ನಂಬುಗೆಯ ನಾಯಕರಾಗಿ, ನಾಡಿನ ಶಿಕ್ಷಕ ಸಮುದಾಯದ ಜೀವಧ್ವನಿಯಾಗಿ ಹೋರಾಟದ ಮೂಲಕ ಗುರುತಿಸಿಕೊಂಡ ಹೊರಟ್ಟಿಯವರು ನಾಡಿಗೆ ಪರಿಚಿತರಾಗಿದ್ದೇ ಹೋರಾಟದ ಹೊರಟ್ಟಿ ಎಂದು. ಸತತ 45 ರ‍್ಷಗಳ ಹೋರಾಟದ ಫಲದಿಂದ ಶಿಕ್ಷಕರ ಮನದಲ್ಲಿ, ಮನೆಯಲ್ಲಿ, ಅಂತರಾಳದಲ್ಲಿ ಬೇರೂರಿದ ಹೊರಟ್ಟಿ ಹಾಗೂ ಶಿಕ್ಷಕರ ಸಂಬಂಧವನ್ನುಯಾರಿಂದಲೂ ಬರ‍್ಪಡಿಸಲು ಸಾಧ್ಯವಿಲ್ಲ ಎಂಬುದನ್ನು 8ನೇ ಬಾರಿ ಹೊರಟ್ಟಿಯವರನ್ನುಗೆಲ್ಲಿಸುವ ಮೂಲಕ ಶಿಕ್ಷಕ ಸಮುದಾಯ ನಾಡಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಹೋರಾಟದ ಹೊರಟ್ಟಿ ಎಂದೇ ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ ಬಸವರಾಜ ಹೊರಟ್ಟಿಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. ಹಡೆದ ಪುಣ್ಯಜೀವಿಗಳು ತಂದೆ ಶಾಲಾ ಮಾಸ್ತರರಾಗಿದ್ದ ಶಿವಲಿಂಗಪ್ಪನವರು ತಾಯಿ ಗುರವ್ವನವರು. ಬಸವರಾಜ ಹೊರಟ್ಟಿಯವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನತದೃಷ್ಟರು. ತಂದೆಯ ಪ್ರೀತಿ, ವಾತ್ಸಲ್ಯ ಮಮತೆಯಿಂದ ವಂಚಿತರಾದವರು. ತಂದೆಯ ನೆನಪಿನಲ್ಲಿಯೇ ಬಾಲ್ಯವನ್ನು ಕಳೆದರು. ತಾಯಿಯೇ ಪ್ರೀತಿಯ ಆರೈಕೆ ಮಾಡುತ್ತಾ ತಂದೆಯಿಲ್ಲದ ಕೊರಗನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಪುಟ್ಟದಾದ ಯಡಹಳ್ಳಿಯಿಂದ ಹುಬ್ಬಳ್ಳಿಗೆ ಬಂದು ಶಿಕ್ಷಕರ ಸಹಕಾರದಿಂದ ಬೆಟ್ಟದಂತೆ ಬೆಳೆದು ನಿಂತವರೇ ಬಸವರಾಜ ಹೊರಟ್ಟಿಯವರು.

ರ‍್ಧ ಶತಮಾನದ ಹತ್ತಿರ ಹತ್ತಿರ ಶಿಕ್ಷಕರ ಪರ ಹೋರಾಡುತ್ತಿರುವ, ಬರೆಯುವಂತೆ ಬದುಕಿ ಇತಿಹಾಸ ಪುಟಗಳಲ್ಲಿ ದಾಖಲಾದ ಇಡೀ ಬದುಕನ್ನು ಶಿಕ್ಷಕರಿಗೆ, ಶಿಕ್ಷಣಕ್ಕೆ ಸಮಾಜಕ್ಕೆ ರ‍್ಪಿಸುತ್ತಿರುವ ಶಿಕ್ಷಕರ ಜೀವನಾಡಿ, ಶಿಕ್ಷಕರ ಜೀವಧ್ವನಿಯಾದ ಬಸವರಾಜ ಹೊರಟ್ಟಿಯವರ ಐದು ದಶಕಗಳ ಹೋರಾಟದ ಹಾದಿಗಳಲ್ಲಿ ಸಾಧಿಸಿದ ಮೈಲುಗಲ್ಲುಗಳನ್ನು ಕೆಲವೇ ಪುಟಗಳಲ್ಲಿ ದಾಖಲಿಸುವುದೇ ಕಷ್ಟ ಸಾಧ್ಯ.

