್ಲಿಂದು 453 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 453 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9150…

ಬಸವ ತತ್ವ, ಧರ್ಮಸೂತ್ರ ಪರಿಪಾಲಿಸಿ ಭವ್ಯ ಹಿಂದು ಧರ್ಮ ಉಳಿವಿಗೆ ಸಂಕಲ್ಪ ಮಾಡಿ- ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ

ಆಲಮಟ್ಟಿ: ಪವಿತ್ರ ಬಸವ ಭೂಮಿಯ ನಾಡಿನಲ್ಲಿ ಇನ್ನೂ ಅಸ್ಪೃಶ್ಯತೆ ಪೂರ್ಣ ತೊಲಗಿಲ್ಲ. ಕಂದಾಚಾರ,ಅನಾಚಾರ,ಮೂಡನಂಬಿಕೆಗಳಂಥ ಮೌಢ್ಯಗಳು ಅಲ್ಲಲ್ಲಿ…