ಗುಲಾಬಚಂದ ಜಾಧವ
ಆಲಮಟ್ಟಿ:
ಮೊಗ್ಗಿನ ಎಳೆ ಮನಗಳಲ್ಲಿ ಸಸ್ಯ ಸಂಭ್ರಮ ಮೊಳಗಿತ್ತು. ಅಮಿತೋತ್ಸಾಹದ ಅಲೆಯಲ್ಲಿ ಹಸಿರೀಕರಣದ ಕಾಯಕಕ್ಕೆ ಅವರೆಲ್ಲಾ ಅಣಿಯಾಗಿದ್ದರು. ಅಲ್ಲಿ ಸಸ್ಯ ಪ್ರೇಮಲೋಕದ ಆರಾಧನೆ ಪೂಜ್ಯ ಭಾವದಿಂದ ಸಾಗಿತ್ತು. ಸಸಿ-ಶಿಶು-ಚಿಣ್ಣರ-ಗುರುಮಾತೆಯರ ಹಸಿರು ಮೇಳ ಮಿಂದಿತ್ತು. ಹಸಿಹಸಿರಿನ ಹೊನಲು ನೋಟ ಸಖತ್ ಹರುಷದಿಂದ ಕಂಗೊಳಿಸುತ್ತಿತ್ತು..!


