ವರದಿ: ಗುಲಾಬಚಂದ ಜಾಧವ

ಉತ್ತರಪ್ರಭ
ಆಲಮಟ್ಟಿ:
ಮೂವತ್ತು ನಾಲ್ಕು ವಸಂತಗಳ ಬಳಿಕ 21 ನೇ ಶತಮಾನ ಕಂಡ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರತಿಯೊಬ್ಬರು ಸರಿಯಾಗಿ ಅಥೈ೯ಸಿಕೊಳ್ಳಬೇಕಲ್ಲದೆ ಶಿಕ್ಷಣ ನೀತಿ ಜಾರಿಯಲ್ಲಿ ಸಹಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.


ಇಲ್ಲಿನ ಕೆಬಿಜೆಎನ್ ಎಲ್ ಸಮೂದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಶೈಕ್ಷಣಿಕ ಕಾಯಾ೯ಗಾರದಲ್ಲಿ ಮಾತನಾಡಿದ ಅವರು, ಈ ಹೊಸ ಶಿಕ್ಷಣ ನೀತಿಯು ಮಕ್ಕಳನ್ನು ಎಲ್ಲ ರಂಗದಲ್ಲಿ ಸಜ್ಜುಗೊಳಿಸುವ ತಾಜಾತನ ಹೊಂದಿದೆ.ಆ ಮೂಲಕ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಬರಲಿದೆ ಎಂದರು
ಸ್ವಾತಂತ್ರ್ಯೋತ್ತರದ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ದೊಡ್ಡ ಸವಾಲಾಗಿ ಕಾಡುತ್ತಲ್ಲಿದೆ. ಉದ್ಯೋಗಕ್ಕೂ ನಾವು ಕಲಿತಿರುವ ಶಿಕ್ಷಣಕ್ಕೂ ವ್ಯತ್ಯಾಸ ಇದೆ. ಈ ಗ್ಯಾಪ್ ನ್ನು ಸರಿದೂಗಿಸಬೇಕಾದರೆ ಶಿಕ್ಷಣದ ನೀತಿ, ರೂಪರೇಷೆಗಳನ್ನು ಬದಲಿಸಲೇಬೇಕು ಎಂಬ ಆಲೋಚನೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಒಂದು ದಿಟ್ಟ ಹೆಜ್ಜೆಯಿರಿಸಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದಾರೆ. ಅವರು ಆರಂಭದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಬಗ್ಗೆ ನುಡಿಯುತ್ತಿದ್ದರು.ಇಂದು ವೆಕೆಷನ್ ಎಜುಕೇಷನ್ ಕ್ಕೆ ಉತ್ಕಟ ಸ್ಕಿಲ್ ಬೇಕು ಎಂದು ಮುಂದಾಲೋಚನೆಯಿಂದ ಪ್ರಸ್ತಾಪಿಸುತ್ತಿದ್ದಾರೆ. ಆರ್.ಟಿ.ಇ.ಪರಭಾರೆ ಹೊಂದಿರುವ ಶಿಕ್ಷಣ ವ್ಯವಸ್ಥೆ ನಿಮಾ೯ಣ ಮಾಡುವ ನೀತಿಯನ್ನು ಜಾರಿ ಮಾಡಿದ್ದಾರೆ. ಪ್ರಧಾನಿಯವರ ಈ ದೂರ ದೃಷ್ಟಿ ನಿಜಕ್ಕೂ ಪ್ರಶಂಸನೀಯ ಎಂದರು.
ಹೊಸ ಶಿಕ್ಷಣ ನೀತಿ ಕಂಡ ಕನಸು ಸಾಕಾರಗೊಳ್ಳಬೇಕು. ಶಿಕ್ಷಕರು ಆ ದಿಸೆಯಲ್ಲಿ ಮನಸ್ಸು ಮಾಡದ ಹೊರತು ಶಿಕ್ಷಣ ಬದಲಾಗಲ್ಲ ಎಂದ ಅವರು, ಈ ವಾಸ್ತವಾಂಶದ ಅರಿವು ಶಿಕ್ಷಕ ವೃಂದದ ಗಮನಕ್ಕೆ ತರಲು ರಾಜ್ಯದಾದ್ಯಂತ ಶಿಕ್ಷಣ ಸಚಿವರು ಪ್ರವಾಸಿ ಮಾಡಿ ಶಿಕ್ಷಣ ನೀತಿಯ ಪಾರವತೆ ಉಣಬಡಿಸುತ್ತಿದ್ದಾರೆ ಎಂದರು.
ನಿಜವಾದ ರಾಷ್ಟ್ರ ನಿಮಾ೯ಣದ ಕಾರ್ಯ ನಾಲ್ಕು ಗೋಡೆಗಳ ಮಧ್ಯದ ಶಾಲೆಗಳಲ್ಲಿ ನಡೆಯುತ್ತಿದೆ. ಶಿಕ್ಷಕರು ರಾಷ್ಟ್ರ ನಿಮಾ೯ಪಕರು ಎಂದು ಅಂದು ನೆಹರು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದರೆ ಯಾವತ್ತೂ ಉತ್ತಮ ಶಿಕ್ಷಣ ನೀತಿ ರೂಪಿಸಲು ಮನಸ್ಸು ತೋರಲಿಲ್ಲ ಎಂದರು.
ಶಿಕ್ಷಣ ನೀತಿ ರಚಿಸುವ ಸಂದರ್ಭದಲ್ಲಿ ಆ ಶಿಕ್ಷಣ ನೀತಿಯ ಬಗ್ಗೆ ಸಾಧಕ, ಭಾದಕದ ಕುರಿತು ಕ್ಲಾಸ್ ರೂಂ ಶಿಕ್ಷಕರ ಜೊತೆ ಮಾತನಾಡಿ ಚಚಿ೯ಸಿದ್ದು ಇದ್ದರೆ ಅದು ಕೇವಲ ನರೇಂದ್ರ ಮೋದಿಯವರ ಕಾಲದಲ್ಲಿ ಎಂಬುದು ಗಮನಾರ್ಹ. ಈಗ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ 20-20 ರ ಬಗ್ಗೆ ಚಚೆ೯ ಸಾಗುತ್ತಿದೆ. ಎರಡು ಲಕ್ಷ ಕ್ಕೂ ಹೆಚ್ಚು ಜನರು,ತತ್ಞರು ಈ ಹೊಸ ಶಿಕ್ಷಣ ನೀತಿಗೆ ಡ್ರಾಫ್ಟ್ ಸಲಹೆಗಳನ್ನು ಕೊಡುವ ಕೆಲಸ ಮಾಡಿದ್ದಾರೆ ಎಂದರು.
ಸ್ವಾತಂತ್ರ್ಯೋತ್ತರ ದೇಶದ ಇತಿಹಾಸದಲ್ಲಿ ಯಾವುದಾದರು ನೀತಿಯ ಬಗ್ಗೆ ಜನರ ಮಧ್ಯದಲ್ಲಿ ಚಚೆ೯ವಾಗಿದ್ದರೆ ಅದು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಂದು ಹೆಮ್ಮೆಯಿಂದ ಹೇಳಬಹುದೆಂದರು.‌
ಶಿಕ್ಷಣ ನೀತಿ ಸಂಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಅದರ ಬದ್ದತೆಯನ್ನು ಸಾರಿ ಹೇಳುತ್ತದೆ.ಅದಕ್ಕೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆ. ಒಂದನೇ ಶಿಕ್ಷಣ ನೀತಿ 1968 ರಲ್ಲಿ, ಎರಡನೇದ್ದು 1986 ರಲ್ಲಿ ಜಾರಿಗೆ ಬಂದಿವೆ ಎಂದರು.
ಹೊಸ ಶಿಕ್ಷಣ ನೀತಿ ಬಗ್ಗೆ ಈಗಾಗಲೇ ತಾವು ವಿಜಯಪುರ ಜಿಲ್ಲೆಯಾದ್ಯಂತ ಸಂಚರಿಸಿ ಶಿಕ್ಷಕ ಬಂದುಗಳಿಗೆ ತಿಳಿ ಹೇಳಿರುವೆ. ಶಿಕ್ಷಕರ ಬೆಂಬಲ, ಆಶೀರ್ವಾದದಿಂದ ಎರಡು ಬಾರಿ ಎಂಎಲ್ಸಿಯಾಗಿ ಶಿಕ್ಷಕರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವೆ. ಶಿಕ್ಷಕರ ನೀತಿಯಿಂದ ಹೊಸ ಶಿಕ್ಷಣ ನೀತಿ ಸುವಿಚಾರ ಸವಿದಿರುವೆ. ತಮ್ಮೆಲ್ಲರ ಪ್ರೀತಿಯಿಂದ ಶಿಕ್ಷಣ ನೀತಿಯ ಪರವಾಗಿ ಕೆಲಸ ಮಾಡುವ ಅವಕಾಶ ಲಭಿಸಿದೆ. ಈ ಹಿಂದೆ ಸುರೇಶ್ ಕುಮಾರ ಅವರು ಈಗ ನಾಗೇಶ್ ಸಾಹೇಬರು ಒದಗಿಸಿಕೊಟ್ಚಿದ್ದಾರೆ. ಶಿಕ್ಷಣದ ಬದಲಾವಣೆ, ಅಭಿವೃದ್ಧಿ ಹಾಗು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ತಾವು ಸದಾ ಬದ್ದರಾಗಿರುವದಾಗಿ ಅರುಣ ಶಹಾಪುರ ಭರವಸೆ ನೀಡಿದರು.
ಪದವೀಧರ ಕ್ಷೇತ್ರದ ಎಂಎಲ್ಸಿ ಹಣಮಂತ ನಿರಾಣಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರ, ವ್ಯವಸ್ಥೆಗೆ ತಕ್ಕಂತೆ ಎಲ್ಲ ರಂಗಗಳು ಬದಲಾಗಬೇಕು. ಅದರಲ್ಲಿ ಶಿಕ್ಷಣ ವ್ಯವಸ್ಥೆ ಮೊದಲು ಸಮಗ್ರವಾಗಿ ಬದಲಾಗಬೇಕು ಎಂದರು.
ಹೊಸ ಆಯಾಮ, ಮೌಲ್ಯಾಧಾರಿತ, ಸಂಸ್ಕಾರಯುತ, ಸೌಲಭ್ಯ ಭರಿತ ಶಿಕ್ಷಣ ಇಂದಿನ ಮಕ್ಕಳಿಗೆ ನೀಡುವುದು ಅತ್ಯವಶ್ಯಕವಾಗಿದೆ. ಹೊಸ ಶಿಕ್ಷಣ ನೀತಿಗೆ ಎಲ್ಲರೂ ತಮ್ಮ ಪಾಲಿನ ಶಕ್ತಿ ತುಂಬಿ ಕೈಜೊಡಿಸಿ ಯಶಸ್ಸುಗೊಳಿಸಬೇಕು ಎಂದರು.
ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಶಿಕ್ಷಣ ಇಲಾಖೆಯ ಎಲ್ಲ ಸ್ತರದ ಅಧಿಕಾರಿಗಳು, ಶಿಕ್ಷಕರ ಸಂಘದ ಪ್ರಮುಖರು,ಪದಾಧಿಕಾರಿಗಳು ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 30 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 30 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 170…

ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿ ಫೆ.28 ರವರೆಗೆ ವಿಸ್ತರಣೆ

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ನಂತ್ರ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಮುಕ್ತಾಯಗೊಂಡಿದ್ದರೂ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಜ.31 ರ ವರೆಗೆ ಅವಕಾಶ ನೀಡಿ ಕೆಎಸ್‌ಆರ್‌ಟಿಸಿ ಆದೇಶ ನೀಡಿತ್ತು.

ಗದಗ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ: ಪೊಲೀಸರಿಂದ ಲಾಠಿ ರುಚಿ

ರಾಜ್ಯಾಂದತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಭಾನುವಾರವೂ ಕೂಡ ಕರ್ಪ್ಯೂ ಎರಡನೇ ದಿನಕ್ಕೆ‌ ಮುಂದುವರೆದಿದೆ. ಆದರೆ, ಜನರು ಅವಶ್ಯಕ‌ ವಸ್ತುಗಳ ಖರೀದಿಗೆಂದು ಕೆಲ ಸಮಯದವರೆಗೆ ಅವಕಾಶ ನೀಡಿದರೆ ಅಲ್ಲಿಯೂ ಸಾಮಾಜಿಕ ಅಂತರ ಮರೆಯುತ್ತಿರುವುದು ಕಂಡು ಬರುತ್ತಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಚುರುಕು: 14 ಕಣ್ಗಾವಲು ಆರೋಗ್ಯ ತಂಡಗಳ ರಚನೆ

ಜಿಲ್ಲಾ ಮಟ್ಟದ 14 ಕಣ್ಗಾವಲು ಸಾರ್ವಜನಿಕ ಆರೋಗ್ಯ ಸುರಕ್ಷತಾ ತಂಡಗಳ ರಚಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.