ಉತ್ತರಪ್ರಭ
ಆಲಮಟ್ಟಿ:
ಜಾನಪದ ಕಲೆಗಳು ನಮ್ಮ ಪರಂಪರೆಯ ಜೀವಾಳವಾಗಿದ್ದು ಅವು ಮೌಲ್ಯಾಧಾರಿತ ಸಂಸ್ಕೃತಿಯ ಪ್ರತೀಕವಾಗಿವೆ, ಎಂದು ಕನ್ನಡ ಜಾನಪದ ಪರಿಷತ್ತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ನುಡಿದರು. ಇಲ್ಲಿನ ಮರಿಮಟ್ಟಿಯ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕ ವಿಜಯಪುರ ಹಾಗು ನಿಡಗುಂದಿ ತಾಲೂಕು ಘಟಕದ ಆಶ್ರಯದಲ್ಲಿ ಬಡ ಕಲಾವಿದರಿಗೆ ಹಮ್ಮಿಕೊಂಡಿದ್ದ ಬಟ್ಟೆ ವಿತರಣಕಾರ್ಯಕ್ರಮದಲ್ಲಿಸಂಪ್ರದಾಯಪದ ಜಾನಪದ 50 ಕಲಾವಿದರಿಗೆ ಅವರು ಬಟ್ಟೆ ವಿತರಿಸಿ ಮಾತನಾಡಿದರು.


