ಉತ್ತರಪ್ರಭ ಸುದ್ದಿ
ಗದಗ:
ತಾಲೂಕಿನ ಲಕ್ಕುಂಡಿ ಗ್ರಾಮದ ಮನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ. ಪೋಲಿಸ್ ಪೇದೆಗೆ ಕೆಲವು ಜನರು ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ ಅದರಿಂದ ಮನನೊಂದು ಸಾವಿಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.
ಸಾವಿಗೆ ಶರಣಾದ ವ್ಯಕ್ತಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಕುಂಡಿ ಗ್ರಾಮದ ಅಜ್ಜುಗೌಡ ಪಾಟೀಲ್ ಎಂದು ತಿಳಿದು ಬಂದಿದೆ. ಮೃತ ಪೇದೆ ಮಹಿಳಿಯೊಂದಿಗೆ ಪ್ರೀತಿಯ ಬಲೆಗೆ ಬಿದ್ದು ಅವಳೋಂದಿಗೆ ಮೊಬೈಲ ಚಾಟಿಂಗ್ ಮಾಡುತ್ತಿದ್ದ, ಮಹಿಳೆಯೋಂದಿಗೆ ಇರುವ ಅರೆಬರೆ ವಿಡಿಯೋ ವನ್ನೇ, ಬಂಡವಾಳ ಮಾಡಿಕೊಂಡ ಕೆಲವರು ಮೃತ ಪೇದೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸ ಮೂಲಗಳಿದ ತಿಳಿದುಬಂದಿದೆ.
ಸಾವಿಗೂ ಮುನ್ನ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳಿವೆ ಎಂದು ಹೇಳಲಾಗುತ್ತಿದ್ದು, ಅಜ್ಜುಗೌಡಗೆ ಹೆದರಿಸುತ್ತಿದ್ದವರು ಯಾರು ಎಂಬುವುದು ಪೊಲೀಸರ ಸೂಕ್ತ ತನಿಖೆಯಿಂದ ಗೋತ್ತಾಗಬೇಕಾಗಿದೆ.
ಸ್ಥಳಕ್ಕಾಗಮಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಕೆಲವೆ ಕ್ಷಣದಲ್ಲಿ ಗದಗ ಬೇಟಗೆರಿ ನಗರಸಭೆ ಚುನಾವಣೆ ಮತ ಎಣಿಕೆ – 2021

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುನಾವಣಾ – 2021ರ ಮತ ಏಣಿಕೆ ನಗರದ ಗುರುಬಸವ…

ಭಾವಪೂರ್ಣ ಶ್ರದ್ಧಾಂಜಲಿ; ದಿ. ಪೀರಪ್ಪ ಲಚ್ಚಪ್ಪ ಮಾಳಗಿಮನಿ (95)

ದಿ. ಪೀರಪ್ಪ ಲಚ್ಚಪ್ಪ ಮಾಳಗಿಮನಿ (95)ಸಾ: ಮುರಡಿ ತಾಂಡಾ, ತಾ: ಮುಂಡರಗಿ, ಜಿಲ್ಲೆ: ಗದಗ. ನಮ್ಮ…

ಗದಗ ಜಿಲ್ಲೆಯಲ್ಲಿಂದು ನಿಲ್ಲದ ಕೊರೊನಾ ಸಂಚಾರ: ಇಂದು ಮತ್ತೆ 61 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಕೂಡ 61 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 1004 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 26 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡ

ಗದಗ ಜಿಲ್ಲೆಯಲ್ಲಿಂದು ಕೊರೊನಾಗೆ ಮತ್ತೊಂದು ಬಲಿ

ಗದಗ: ಜಿಲ್ಲೆಯಲ್ಲಿ ಕೊರೊನಾಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ…