ಉತ್ತರಪ್ರಭ
ಆಲಮಟ್ಟಿ:
ಪ್ರಸಕ್ತ 2022-23 ನೇ ಸಾಲಿನಲ್ಲಿ ರಾಜ್ಯದ ಸಕಾ೯ರಿ ಪ್ರೌಢಶಾಲೆಗಳಲ್ಲಿ ಅವಶ್ಯ ಹೆಚ್ಚುವರಿ ವಿಶೇಷ ಶಿಕ್ಷಕರ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಕಾ೯ರ ಮುಂದಾಗಿದ್ದು ಕೂಡಲೇ ಈ ಅವೈಜ್ಞಾನಿಕ ವಿಧಾನದ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ವಿಜಯಪುರ ಜಿಲ್ಲಾ ಸಕಾ೯ರಿ ಚಿತ್ರಕಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಆಲಮಟ್ಟಿಯಲ್ಲಿ ಈಚೆಗೆ ಮನವಿಯೊಂದನ್ನು ಸಲ್ಲಿಸಿ ವಿಶೇಷ ಶಿಕ್ಷಕರಿಗೆ ಎದುರಾಗಿರುವ ಸ್ಥಳಾಂತರದ ಸಮಸ್ಯೆಯ ಅಳಲನ್ನು ತೋಡಿಕೊಂಡು ಮನವರಿಗೆ ಮಾಡಲು ಯತ್ನಿಸಿದ್ದಾರೆ.
ಒಂದು ಕಡೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ಬಂದಿದೆ.ಇಂಥ ಸಂದರ್ಭದಲ್ಲಿ ವಿಶೇಷ ಶಿಕ್ಷಕರನ್ನು ಅವೈಜ್ಞಾನಿಕವಾಗಿ ಹೆಚ್ಚುವರಿ ಹುದ್ದೆ ಎಂದು ಹೇಳಿ ಬೇರೆಡೆ ಎತ್ತಂಗಡಿಗೆ ಮುಂದಾದರೆ ಇಡೀ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಧಕ್ಕೆ ಬರಲಿದೆ ಎಂದು ಚಿತ್ರಕಲಾ ಶಿಕ್ಷಕರ ಸಂಘ ತೀವ್ರತರವಾದ ಆತಂಕ ವ್ಯಕ್ತಪಡಿಸಿದೆ.
3 ರಿಂದ 5 ವಿಭಾಗಗಳಿರುವ ಸಕಾ೯ರಿ ಪ್ರೌಢಶಾಲೆಗಳಲ್ಲಿನ ಚಿತ್ರಕಲೆ,ಸಂಗೀತ, ನಾಟಕ, ನೃತ್ಯ, ವೃತ್ತಿ ವಿಶೇಷ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಈ ಶಿಕ್ಷಕರ ವಲಯದಲ್ಲಿಗ ಗೊಂದಲ ಮೂಡಿದೆ.ಆತಂಕ ಮನೆ ಮಾಡಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಎಲ್ಲ ವಿಷಯದಲ್ಲೂ ಅನುಕೂಲಕರವಾದ ಬೆಳವಣಿಗೆ ಕಲ್ಪಿಸುವರೇ ಅನಾನುಕೂಲ ಸೃಷ್ಟಿಸಿದರೆ ಹೇಗೆ ? ಎಂದು ಪ್ರಶ್ನಿಸಿರುವ ಸಂಘ ವಿಶೇಷ ಶಿಕ್ಷಕರನ್ನು ಇಷ್ಟೊಂದು ಪ್ರೀತಿಯಿಂದ ಕಾಣದಿರಿವೆಂದು ಶಪಿಸುತ್ತಿದೆ. ವಿಶೇಷ ಶಿಕ್ಷಕರನ್ನು ಕೈ ಬಿಡುತ್ತಿರುವ ಉದ್ದೇಶವೆನೆಂದು ತಿಳಿಯದೆ ಶಿಕ್ಷಕ ಸಮೂಹ ದಿಗಿಲುಗೊಂಡಿದೆ. ರಾಜ್ಯ ಸಕಾ೯ರ ದೇಶದಲ್ಲೇ ಮೊಟ್ಟ ಮೊದಲಿಗೆ ರಾಷ್ಟ್ರೀಯ ಶಿಕ್ಷಣ ನೀತಿ – 2020 (ಎನ್.ಸಿ.ಪಿ) ಜಾರಿಗೊಳಿಸಿಕೊಳ್ಳುತ್ತಿರುವ ರಾಜ್ಯವೆಂದು ಘೋಷಿಸಿರುವುದು ಸಂತಸದ ವಿಚಾರ. ಆದರೆ ಇಂಥ ಸಮಯದಲ್ಲಿ ವಿಶೇಷ ಶಿಕ್ಷಕರನ್ನು ಶಾಲೆಗಳಿಂದ ಹೊರ ಹಾಕುವ ಪ್ರಕ್ರಿಯೆ ಸಾಗುತ್ತಿರುವುದು ಖೇದಕರ. ಶಾಲೆಯ ಮಕ್ಕಳು ಕಲಾ ಶಿಕ್ಷಣದಿಂದ ವಂಚಿತರಾಗುತ್ತಿರುವುದು ದುರದೃಷ್ಟಕರ ಸಂಗತಿ. ಇದು ಮಕ್ಕಳಿಗೆ ಮಾಡಿದ ಘೋರ ಅನ್ಯಾಯ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.
ಹಿಂದಿನ ಶಿಕ್ಷಣ ವರದಿಗಳು ಎನ್.ಸಿ.ಎಫ್- 2005 ರಲ್ಲಿ ಕಲಾ ಶಿಕ್ಷಣವನ್ನು 40 ಮಕ್ಕಳಿರುವ ಪ್ರತಿ ಶಾಲೆಯಲ್ಲೂ ಆಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಿದೆ. ಸದ್ಯದ ಎನ್.ಇ.ಪಿ-2020 ರಲ್ಲಿ ಕಲೆ,ಸಂಸ್ಕೃತಿ,ಕರಕುಶಲೆಯ ಆದ್ಯತೆ ಕುರಿತು ವಿವರವಾಗಿ ತಿಳಿಸಿದೆ. ಕಲಿಕೆಯ ವಿವಿಧ ವಿಷಯಗಳ ನಡುವಿನ ಹಾನಿಕಾರಕ ಶ್ರೇಣಿಕರಣ ಮತ್ತು ವ್ಯತ್ಯಾಸಗಳನ್ನು ಹೋಗಲಾಡಿಸಲು ಕಲೆ ಮತ್ತು ವಿಧಾನಗಳ ನಡುವೆ, ಪಠ್ಯಕ್ರಮ ಹಾಗು ಪಠ್ಯೇತರ ಚಟುವಟಿಕೆಗಳ ಮಧ್ಯೆ, ವೃತ್ತಿಪರ ಮತ್ತು ಶೈಕ್ಷಣಿಕ ವಿಷಯಗಳ ನಡುವೆ ಬಿಗಿಯಾದ ವಿಭಜನೆಗಳಿಲ್ಲದ ಶಿಕ್ಷಣ ವ್ಯವಸ್ಥೆಯ ರೂಪಣೆ,ಜ್ಞಾನದ ಏಕತೆ,ಸಮಗ್ರತೆ ಖಚಿತಪಡಿಸಿಕೊಳ್ಳಲು ಬಹು ವಿಷಯಗಳ ಕ್ಷೇತ್ರಕ್ಕಾಗಿ ವಿಜ್ಞಾನ, ಸಾಮಾಜಿಕ ವಿಜ್ಞಾನ, ಕಲೆ, ಮಾನವಿಕ ವಿಷಯಗಳು ಮತ್ತು ಕ್ರೀಡೆಗಳನ್ನು ಒಳಗೊಂಡ ಬಹುಮುಖಿ ಸಮಗ್ರ ಶಿಕ್ಷಣ ಅಂಶಗಳ ಸಾರಾಂಶ ತಿಳಿಪಡಿಸಲಾಗಿದೆ. ಹಾಗು 01-06-2019 ರ ಜ್ಞಾಪನದಲ್ಲಿ ಚಿತ್ರಕಲಾ ಗ್ರೇಡ್ ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸತಕ್ಕದ್ದಲ್ಲವೆಂಬ ಉಲ್ಲೇಖವಿದೆ. ವಿಶೇಷ ಶಿಕ್ಷಣ ಎಲ್ಲ ವಿಷಯಗಳಿಗೆ ಪೂರಕವಾದ ವಿಷಯವಾಗಿ ಆನಂದದಾಯಕ ಕಲಿಕಾ ವಾತಾವರಣ ಸೃಜನಶೀಲವಾಗಿ ಕಲ್ಪಿಸುತ್ತದೆ. ಅದಾಗ್ಯೂ ಈ ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ವಿಶೇಷ ಶಿಕ್ಷಣದ ವಿರುದ್ಧ ಗದಾಪ್ರಹಾರ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಅಧಿಕೃತ ಹೆಚ್ಚುವರಿ ಹುದ್ದೆ ಗುರುತಿಸಿ ಸ್ಥಳಾಂತರಿಸುವ ಜ್ಞಾಪನ ಹೊರಡಿಸಿರುವುದು ಇಡೀ ವಿಶೇಷ ಶಿಕ್ಷಕ ಸಮೂಹಕ್ಕೆ ಆತಂಕ ಸೃಷ್ಟಿಸಿದೆ. ಜೊತೆಗೆ ಮಕ್ಕಳಿಗೆ ಘೋರ ಅನ್ಯಾಯವಾದಂತಾಗಿದೆ. ಕಲೆ, ಸಂಸ್ಕೃತಿ, ಕರಕುಶಲತೆ ಅಧ್ಯಯನ ನಶಿಸಿ ಹೋಗುತ್ತಿರುವ ಈ ಸನ್ನಿವೇಶದಲ್ಲಿ ವಿಶೇಷ ಶಿಕ್ಷಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳಿಗೆ ಚಾಲನೆ ನೀಡಿರುವುದು ಮತ್ತಿಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಂಘ ಅಳಲನ್ನು ಹೊರಹಾಕಿದೆ.
