ಉತ್ತರಪ್ರಭ

ಆಲಮಟ್ಟಿ: ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯ 2021-22 ನೇ ಸಾಲಿನ ವಾಷಿ೯ಕ ಸ್ನೇಹ ಸಮ್ಮೇಳನ ಹಾಗು 7ನೇ ವರ್ಗದ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಶುಭಕೋರುವ ಸಮಾರಂಭ ಇದೇ 17 ರಂದು ಹಡೇ೯ಕರ ಮಂಜಪ್ಪನವರ ಸಭಾ ಭವನದಲ್ಲಿ ನಡೆಯಲಿದೆ.


ರಾಷ್ಟ್ರೀಯ ಕೋಮು ಸೌಹಾರ್ದತೆ ಪ್ರಶಸ್ತಿ ಪುರಸ್ಕೃತ, ಭಾವೈಕ್ಯತೆ ಹರಿಕಾರ, ಕನ್ನಡದ ಕುಲಗುರು, ಪುಸ್ತಕದ ಸ್ವಾಮೀಜಿಗಳಾಗಿ ಜನಮನದಲ್ಲಿ ನೆಲೆಸಿರುವ ಪೂಜ್ಯ ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು, ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ರವರ ದಿವ್ಯ ಅನುಗ್ರಹದಲ್ಲಿ ಸಂಸ್ಥೆಯ ಘನ ಅಧ್ಯಕ್ಷರಾದ ತ್ರಿವಿಧ ದಾಸೋಹಿ ಪೂಜ್ಯ ತೋಂಟದ ಡಾ.ಸಿದ್ದರಾಮ ಮಹಾಸ್ವಾಮೀಜಿಗಳವರ ಕೃಪಾಶೀವಾ೯ದ ಹಾಗು ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಪಟ್ಟಣಶೆಟ್ಚರ ಗುರುಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿರುವ ವಾಷಿ೯ಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಆಲಮಟ್ಟಿ ಗ್ರಾ.ಪಂ.ಅಧ್ಯಕ್ಷರಾದ ಮಂಜುನಾಥ್ ಹಿರೇಮಠ ಉದ್ಘಾಟಿಸಲ್ಲಿದ್ದಾರೆ. ಶಾಲೆಯ ಮುಖ್ಯ ಗುರುಮಾತೆ ಕೆ.ಎನ್.ಹಿರೇಮಠ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಉಪ್ಪಾರ, ಗುತ್ತಿಗೆದಾರ ಎಂ.ಎಸ್.ಶೇಖ, ವಿಶ್ರಾಂತ ಶಿಕ್ಷಕ ವಿ.ಎ.ಭಾಂಡವಲಕರ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಎಂ.ಎಚ್.ಎಂ.ಪದವಿ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಕೆಲೂರ, ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಪೂಜಾರಿ ಸೇರಿದಂತೆ ಮತ್ತಿತರರು ಗಣ್ಯರು ಆಗಮಿಸಲ್ಲಿದ್ದಾರೆ ಎಂದು ಶಾಲಾಭಿಮಾನಿ ಬಸಯ್ಯ ಶಿವಯೋಗಿಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…

ಉಪಹಾರಕ್ಕೆ ಸೀಮಿತವಾದ ಬಜೆಟ್ ಮಂಡನೆ ಪೂರ್ವಭಾವಿ ಸಭೆ

ಉತ್ತರಪ್ರಭ ಸುದ್ದಿ ನರೆಗಲ್ಲ: ಪಟ್ಟಣ ಪಂಚಾಯತಿಯಲ್ಲಿ ಶುಕ್ರವಾರ ನಡೆಯಬೆಕಿದ್ದ ಬಜೆಟ್ ಮಂಡನೆ ಪೂರ್ವಭಾವಿ ಸಬೆಗೆ ಮುಖ್ಯಾಧಿಕಾರಿ…

ಲಾಕ್ ಡೌನ್ ಅವಧಿ ಮುಗಿಯುವವರೆಗೂ ವಿಮಾನ-ರೈಲು ಸೇವೆ ರದ್ದು

ನವದೆಹಲಿ : ಲಾಕ್ ಡೌನ್ ಮೇ. 17ರ ವರೆಗೆ ಮುಂದುವರೆದ ಹಿನ್ನೆಲೆಯಲ್ಲಿ ಲಾಕ್ ಡೌನ್ ತೆರುವುಗೊಳ್ಳುವವರೆಗೂ…