ಶಿಕ್ಷಕರ ಹಿತೈಷಿ, ಶಿಕ್ಷಕರ ಅಪದ್ಭಾಂದವ, ವಿವಿಧ ಹೋರಾಟಗಳ ವಿಭಿನ್ನ ನೆಲೆಗಳ ಬಸವರಾಜ ಹೊರಟ್ಟಿಯವರು ಜನ ಮಾನಸದಲ್ಲಿ ಹೋರಾಟದ ಹೊರಟ್ಟಿಯವರೆಂದೇ ಚಿರಪರಿಚಿತರಾದವರು. ಹೊರಟ್ಟಿಯವರು ಸಮಸ್ಯೆಯೊಂದನ್ನು ಎತ್ತಿಕೊಂಡು ಹೋರಾಟಕ್ಕಿಳಿದರೆ ತರ‍್ಕಿಕ ಅಂತ್ಯ, ಯಶಸ್ಸು ನಿಶ್ಚಿತ ಎಂಬ ಮನೋಭಾವ ಸಮಸ್ತ ನಾಡಿನ ಶಿಕ್ಷಕ ಬಳಗದಲ್ಲಿ ಇಂದಿಗೂ ಇದೆ. ಅನೇಕ ಸಂಘಟನೆಗಳೊಂದಿಗೆ ಜನಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಹೊರಟ್ಟಿಯವರು.

ಸಮಾಜ ಹಾಗೂ ಶೈಕ್ಷಣಿಕ ಸೇವೆಯಲ್ಲಿ 42 ರ‍್ಷಗಳನ್ನು ಪೂರೈಸಿದ ದಣಿವರಿಯದ ಅವಿಶ್ರಾಂತ ಜನಪ್ರತಿನಿಧಿಯಾದ ಮಾಜಿ ಶಿಕ್ಷಣ ಸಚಿವರು, ಹಾಲಿ ವಿಧಾನಪರಿಷತ್ ಸಭಾಪತಿಗಳು ಹಾಗೂ ವಿಧಾನಪರಿಷತ್ತಿನ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಯವರ ಸಾಧನೆಯ ಹಾದಿ ರೋಚಕ, ರೋಮಾಂಚಕ ಅಷ್ಟೇ ಸ್ಪರ‍್ತಿದಾಯಕ.

1970-80ರ ದಶಕದಲ್ಲಿ ಉತ್ತರಕ ರ‍್ನಾಟಕದಲ್ಲಿ ನಾಯಕತ್ವ ಇಲ್ಲದೇ ಶಿಕ್ಷಣ ಸಂಸ್ಥೆಗಳ ಕೃಪಾಶರ‍್ವಾದದಲ್ಲಿಯೇ ಆಗಿನ ಭಾಷೆಯಲ್ಲಿ ಮಾಸ್ತರರು ಅಲ್ಲ ಏ ಮಾಸ್ತರ! ಎಂದೇ ಸಂಭೋಧನೆಗೆ ಒಳಪಟ್ಟು ಮುಜುಗರಕ್ಕೆ ತುತ್ತಾಗಿದ್ದ ಶಿಕ್ಷಕರಿಗೆ ಬಸವರಾಜ ಹೊರಟ್ಟಿಯವರ ನೇತೃತ್ವದ ರ‍್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘವು ಓಯಾಸಿಸ್‍ನಂತೆ ಕಂಡಿದ್ದರೆ ಅದರಲ್ಲಿ ಆಶ್ರ‍್ಯ ಪಡಬೇಕಿಲ್ಲ. ಕಾರಣ ಆಗಿನ ಪರಿಸ್ಥಿತಿಯೇ ಹಾಗಿತ್ತು.

