ಆಲಮಟ್ಟಿ: ಇಂದು ಸಂಜೆ 6 ಗಂಟೆಯ ಸುಮಾರಿಗೆ ಗುಡುಗು,ಮಿಂಚು ಮಿಶ್ರಿತ ಭಾರೀ ಗಾಳಿಯೊಂದಿಗೆ ಅರ್ಧಗಂಟೆಗು ಹೆಚ್ಚು ಕಾಲ ಇಲ್ಲಿ ರಭಸದಿಂದ ಮಳೆ ಸುರಿಯಿತು.
ಗಾಳಿ,ಮಳೆಯ ಹೊಡೆತಕ್ಕೆ ಆಲಮಟ್ಟಿಯ ವಿವಿಧೆಡೆ ಹಲವಾರು ಗಿಡಮರಗಳು ನೆಲಕ್ಕುರುಳಿವೆ. ರಸ್ತೆ ಪಕ್ಕದಲ್ಲಿದ್ದ ಬೃಹತ್ ಗಿಡಮರಗಳು ಧರೆಗುರಳಿವೆ.

ಗುರುವಾರ ಸಂಜೆ ಆಲಮಟ್ಟಿಯಲ್ಲಿ ಗುಡುಗು,ಮಿಂಚು,ಗಾಳಿ ಮಿಶ್ರಿತ ರಭಸದ ಮಳೆಗೆ ಅನೇಕ ಗಿಡಮರಗಳು ನೆಲಕ್ಕುರುಳಿರುವ ದೃಶ್ಯ.

ಇಲ್ಲಿನ ವಿವಿಧ ಉದ್ಯಾನಗಳಲ್ಲಿ ,ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ಹಾಗು ಕೆಬಿಜೆಎನ್ಎಲ್ ವಸಾಹತು ಕಟ್ಟಡ ಪ್ರದೇಶಗಳಲ್ಲಿ ಹೆಮ್ಮರವಾಗಿ ಬೆಳೆದಿರುವನೂರಾರು ಗಿಡಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆ ಪಕ್ಕದಲ್ಲಿದ್ದ ಬೃಹತ್ ಗಿಡಗಳು ರಸ್ತೆ ಮೇಲೆ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆಯ ವಸಾಹತು ಪ್ರದೇಶದಲ್ಲಿ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಮನೆಗಳ ಬಳಿಯಲ್ಲಿನ ಗಿಡಮರಗಳು ಧರೆಗುರುಳಿವೆ. ಹಾನಿಗಳ ಬಗ್ಗೆ ಸದ್ಯ ಸ್ಪಷ್ಟ ಚಿತ್ರಣ ಲಭ್ಯ ಇಲ್ಲ.
ಜನ ಗಾಬರಿ ಮಿಂಚು,ಗುಡುಗಿನ ಸದ್ದಿಗೆ ಅಕ್ಷರಶಃ ರಸ್ತೆ ಮೇಲೆ ಸಂಚರಿಸುತ್ತಿದ್ದ ಜನ ಕ್ಷಣ ಹೊತ್ತು ಹೌಹಾರಿ ಆತಂಕಗೊಳ್ಳುವಂತಾಗಿತ್ತು.
ಮಧ್ಯಾಹ್ನ ದಿಂದಲೇ ಬಿಸಿಲು ಝಳದ ತಾಪ ಹೆಚ್ತಾಗಿತ್ತು.ಸಂಜೆವಾಗುತ್ತಲೇ ಆಗಸದಲ್ಲಿ ಮುಸುಕು ಮೋಡಗಳ ಸಂಚಲನ ಜೋರಾಗಿ ಸಾಗಿತ್ತು. ಕಪ್ಪು ಮೋಡಗಳಿಂದ ಎಲ್ಲಡೆ ಮುಸುಕು ವಾತಾವರಣ ಸೃಷ್ಟಿಯಾಯಿತು. ಆಲಮಟ್ಟಿ ಸುತ್ತಲೂ ಸುರಿದ ಇಂದಿನ ಮುಸ್ಸಂಜೆ ವರ್ಷಧಾರೆ ಸಿಂಚನ ತಂಪೆರೆಯಿತು. ಹಿತಕರ ಆಹ್ಲಾದಕರ ವಾತಾವರಣ ಸೃಷ್ಟಿಸಿತ
ಪರಿಶೀಲನೆ ಗಾಳಿ,ಮಳೆಯ ರಭಸಕ್ಕೆ ಧರೆಗುರುಳಿರುವ ಮರಗಳ ಸ್ಥಳಕ್ಕೆ ಆರಣ್ಯಾಧಿಕಾರಿ ಮಹೇಶ ಪಾಟೀಲ,ಸುಪರಟೆಂಡಂಟ್ ಇಂಜನಿಯರ ಡಿ.ಬಸವರಾಜ ಭೇಟಿ ನೀಡಿ ಪರಿಶೀಲಿಸಿದರು.
ಮಳೆ ರೈತರು ಹರ್ಷ ಈ ರೋಹಿಣಿ ಮಳೆ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು ಕೃಷಿ ಚಟುವಟಿಕೆಗಳಲ್ಲಿ ಸಂತಸದಿಂದ ಅಣಿಗೊಳ್ಳುವಂತೆ ಮಾಡಿದೆ.

Leave a Reply

Your email address will not be published. Required fields are marked *

You May Also Like

ಆಸ್ಪತ್ರೆಯ ಮುಂದೆಯೇ ಮಹಿಳೆಯ ತಲೆಯಮೇಲೆ ಹರಿದ ಟ್ರಾಕ್ಟರ್

ಸ್ಕೂಟಿ ಮೇಲೆ ಹೋಗುತ್ತಿದ್ದ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ, ಹಿಂಬಾಗದಲ್ಲಿದ್ದ ಟ್ರಾಕ್ಟರ್ ಮಹಿಳೆಯ ತಲೆಯ ಮೇಲೆ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಬಿ ಆರ್ ಪಾಟೀಲ್ ಆಸ್ಪತ್ರೆಯ ಮುಂಬಾಗದಲ್ಲಿ ನಡೆದಿದೆ.

ಹೂವು ಮಾರಿ ಬದುಕು ಕಟ್ಟಿಕೊಂಡವನ ಹೂ ಮನಸ್ಸು

ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ ೧೨ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.

ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ

ಜೂನ್ 30ರವರೆಗೆ ಲಾಕ್ ಡೌನ್ ಮುಂದುವರೆಸಿ ಸರ್ಕಾರ ಆದೇಶಿಸಿದೆ. ಮುಂದುವರೆದ ಲಾಕ್ ಡೌನ್ ನಲ್ಲಿ ಏನೆಲ್ಲ ಆರಂಭವಾಗಲಿವೆ ಎನ್ನುವುದನ್ನು ಈ ಕೆಳಗೆ ನೀಡಲಾಗಿದೆ.