ಜಾನಪದ ಕಲಾಲಾಸ್ಯ ಜನತೆಗೆ ರಂಜನೀವಾಗಿವೆ. ಅವು ಸಾಂಸ್ಕೃತಿಕ ಗತ ವೈಭವ ಸಾರುವ ಭಾರತೀಯ ಉತ್ಕೃಷ್ಟ ಕಲೆಗಳಾಗಿವೆ. ಆದರೆ ಆಧುನಿಕತೆಯ ಹೊಡತಕ್ಕೆ ಸಿಲುಕಿ ನಶಿಸುತ್ತಲಿವೆ ಎಂದರು. ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಸಮೂದಾಯದ ಹಿರಿಯರು ತಮ್ಮ ಸಂಪ್ರದಾಯದ ಕಲೆಗಳ ಮೂಲಕ ಜಾನಪದ ಕಲಾ ಚರಿತ್ರೆ ಉಳಿಸಿದ್ದಾರೆ. ಆದರೆ ಅವರ ಮಕ್ಕಳು ಈ ಕಲಾ ಪರಂಪರೆಯಿಂದ ಇಂದು ವಿಮುಖರಾಗಿ ದೂರು ಸರಿಯುತ್ತಲ್ಲಿದ್ದಾರೆ. ಕಲೆ ಜೀವಂತಿಕೆಗಾಗಿ ಜನಾಂಗ ತೀವ್ರ ಹೆಣಗಾಡುವ ಪರಿಸ್ಥಿತಿ ಬಂದೊದಗಿದೆ. ಸರಕಾರ ಇತ್ತ ಗಮನ ಹರಿಸಿ ಕಲಾ ಪೋಷಕ ಸಮೂದಾಯಕ್ಕೆ ಆಥೀ೯ಕ ಸಹಾಯ ಸೌಲಭ್ಯ ಒದಗಿಸಿ ಜನಪ್ರಿಯತೆಯ ಜಾನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.
ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವ್ಯವಸ್ಥೆವಾಗಬೇಕು. ಈ ಹೊಣೆಗಾರಿಕೆ ಮರೀಚಿಕೆವಾದರೆ ಮುಂಬರುವ ದಿನಗಳಲ್ಲಿ ಜನಮಾನಸದಿಂದ ಜಾನಪದ ಕಲೆ,ಕಾವ್ಯ ಕಣ್ಮರೆವಾದೀತೆಂದು ಆತಂಕ ವ್ಯಕ್ತಪಡಿಸಿದರು. ಬುಡಕಟ್ಟು ಜನಾಂಗದ ಮಕ್ಕಳು ಶಿಕ್ಷಣ ವಿದ್ಯೆಯಿಂದ ದೂರುಳಿದಿದ್ದಾರೆ. ಬಡತನ, ಅನಕ್ಷರತೆ ಕಾಡುತ್ತಿವೆ. ಬದುಕಿಗಾಗಿ ಹಲಬಗೆಯ ಹರಸಾಹಸ ನಡೆಸುತ್ತಿದ್ದಾರೆ. ನಾನಾ ಜನಪದ ಕಲೆ, ಬೀದಿ ನಾಟಕಗಳ ಮೂಲಕ ಹಿರಿಯರು ಹೇಗೋ ತಮ್ಮ ಕುಟುಂಬ ಪರಿವಾರದ ಜೀವನ ನಿರ್ವಹಣೆ ಸಾಗಿಸುತ್ತಿದ್ದಾರೆ. ಎಂದು ಬದುಕಿನ ಕರಾಳತೆ ತೆರೆದಿಟ್ಟರು, ಈ ಜನಾಂಗ ತೀರಾ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಶಿಕ್ಷಣ ಒಲವು ತೋರಿ ಮುಂದೆ ಬರಬೇಕು. ಗುಣಮಟ್ಟದ ಶಿಕ್ಷಣ ಪಡೆದು ತಮ್ಮ ಸ್ವಂತಿಕೆಯ ಕಲಾರಾಧನೆದಿಂದ ಸಮಾಜದಲ್ಲಿ ವಿಶೇಷ ಛಾಪು ಮೂಡಿಸಬೇಕೆಂದರು. ತಮ್ಮ ಸ್ವಂತ ಖಚಿ೯ನಿಂದ ಮುಂಬರುವ ವರ್ಷದಿಂದ 100 ಜನ ಜಾನಪದ ಕಲಾವಿದರಿಗೆ ವಸ್ತ್ರ ದಾನ ಮಾಡುವುದಾಗಿ ವಾಗ್ದಾನ ಡಾ.ಬಾಲಾಜಿ ಮಾಡಿದರು.
ಇಟಗಿಯ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ, ಸುಡುಗಾಡ ಸಿದ್ದರು ಸಾಕ್ಷಾತ್ ಪರಮಾತ್ಮನ ಮಕ್ಕಳು. ಅವರ ಜೀವನ ಶೈಲಿ ಕಲೆಗಳ ಧಾರೆಯಲ್ಲಿ ಮಿಂದಿವೆ. ಜಾನಪದ ಕಲೆಗಾಗಿ ಜೀವನ ಮುಡುಪಿಟ್ಟು ಶ್ರಮಿಸುತ್ತಿದ್ದಾರೆ. ಜಾನಪದ ಕಥಾ ವೈಭವದ ಮೌಲ್ಯ ಸಾರಿದ್ದಾರೆ. ನಿಜಕ್ಕೂ ಈ ಅಲೆಮಾರಿ ಬುಡಕಟ್ಟು ಜನಾಂಗದವರು ಜಾನಪದ ಕಲಾ ಸಾಮ್ರಾಜ್ಯದ ರಾಯಭಾರಿಗಳು ಎಂದರು. ಭಾರತೀಯ ಜಾನಪದ ಕಲಾ ಪ್ರಕಾರಗಳು ಭಿನ್ನ ಭಿನ್ನವಾಗಿವೆ. ಆ ಕಲೆ ,ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನಮಾನ ಇದೆ. ಅದನ್ನು ಉಳಿಸಿಕೊಳ್ಳಲು ಎಲ್ಲರೂ ಮನಸ್ಸು ತೋರಬೇಕು ಎಂದು ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿಡಗುಂದಿ ಕ.ಜಾ.ಪ.ತಾಲೂಕಾಧ್ಯಕ್ಷ ವೈ.ಎಸ್.ಗಂಗಶೆಟ್ಟಿ, ಕಲಾವಿದರ ಮಾಶಾಸನಕ್ಕಾಗಿ ಶ್ರಮಿಸಲಾಗುತ್ತಿದೆ. ನಿಯಮಗಳನ್ನು ಪಾಲಿಸಿ ಸರಕಾರದ ಸೌಲಭ್ಯಗಳನ್ನು ಕಲಾವಿದರಿಗೆ ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಂಡಲೀಕ ಮುರಾಳ, ರಾಮನಗರ ಜಿಲ್ಲಾಧ್ಯಕ್ಷ ಕೆ.ಕಾಂತಪ್ಪ, ಕ.ಸಾ.ಪ.ನಿಡಗುಂದಿ ತಾಲೂಕಾಧ್ಯಕ್ಷ ಸಂಗಮೇಶ ಕೆಂಬಾವಿ, ಮ.ಸಾ.ಪ.ನಿಡಗುಂದಿ ತಾಲೂಕು ಅಧ್ಯಕ್ಷ ವೀರೇಶ ಮಾಶೆಟ್ಟಿ, ಯುವ ಧುರೀಣ ಭೀಮಾಶಂಕರ ಉದಂಡಿ, ಎಸ್.ಆರ್.ವಿಭೂತಿ, ಎ.ಆರ್.ಮುಲ್ಲಾ, ಪ್ರಕಾಶ ಚಿಮ್ಮಡ, ರಮೇಶ ಶಂಕದ, ಉಮೇಶ ಗಂಟಿ, ಹಾವಿನಮರದ ಇತರರಿದ್ದರು.
ನಿಡಗುಂದಿ ಕಲ್ಮೇಶ ಭಜನಾ ಮಂಡಳಿ, ಚೌಡಕಿ ಮೇಳ, ವೀರಗಾಸೆ ಕಲಾವಿದರು, ಮರಿಮಟ್ಟಿಯ ಸುಡಗಾಡ ಸಿದ್ದರು,ನಾಲತವಾಡ ಕಲಾ ಮೇಳ ಸೇರಿದಂತೆ ಡೊಳ್ಳು ಕುಣಿತ, ಭಜನೆ, ಹಲಗೆ ಮಜಲು,ಗೀಗೀಪದ ಸಂಪ್ರದಾಯದ ಕಲಾವಿದರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ಯಾಕೇಜ್: ಸಿಎಂಗೆ ಜೊಲ್ಲೆ ಅಭಿನಂದನೆ