ಶಿಕ್ಷಕ ವೃತ್ತಿ ಎಂದರೆ ಪಾಠ, ಪ್ರವಚನ, ಸಾಧ್ಯವಾದರೆ ಮನೆಯಲ್ಲಿ ಟ್ಯೂಶನ್ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಅನಿವರ‍್ಯತೆಯಿಂದಾಗಿ ಪ್ರತಿರೋಧಿಸುವ, ಪ್ರತಿನಿಧಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದ ಸಮುದಾಯಕ್ಕೆ ಶಕ್ತಿ ತುಂಬಿ ಪ್ರತಿರೋಧಿಸಿ, ಪ್ರತಿನಿಧಿತ್ವ ಪಡೆದ ಛಲದಂಕಮಲ್ಲನಾಗಿ ಉದಯಿಸಿದ್ದು 45 ರ‍್ಷಗಳಿಂದ ಅರ‍್ನಿಶಿ ಶಿಕ್ಷಕ ಶಿಕ್ಷಣವನ್ನೇ ಉಸಿರು ಮಾಡಿಕೊಂಡು ಶಿಕ್ಷಕರ ನಂಬುಗೆಯ ನಾಯಕ ಶ್ರೀ ಬಸವರಾಜ ಹೊರಟ್ಟಿ.

ಅಂದು ಶಿಕ್ಷಕರ ಸಂಘಟನೆಗಳ ಹೋರಾಟಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದವು. ವಿಶೇಷವಾಗಿ ಅನುದಾನಿತ ಶಾಲಾ ಶಿಕ್ಷಕರ ಪರವಾಗಿಧ್ವನಿಯೆತ್ತುವ ಸಂಘಟನೆಗಳು ಇರಲೇ ಇರಲಿಲ್ಲ. ಏಕೆಂದರೆ ಅನುದಾನಿತ ಶಿಕ್ಷಣ ಸಂಸ್ಥೆಗಳು ಉತ್ತರ ರ‍್ನಾಟಕ ಭಾಗದಲ್ಲಿಯೆ 85% ಸಂಸ್ಥೆಗಳು ಇದ್ದವು. ಹೀಗಾಗಿ ಈ ಸಂಘವು ತಕ್ಷಣ ಶಿಕ್ಷಕರ ನಾಡಿ ಮಿಡಿತವನ್ನು ರ‍್ಥಮಾಡಿಕೊಂಡು ತನ್ನ ಹೋರಾಟದ ಹೆಜ್ಜೆಗಳನ್ನು ಮೂಡಿಸಲು ಸಾಧ್ಯವಾಯಿತು.

ಕೃಪಾದಾನಂ ಪ್ರೌಢಶಾಲೆಯ ಬಾಲರಡ್ಡಿಯವರ ಹೋರಾಟದಿಂದ ಆರಂಭವಾದ ಸಂಘದ ಸಂರ‍್ಷದ ಯಶೋಗಾಥೆ 45 ರ‍್ಷಗಳ ನಂತರವೂ ಅದೇ ಉತ್ಸಾಹ, ಅದೇ ಜಿಗುಟುತನ, ಛಲ ಬಲದೊಂದಿಗೆ ಮುನ್ನಡೆಯುತ್ತಿರುವುದಕ್ಕೆ ಕಾರಣೀಭೂತರು ಬಸವರಾಜ ಹೊರಟ್ಟಿಯವರು ಎಂದರೆ ಅತಿಶಯೋಕ್ತಿ ಆಗಲಾರದು.