ಅರ್ಥಪೂರ್ಣ, ವಿಶಿಷ್ಟ ರೀತಿಯಲ್ಲಿ ಚಿನ್ಮಯಿ ಚಿಣ್ಣರು ಪರಿಸರ ಪ್ರಜ್ಞೆ ಮೆರೆದು ಗಮನ ಸೆಳೆದಿರುವ ದೃಶ್ಯ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಆವರಣದಲ್ಲಿ ಕಂಡಿತು.
ಪುಟಾಣಿ ಮಕ್ಕಳೊಂದಿಗೆ ಆಚರಿಸಿದ ಪರಿಸರ ದಿನಾಚರಣೆ ವಿಶೇಷ ರೂಪ ಪಡೆಯಿತು. ಹಸಿರು ಚಿಗುರೆಲೆಗಳ ಸಸಿಗಳನ್ನು ಮಕ್ಕಳು ತಮ್ಮ ಪುಟ್ಟ ಕೈಯಲ್ಲಿ ಹಿಡಿದು ಭೂವೋಡಲಿನಲ್ಲಿ ನೆಟ್ಟು ಖುಷಿ ಪಟ್ಟರು. ಸಸಿಗಳಿಗೆ ನೆಲದ ಸ್ಪರ್ಶ ನೀಡಿ ಪರಿಸರ ಪ್ರಜ್ಞೆ ಪ್ರೀತಿಯಿಂದ ಮೆರೆದರು. ಪರಿಸರ ಉನ್ಮಾದದಲ್ಲಿ ತೇಲಿದರು.
ಶಾಲೆಯ ಎಲ್ಲ ಗುರುಮಾತೆಯರು ಹಸಿರುಡುಗೆಯಲ್ಲಿ ಮಿನುಗಿ ಪುಟ್ಟ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರು.
ಹೆಚ್ಚು ಗಿಡಗಳನ್ನು ನೆಡುವುದು, ನೀರಿನ ಇತಿಮಿತಿ ಬಳಕೆ, ನೈಸರ್ಗಿಕ ಸಂಪನ್ಮೂಲದ ರಕ್ಷಣೆ, ಶುಚಿತ್ವ ಕಾಪಾಡುವಿಕೆ, ಸ್ವಚ್ಚತೆ,ಆರೋಗ್ಯ ಕುರಿತಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಪರಿಸರ ಮಹತ್ವ ಸಾರಲಾಯಿತು.
ಮುಖ್ಯ ಗುರುಮಾತೆ ತನುಜಾ ಪೂಜಾರಿ, ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಿಗೆ ಪರಿಸರದ ಮಹತ್ವ, ಕಲ್ಪನೆ ಮೂಡಿಸಿದರೆ ಮುಂದಿನ ದಿನಮಾನಗಳಲ್ಲಿ ಫಲ ಕಾಣಬಹುದು. ಇಂದಿನ ಯುವಪೀಳಿಗೆಯೇ ಭವಿಷ್ಯತ್ತಿನ ಆಶಾಕಿರಣದ ಏಳ್ಗೆ. ಪರಿಸರ ರಕ್ಷಣೆಯೊಂದು ಸಾಮಾಜಿಕ ಜವಾಬ್ದಾರಿ. ಸ್ವಸ್ಥ ಪರಿಸರವೇ ನಮ್ಮೆಲ್ಲರ ಜೀವನಾಡಿ. ಆ ಕಾರಣ ಮಕ್ಕಳ ಮನದಲ್ಲಿ ಗಟ್ಟಿಯಾಗಿ ಉಳಿಯುವಂತೆ ಅರಿವು ಮೂಡಿಸಲು ಸಣ್ಣದೊಂದು ಪ್ರಯತ್ನ ನಡೆಸಿ ಉತ್ತೇಜಿಸಲಾಗಿದೆ. ವಿದ್ಯಾರ್ಥಿ ದೆಸೆಯಿಂದ ಪರಿಸರ ಕಳಕಳಿ ಅತ್ಯಗತ್ಯ ಎಂದರು.
ಶಿಕ್ಷಕಿ ಸಿದ್ದಮ್ಮ ಅಂಗಡಿ, ಆಧುನೀಕರಣದ ಮಾಯಾಜಾಲದಲ್ಲಿಂದು ಪರಿಸರ ನಿರ್ಲಕ್ಷಿಸಿಸಲಾಗುತ್ತಿದೆ.‌ ಗಿಡಮರ ನಾಶದಿಂದ ಮನುಕುಲ ಸೇರಿದಂತೆ ಪ್ರಾಣಿ, ಪಕ್ಷಿಗಳು ಸಹ ಅವನತಿಯತ್ ಸಾಗಿವೆ. ನಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ತೋರದಿದ್ದರೆ ಮುಂದೆ ಜೀವ ವೈವಿಧ್ಯತೆಗೆ ಮಾರಕವಾಗಲಿವೆ ಎಂದರು.
ಇನ್ನೋರ್ವ ಶಿಕ್ಷಕಿ ಕವಿತಾ ಮರಡಿ, ಹಸಿರು ಪರಿಸರವೇ ಮನುಕುಲದ ಆಸ್ತಿ.‌ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಿದರೆ ಶುದ್ಧ ಆಮ್ಲಜನಕ ಯಥೇಚ್ಛವಾಗಿ ಪಡೆಯಬಹುದು. ಚಿಕ್ಕವರಿದ್ದಾಗಲೇ ಮಕ್ಕಳು ಪರಿಸರ ಪ್ರೇಮಿಗಳಾಗಬೇಕು. ಪ್ರಕೃತಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಆಮಲೊಂದಿಗೆ ಸಸಿಗಳನ್ನು ನೆಡಲು ಮುಂದಾಗಬೇಕೆಂದರು. ಗುರುಮಾತೆಯರಾದ ಕಾಂಚನಾ ಕುಂದರಗಿ, ಸರೋಜಾ ಕಬ್ಬೂರ,ಶಾಹೀನ ಬಾಗಲಕೋಟ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ಎಸ್.ಎಸ್.ಎಲ್.ಸಿ-ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಪಾಲಕ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ..

ರಾಜ್ಯದಲ್ಲಿ ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಜೂನ್ 18 ಕ್ಕೆ ಪಿಯುಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ವಾಯುಭಾರ ಕುಸಿತ – ಒಂದೇ ಜಿಲ್ಲೆಯ ಬರೋಬ್ಬರಿ 148 ಗ್ರಾಮಗಳಲ್ಲಿ ಪ್ರವಾಹ ಭೀತಿ!

ಕಲಬುರಗಿ : ವಾಯುಭಾರ ಕುಸಿತದಿಂದಾಗಿ ಉತ್ತರ ಕರ್ನಾಟಕದಲ್ಲಿ ಮಳೆರಾಯನ ಅಟ್ಟಹಾಸ ಮುಂದುವರೆದಿದೆ. ಇದರಿಂದಾಗಿ ಜನ ಬೀದಿಗೆ ಬಂದು ನಿಂತಿದ್ದಾರೆ.