ರಾಜ್ಯದಲ್ಲಿ ಕೊರೊನಾ ಮುಂಚೂಣಿ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2000 ರೂ. ನೆರವು ಘೋಷಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಹಿರಿಯ ಸಾಹಿತಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ನಿಧನ

ಬೆಂಗಳೂರ: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)…

ಶೇಂಗಾ ಹೊಟ್ಟಿನ ಬಣವಿಗೆ ದುಷ್ಕರ್ಮಿಗಳಿಂದ ಬೆಂಕಿ

ಮುಂಡರಗಿ: ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಶೇಂಗಾ ಹೊಟ್ಟಿನ ಬಣವಿಗೆ…

ಕೊರೊನಾ ಹಿನ್ನೆಲೆ : ಬೆಳಗಾವಿ ಜಿಲ್ಲೆಯಲ್ಲಿ ರೇಣುಕಾ ಯಲ್ಲಮ್ಮ ಸೇರಿ ಹಲವು ದೇವಸ್ಥಾನಗಳ ದರ್ಶನ ನಿಷೇಧ

ಕೋವಿಡ್-19 (ಕರೋನಾ)ರೂಪಾಂತರಿ ವೈರಾಣುವಿನ ಹರಡುವಿಕೆಯು ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇನ್ನಿತರೆ ರಾಜ್ಯಗಳಲ್ಲಿ ತೀವ್ರತರವಾಗಿ ಹರಡುತ್ತಿರುವುದರಿಂದೆ.