
ಉತ್ತರಪ್ರಭ
ಗದಗ: ಮುಂಡರಗಿ ತಾಲೂಕ ಕೆಲೂರು ಗ್ರಾಮದ ನಿರ್ಮಲಾ ಪಾಟೀಲ ವಾರದ ಹಿಂದೆ ಅರಣ್ಯಾಧಿಕಾರಿಗಳ ಕಿರುಕುಳದಿಂದ ವಿಷಪ್ರಾಶನ ಮಾಡಿ ಚಿಕಿತ್ಸೆ ಫಲಿಸದೆ ಗದಗ ಜಿಮ್ಸ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇಂದು ಕೆಲೂರಿನ ಮೃತ ಮಹಿಳೆಯ ಮನೆಗೆ ಸಚಿವರಾದ ಶ್ರೀ ರಾಮುಲು ಭೇಟಿಯಾಗಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮೃತ ಕುಟುಂಬಕ್ಕೆ ವ್ಯಯಕ್ತಿಕವಾಗಿ 2 ಲಕ್ಷ ಪರಿಹಾರ ಮತ್ತು ಚಿಕಿತ್ಸೆ ಪಡೆಯುತ್ತಿದ್ದ ಸರೋಜಾ ಪಾಟೀಲ 50ಸಾವಿರ ರೂಪಾಯಿ ವ್ಯಯಕ್ತಿಕ ಪರಿಹಾರ ನೀಡಿದರು. ಹೋರಾಟಗಾರ ರವಿಕಾಂತ ಅಂಗಡಿಯವರು ಕೆಲೂರಿನ ಮೃತ ಮಹಿಳೆಗೆ ಸರ್ಕಾರದಿಂದ 25 ಲಕ್ಷ ರೂಪಾಯಿಗಳನ್ನು ನೀಡಬೇಕು ಮತ್ತು ಅವರಿಗೆ ವಾಲ್ಮೀಕಿ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಶೀಘ್ರವಾಗಿ ಸರ್ಕಾರದಿಂದ ಕೋಡಬೇಕು ಮತ್ತು ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಈ ಕರಿತು ಪ್ರತಿಕ್ರಿಯಿಸಿದ ಸಚಿವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬಂಧಿಸಲು ಸೂಚಿಸಿದೆ ಅವರು ತಲೇ ಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ನಿರ್ಮಲಾ ಪಾಟೀಲರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಶೀಘ್ರದಲ್ಲೇ ಕೊಡಲಾಗುವುದು. ಸರ್ಕಾರ ರೈತ ಪರವಾಗಿ ಇದೆ. ಹಾಗಾಗಿ ರೈತರು ಆತಂಕ ಪಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ ,ಶಾಸಕ ರಾಮಣ್ಣ ,ಕಿಸಾಸ ರೈತ ಸಂಘದ ಪದಾದಿಕಾರಿಗಳು ,ಚಂದ್ರಕಾಂತ ಚವ್ಹಾಣ ಎನ್ ಪೂಜಾರ ಮತ್ತಿತರರು ಹಾಜರಿದ್ದರು.