3 ರಿಂದ 5 ವಿಭಾಗಗಳಿರುವ ರಾಜ್ಯದ ಸಕಾ೯ರಿ ಪ್ರೌಢಶಾಲೆಗಳಲ್ಲಿ ವಿಶೇಷ ಶಿಕ್ಷಕರ ಒಂದು ಹುದ್ದೆ( ಚಿತ್ರಕಲೆ, ಸಂಗೀತ, ನಾಟಕ, ವೃತ್ತಿ, ನೃತ್ಯ) 8+1 ಎಂದು ಕಡ್ಡಾಯವಾಗಿ ಸ್ತರ ವಿನ್ಯಾಸ ಪುನರ್ ನಿಗದಿಪಡಿಸಿ ಸಮಗ್ರ ಶಿಕ್ಷಣದ ಕಲಿಕೆಗೆ ಅನುವು ಮಾಡಿಕೊಡಬೇಕು ಎಂದು ಸಕಾ೯ರಕ್ಕೆ ಆಗ್ರಹಿಸಲಾಗಿದೆ.
ಸಕಾ೯ರಿ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಚಿಕ್ಕೂರ,ಉಪಾಧ್ಯಕ್ಷ ಜಿ.ಸಿ.ಸಬರದ, ಪ್ರಧಾನ ಕಾರ್ಯದರ್ಶಿ ಆನಂದ ಝಂಡೆ, ಕೋಶಾಧ್ಯಕ್ಷ ಡಿ.ಜಿ.ಬಂಡಾರಕವಟೆ, ಬ.ಬಾಗೇವಾಡಿ ತಾಲೂಕಾ ಪ್ರತಿನಿಧಿ ಜೆ.ಎನ್.ರೂಗಿ, ಬಿ.ಆರ್.ಪ್ರಧಾನಿ, ಕೃಷ್ಣಾ ಬಡಿಗೇರ, ಬೆಲ್ಲುಟಗಿ,ಬಾಗೇವಾಡಿ ಮೊದಲಾದವರ ನೇತೃತ್ವದಲ್ಲಿ ಶಿಕ್ಷಣ ಸಚಿವರಿಗೆ ಮನವಿ ಪತ್ರ ಅಪಿ೯ಸಿ ವಿಶೇಷ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 61 ಕೊರೊನಾ ಪಾಸಿಟಿವ್ : ಯಾವ ಊರಲ್ಲಿ ಎಷ್ಟು?

ಜಿಲ್ಲೆಯಲ್ಲಿ ರವಿವಾರ ದಿ.26 ರಂದು ಒಟ್ಟು 61 ಕೊವಿಡ್-19 ಸೋಂಕು ಪ್ರಕರಣ ದೃಢಪಟ್ಟಿವೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಬ್ಲೇಡ್‌ನಿಂದ ಇರಿದುಕೊಂಡು ಅತ್ಮಹತ್ಯೆಗೆ ಯತ್ನ

ಓರ್ವ ವ್ಯಕ್ತಿ ದೇಹಕ್ಕೆ ಎಲ್ಲೆಂದರಲ್ಲಿ ಬ್ಲೇಡ್‌ನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಭಯ!: ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆಯಾ ಜಿಮ್ಸ್..!

ಗದಗ: ನಿನ್ನೆ ರಾತ್ರಿಯಿಂದಲೇ ಕೊರೊನಾ ಪಾಸಿಟಿವ್ ಎಂದು 30 ಸೊಂಕಿತರ ಲೀಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ…