ಉತ್ತರಪ್ರಭ
ಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರಗೌಡ ಪಾಟೀಲ (87)ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದು. ಸಾವಿನ ನಂತರವು ಬೆರೆಯವರಿಗೆ ಬೆಳಕಾಗಲಿ ಎಂದು ಅವರ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡು ಹುಬ್ಬಳ್ಳಿಯ ಜೋಷಿ ಕಣ್ಣಿನ ಆಸ್ಪತ್ರೆ ಮಾಹಿತಿ ತಿಳಿಸಿ ನಂತರ ಹುಬ್ಬಳ್ಳಿಯ ಜೋಷಿ ಆಸ್ಪತ್ರೆಯ ಸಿಬ್ಬಂದಿಯವರು ಬಂದು ಕಣ್ಣುಗಳನ್ನು ಕಾನೂನಿನ ಪ್ರಕಾರ ದಾನ ತೆಗೆದುಕೊಂಡಿದ್ದಾರೆ. ಚಂದ್ರ ಗೌಡ ಪಾಟೀಲರು ಮೊದಲಿನಿಂದಲೂ ಸಾಮಾಜಿಕ ಕಳಕಳಿ ಉಳ್ಳ ವರು. ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಅವರಿಗೆ ಒರ್ವ ಪುತ್ರ, ನಾಲ್ಕು ಜನ ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂದುಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದಿನಾಂಕ: 11.04.2022 ಸಮಯ: ಮುಂಜಾನೆ ೧೧ಘಂಟೆಗೆ ವೀರಶೈವ ಲಿಂಗಾಯಿತ ರುದ್ರಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You May Also Like

ಖಾಸಗಿ ಶಾಲಾ ಶಿಕ್ಷಕ ಆತ್ಮಹತ್ಯಗೆ ಯತ್ನ

ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನರ‍್ವ ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಶ್ರೀ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ನಿಮಿತ್ಯ ತೇರಿನ ಗಾಲಿ ಪೂಜಾ ಕಾರ್ಯಕ್ರಮ

ಉತ್ತರಪ್ರಭ ಗದಗ:ಉತ್ತರ ಕರ್ನಾಟಕದಲ್ಲಿ ಐತಿಹಾಸಿಕ ಮತ್ತು ಪುರಾತನವಾದ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ…

ರೋಣದಲ್ಲಿ ಹೋರಾಟದ ವೇಳೆ ಹೆಜ್ಜೇನು ದಾಳಿ

ಆಸರೆ ಮನೆಗಳ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿರುವ ವೇಳೆ ಹೆಜ್ಜೇನು ಹುಳುಗಳ ದಾಳಿ ಮಾಡಿದ ಘಟನೆ ನಡೆದಿದೆ.

ರಾಜ್ಯದಲ್ಲಿ ಮತ್ತೊಮ್ಮೆ ರೈತರಿಂದ ಬಂದ್ ಕರೆ

ಬೆಂಗಳೂರು: ಡಿ.5 ರಂದಷ್ಟೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆ ನೀಡಿದ ಬಂದ್ ಕರೆ ಬೆನ್ನಲ್ಲೆ, ಡಿ.8 ಕ್ಕೆ ರೈತಪರ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿವೆ. ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರಾಜ್ಯದ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.