ಸಂಘಟನೆಯ ಮಂತ್ರಗಳನ್ನು ಚೆನ್ನಾಗಿಕರಗತ ಮಾಡಿಕೊಂಡ ಯಾರಿಗೂ ಜಗ್ಗದ ಬಗ್ಗದ ಕುಗ್ಗದ ಧೀರೋಧ್ದಾತ್ತ ವ್ಯಕ್ತಿ ಬೆಂಬಿಡದ ಬೇತಾಳದಂತೆ ಹಿಡಿದ ಕೆಲಸ ಮಾಡುವ ಜಿಗುಟುತನ, ಒಮ್ಮೊಮ್ಮೆ ವಜ್ರಾದಪಿ ಕಠೋರಾಣಿ ಎನಿಸಿದರೂ ಯಾರೇ ಬಂದು ತಮ್ಮ ಕಷ್ಟ ದುಃಖಗಳನ್ನು ಹೇಳಿಕೊಂಡಾಗ ಮೃದುನಿ ಕುಸುಮಾದಪಿ ಎನ್ನುವ ಹಾಗೆ ತಕ್ಷಣ ಬೆಣ್ಣೆಯಂತೆ ಕರಗುವ ಅವರ ಸ್ನಿಗ್ಧ ಅಂತಃಕರಣ ಇವರ ಸಂಸ್ಕಾರದ ಪರಿಚಯ ಮಾಡಿಕೊಡುತ್ತದೆ.

“ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ರ‍್ವಸ್ವ” ಎಂಬ ಉಕ್ತಿಯಂತೆ ತಮ್ಮ ಕುಟುಂಬಕ್ಕಿಂತ ದಿನದ ಬಹುಭಾಗ ಸಮಯವನ್ನು ಶಿಕ್ಷಕರಿಗೆ ಮೀಸಲಿರಿಸಿದ ಕಿಂದರಜೋಗಿ ಹೊರಟ್ಟಿಯವರು. ಆದ್ದರಿಂದಲೇ 45 ರ‍್ಷಗಳ ನಂತರವೂ ಸಂಘವು ಅದೇ ಸಂರ‍್ಷದ ಹಾದಿಯಲ್ಲಿ ಛಲ ಬಲದೊಂದಿಗೆ ಮುನ್ನಡೆದಿದ್ದರೆ ಅದಕ್ಕೆ ಈ ಮಹಾ ಸಂಘಟನಾಚತುರರಾದ ಹೊರಟ್ಟಿಯವರ ಧೀಮಂತ ನಾಯಕತ್ವವೇ ಕಾರಣ. ‘ಜಾತಿ ಹಚ್ಚಿಕೊಂಡು ಹುಟ್ಟಿದರೂ ಜಾತ್ಯಾತೀತರು’ ‘ಪಕ್ಷದಲ್ಲಿದ್ದರೂ ಪಕ್ಷಾತೀತರು’, ಇವರು ಇಂತಹ ಸ್ನೇಹಜೀವಿ, ಭಾವಜೀವಿ, ಸಂಘಜೀವಿಯಾದ ಬಸವರಾಜ ಹೊರಟ್ಟಿಯವರು 8ನೇ ವಿಧಾನ ಪರಿಷತ್ ಪ್ರವೇಶಿಸಿಸಲಿದ್ದಾರೆ.

42 ರ‍್ಷಗಳ ಕಾಲದಲ್ಲಿ ಶಾಸಕರಾಗಿ, ಮಂತ್ರಿಯಾಗಿ, ಸಭಾಪತಿಗಳಾಗಿ ಅವರು ಮಾಡಿದ ಕೆಲಸಗಳು ನಮ್ಮ ಮುಂದಿವೆ. ಅನುದಾನಿತ, ಸರಕಾರಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನರ‍್ವಹಿಸುತ್ತಿರುವ ಸಿಬ್ಬಂದಿಗಳ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಕ ಸಮುದಾಯ ಅವರನ್ನು 8ನೇ ಬಾರಿ ಆಯ್ಕೆ ಮಾಡಿದ್ದೆ ಸಾಕ್ಷಿ. ಸರಕಾರಿ ಅನುದಾನಿತ ಶಾಲೆಗಳಿಗೆ ಬಿಸಿಯೂಟ, ಸೈಕಲ್ ವಿತರಣೆ, ಉಚಿತ ಪಠ್ಯಪುಸ್ತಕಗಳ ವಿತರಣೆ ಯೋಜನೆಗಳನ್ನು ವಿಸ್ತಿರಿಸಿದ್ದು ದೇಶದಲ್ಲೇ ಮೊದಲು. 1995 ಕ್ಕಿಂತ ಮೊದಲು ಪ್ರಾರಂಭವಾದ ಅನುದಾನರಹಿತ ಶಾಲಾ-ಕಾಲೇಜುಗಳಿಗೆ ಅನುದಾನ ಮಂಜೂರು ಮಾಡಿದ ಶ್ರೇಯಸ್ಸು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರಿಗೆ ಸಲ್ಲಲು ನೀವೆ ಕಾರಣಿಭೂತರಾಗಿದ್ದೀರಿ. ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆ, ಶಿಕ್ಷಕರಿಗೆ ಬ್ಯಾಂಕ್ ಖಾತೆಗೆ ವೇತನ ಜಮಾ, ರಜಾ ಸೌಲಭ್ಯ, ಸೇವಾ ಪುಸ್ತಕ ನರ‍್ವಹಿಸುವದು. ಅನುದಾನಿತ ಪ್ರೌಢಶಾಲೆ ಮತ್ತು ಪದವಿಪರ‍್ವ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳ ನೇಮಕಾತಿಗೆ ಅವಕಾಶ. ರಾಜ್ಯದ ಖಾಸಗಿ ಐ.ಟಿ.ಐಗಳಿಗೆ 100%ರಷ್ಟು ಅನುದಾನ ಕೊಡಿಸಲು ಉಪಸಮಿತಿ ಅಧ್ಯಕ್ಷರಾಗಿ ಮಂಜೂರಾತಿ. ಸರಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಇದ್ದ ಶೇಕಡಾ 50 ಬಡ್ತಿ ಅವಕಾಶವನ್ನು ಶೇಕಡಾ 75ಕ್ಕೆ ಹೆಚ್ಚಿಸಿದ್ದು.

2009-10ನೇ ಸಾಲಿನವರೆಗೆ ರಾಜ್ಯದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರಬಾರದೆಂದು ರ‍್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಿ 24,768 ಪ್ರಾಥಮಿಕ, 12,994 ಪ್ರೌಢ, 5551 ಪದವಿಪರ‍್ವ ಉಪನ್ಯಾಸಕರು ಹೀಗೆ ಒಟ್ಟು 48313 ಹುದ್ದೆ ರ‍್ತಿ. ರಾಜ್ಯದಲ್ಲಿ 1014 ಸರಕಾರಿ ಪ್ರೌಢಶಾಲೆ 492 ಸರಕಾರಿ ಹಾಗೂ ಖಾಸಗಿ ಪದವಿಪರ‍್ವ ಕಾಲೇಜು ಆರಂಭಿಸಲು ಅನುಮತಿ ಅವುಗಳ ಮೂಲ ಸೌರ‍್ಯಕ್ಕೆ 500 ಕೋಟಿ ಹಣ ಒದಗಿಸಲಾಗಿದೆ. ಸ್ವತಃ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವದರೊಂದಿಗೆ ಬೆಂಗಳೂರು ಚಲೋ ಪಾದಯಾತ್ರೆಯನ್ನು ಸಂಘಟಿಸುವದರ ಮೂಲಕ 23000ಕ್ಕೂ ಅಧಿಕ ಶಿಕ್ಷಕರು ವೇತನ ಪಡೆಯಲು ಶಿಕ್ಷಕರೊಂದಿಗೆ ಹೆಗಲಿಗೆ ಹೆಗಲಾಗಿ ಹೋರಾಟ ಮಾಡಿದ ಧೀಮಂತ ಜನಪ್ರತಿನಿಧಿ ಇವರೊಬ್ಬರೆ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು 40 ಕೋಟಿ ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಮಂಜೂರು ಮಾಡುವದರ ಮೂಲಕ ಶಿಕ್ಷಣ ಸಂಸ್ಥೆಗಳ ಮೂಲ ಸೌರ‍್ಯಕ್ಕೆ ಅಡಿಪಾಯ ಹಾಕಿದ ಕರ‍್ತಿ ಬಸವರಾಜ ಹೊರಟ್ಟಿಯವರಿಗೆ ಸಲುತ್ತದೆ.

ಹುಟ್ಟೂರಿನ ಋಣ ತೀರಿಸುವ ಮೂಲಕ ಯಡಹಳ್ಳಿ ಗ್ರಾಮಕ್ಕೆ ಎಲ್ಲ ಮೂಲಭೂತ ಸೌರ‍್ಯ ಒದಗಿಸಿದ್ದಾರೆ. ಕೋಟ್ಯಾಂತರ ಬೆಲೆ ಬಾಳುವ 7 ಎಕರೆ ಜಮೀನನ್ನು ಸರಕಾರಿ ಶಾಲೆಗೆ ದಾನ ನೀಡಿ 30 ಕೋಟಿಗೂ ಅಧಿಕ ಹಣವನ್ನು ವಿನಿಯೋಗಿಸುವ ಮೂಲಕ ದೇಶದಲ್ಲಿಯೇ ಮಾದರಿಯಾದ ಹೈಟೆಕ್ ಶಾಲೆ ನರ‍್ಮಿಸಿ ಸಾವಿರಾರು ಗ್ರಾಮೀಣ ವಿದ್ಯರ‍್ಥಿಗಳಿಗೆ ಉತ್ಕ್ರಷ್ಟ ಶಿಕ್ಷಣಸಿಗುವಂತೆ ಮಾಡುವ ಮೂಲಕ ಮಾದರಿ ಜನ ಪ್ರತಿನಿಧಿಯೆಂದೇ ಸಮಾಜದಲ್ಲಿ ಗುರುತಿಸಿಕೊಂಡವರು. ಕಳೆದ ಐದು ದಶಕಗಳಿಂದ ಸರ‍್ವಜನಿಕ ಜೀವನದಲ್ಲಿದ್ದರೂ ಉತ್ತರ ರ‍್ನಾಟಕದ ಭಾಷೆಯ ಸೊಗಡನ್ನು ಬಿಟ್ಟು ಕೊಟ್ಟಿಲ್ಲ. ಅದೇ ಗಡಸುತನ ಇಂದಿಗೂ ಇದೆ. ನೇರ ನಡೆ ನುಡಿಗೆ ಹೆಸರಾದ ಇವರು ನಿಷ್ಕಳಂಕ ರಾಜಕಾರಣಿ ಎಂದೇ ಕರೆಯಿಸಿ ಕೊಂಡವರು.

ಇದರ ಜೊತೆ ಜೊತೆ “ಅವ್ವ ಸೇವಾ ಟ್ರಸ್ಟ” ಸ್ಥಾಪಿಸಿ ಕಳೆದ 15 ರ‍್ಷಗಳಿಂದ ಅಂಧ, ಅನಾಥ, ದೀನ ದಲಿತರು, ನೊಂದವರಿಗೆ, ಪ್ರತಿಭಾವಂತ ವಿದ್ಯರ‍್ಥಿಗಳಿಗೆ ಅಭಯ ಹಸ್ತ ಚಾಚುವ ಮೂಲಕ ಸಮಾಜಮುಖಿ ಕರ‍್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಮಾತೃ ಹೃದಯದ ಹೊರಟ್ಟಿಯವರು “ಅವ್ವ ಸೇವಾ ಟ್ರಸ್ಟ” ಮೂಲಕ ಸಾವಿರಾರು ಕುಟುಂಬಗಳ ಕಣ್ಣೀರನ್ನು ಒರೆಸಿದ್ದಾರೆ. ದೂರ ದೂರಾದ ತಂದೆ-ತಾಯಿ ಮಕ್ಕಳನ್ನು ಒಂದಾಗಿಸಿದ್ದಾರೆ.

ಶಿಕ್ಷಕರೊಬ್ಬರು ಶಿಕ್ಷಣ ಸಚಿವರಾಗಿ ಎರಡು ಬಾರಿ ಸಭಾಪತಿಯಾಗಿ ಆಯ್ಕೆಯಾಗಿದ್ದು ದೇಶದಲ್ಲಿಯೇ ಇತಿಹಾಸ. ಇಂತಹ ಬಹುಮುಖ ಸಾಧನೆಯ ವ್ಯಕ್ತಿತ್ವ ಹೊಂದಿರುವ ಬಸವರಾಜ ಹೊರಟ್ಟಿ ಅಂಥವರು ಶಿಕ್ಷಕ ವಲಯಕ್ಕೆ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯವೆಂದೇ ಸಮಸ್ತ ನಾಡಿನ ಶಿಕ್ಷಕ ಬಳಗ ಅತ್ಯಂತ ಹೃದಯ ತುಂಬಿ ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಾರೆ. ಹೊರಟ್ಟಿಯವರು ಸಹ ಶಿಕ್ಷಕ ಬಳಗಕ್ಕೆ ಆಲದ ಮರದಂತೆ ಸದಾ ಆಸರೆಯಾದವರು. ಶಿಕ್ಷಕರೊಂದಿಗಿನ ನಿರಂತರ ನಂಟೇ 1980 ರಿಂದ ಸತತ ಏಳು ಬಾರಿ ಆಯ್ಕೆಯಾಗಲು ಕಾರಣ.45 ರ‍್ಷಗಳ ಕಾಲಘಟ್ಟದಲ್ಲಿ ಅದೆಷ್ಟು ಘಟನೆಗಳ ಏರುಪೇರು ಉಂಟಾಗಿವೆಯೋ? ಆದರೂ ಪ್ರಜ್ಞಾವಂತ ಶಿಕ್ಷಕ ಸಮೂಹದ ನಾಯಕರಾಗಿ ಸಂಘಟಿಕರಾಗಿ, ಹೋರಾಟಗಾರರಾಗಿ, ಮುತ್ಸದ್ದಿಯಾಗಿ ಶಿಕ್ಷಕ ಲೋಕದಲ್ಲಿ ಇಂದಿಗೂ ಒಬ್ಬ ಜನ ಪ್ರತಿನಿಧಿಯಾಗಿ ಮೂಡಿಸಿದ ಛಾಪು ಊಹೆಗೂ ನಿಲುಕದ ವ್ಯಕ್ತಿತ್ವವಾಗಿ ರೂಪಗೊಳಸಿರುವ ಶ್ರೇಯಸ್ಸು ಬಸವರಾಜ ಹೊರಟ್ಟಿಯವರನ್ನು ಸತತ 8 ಬಾರಿ ಆಯ್ಕೆಗೊಳಿಸಲು ನಿರಂತರ ಬೆಂಬಲ ನೀಡಿದ ಸಮಸ್ತ ಶಿಕ್ಷಕ ಸಮುದಾಯಕ್ಕೆ ಎಲ ್ಲಕರ‍್ತಿ ಸಲ್ಲಲೇಬೇಕು. ಹೊರಟ್ಟಿಯವರು ಸಹ ಶಿಕ್ಷಕ ಬಳಗನ್ನು ಸ್ಮರಿಸಿಕೊಂಡು ಹಲವಾರು ಬಾರಿ ಹೇಳಿದ್ದಾರೆ. ಇಂದು ನಾನೇನೆಲ್ಲಾ ಆಗಿದ್ದರೆ ಆದಕ್ಕೆ ಕಾರಣ ನಾಡಿನ ಸಮಸ್ತ ಶಿಕ್ಷಕ ಬಳಗ. ಆ ಎಲ್ಲ ಗೌರವ ಶ್ರೇಯಸ್ಸು ವಿಶೇಷವಾಗಿ ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಸಮಸ್ತ ಶಿಕ್ಷಕ ಬಂಧುಗಳಿಗೆ ಸಲ್ಲುತ್ತದೆ ಎಂದು ಅತ್ಯಂತ ಅಭಿಮಾನದಿಂದ ಬಸವರಾಜ ಹೊರಟ್ಟಿಯವರು ಸದಾ ಹೇಳುತ್ತಿರುತ್ತಾರೆ. ಏನೆಲ್ಲ ದಾಖಲೆಗಳಾದರೂ ಅದಕ್ಕೆ ಕಾರಣ ಶಿಕ್ಷಕ ಬಳಗ. ಇಂತಹ ಶಿಕ್ಷಕ ಬಳಗವನ್ನು ಹೊರಟ್ಟಿಯವರು ಪಡೆದಿದ್ದು ಭಾಗ್ಯವೆಂದೇ ಹೇಳಿದರೆ ತಪ್ಪಾಗಲಾರದು.

ಬಸವರಾಜ ಹೊರಟ್ಟಿಯವರ 8ನೇ ಬಾರಿ ಐತಿಹಾಸಿಕ ಗೆಲುವು ನಾಡಿನ ಸಮಸ್ತ ಶಿಕ್ಷಕರಿಗೆ ಅಭಿಮಾನಿಗಳಿಗೆ ಇದೊಂದು ಎಂದೂ ಮರೆಯದ ಕ್ಷಣ. ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಾಡಿನ ಸಮಸ್ತ ಶಿಕ್ಷಕರು, ಅಭಿಮಾನಿಗಳು, ಹಿತೈಷಿಗಳು ಸಾಕ್ಷಿಯಾಗೋಣ. ಇಂತಹ ಅಪರೂಪದ ಸಂತಸದ ಘಳಿಗೆ ಮತ್ತೊಮ್ಮೆ ಸಿಗಲಾರದು. ಸಂತಸದ ಹಬ್ಬದಲ್ಲಿ ಸಂತೋಷದ ಕ್ಷಣ ಕಳೆಯಲು ಸಮಸ್ತ ಶಿಕ್ಷಕರು, ಹೊರಟ್ಟಿಯವರ ಹಿತೈಷಿಗಳು, ಅಭಿಮಾನಿಗಳು, ಭಾಗಿಯಾಗಲು ಕೋರಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 918 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 918 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11923…

ಡಿಎಸ್ಎಸ್ ಭೀಮವಾದ ಜಿಲ್ಲಾಧ್ಯಕ್ಷರಾಗಿ ದೇವರಾಜ ಉಳೇನೂರು ಆಯ್ಕೆ

ಉತ್ತರಪ್ರಭ ಕಾರಟಗಿ: ರಾಜ್ಯ ಅಧ್ಯಕ್ಷರಾದ ಆರ್.ಮೋಹನ್ ರಾಜ್, ರಾಜು.ಎಮ್.ತಳವಾರ ಅವರ ಆದೇಶದ ಮೇರೆಗೆ ಕರ್ನಾಟಕ ದಲಿತ…

ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಹುಡುಗಿಯ ಭಯಾನಕ ಕತೆ!

ಕಳೆದ ನಾಲ್ಕು ವರ್ಷಗಳ ಹಿಂದೆ ನಾಗಾಲ್ಯಾಂಡ್‌ನಿಂದ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬಂದವಳು ಬೆಂಗಳೂರಿಗೆ ಬಂದವಳು ಆಪ್ತರೊಂದಿಗೆ ಜೈಲು ಪಾಲಾಗಿದ್ದಾರೆ.

ಅರಣ್ಯ ಹುತಾತ್ಮರ ದಿನಾಚರಣೆ”ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಗಳ ಪಾತ್ರ ಮಹತ್ವದ್ದು”

ಉತ್ತರಪ್ರಭ ಸುದ್ದಿಆಲಮಟ್ಟಿ: ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಸಂರಕ್ಷಣೆಯ ಜತೆಗೆ ಅರಣ್ಯ ಬೆಳೆಸುವಲ್ಲಿಯೂ ಮಹತ್ವದ ಪಾತ್ರ…