
ಉತ್ತರಪ್ರಭ
ಗದಗ: ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ–2021, ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ ಬರಿ ಎರಡು ದಿನ ಬಾಕಿ ಇರುವ ಬೆನ್ನಲ್ಲಿ, ಅದರಲ್ಲೂ 25ನೇ ವಾರ್ಡ ಅಂತು ತುಂಬಾ ಕೂತೂಹಲ ಮೂಡಿಸಿದೆ, ಅಂದ ಹಾಗೆ ಶಹರದ 25ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾನ್ವಿಗೆ ಹೆಚ್ಚಿನ ಪ್ರಮಾಣದಲ್ಲಿ ಜನರ ಬೆಂಬಲವನ್ನು ಕಂಡರೇ ಈ ಬಾರಿ ಅವರ ಗೆಲುವು ನಿಶ್ಚಿತ ಎಂದು ಮತದಾರರು ಮಾತನಾಡುತ್ತಿರುವುದು ಭಾರಿ ಕೂತೂಹಲ ಕೆರಳಿಸಿದೆ. ಅದೇ ವಾರ್ಡಿನಿಂದ ಯುಥ್ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿಯು ಗೆಲುವಿಗಾಗಿ ಪಕ್ಷದ ಮುಖಂಡರ ದಂಡು ಬಂದು ಅವರಪರ ಮತಯಾಚನೆ ಮಾಡುತ್ತಿದ್ದಾರೆ. ಯಾಕೋ ಈ ಬಾರಿ ಮತದಾರರು ಅವರತ್ತ ಒಲವು ತೋರದಿರುವುದು ನೋಡಿದರೆ ಈ ಬಾರಿ ಬಿಜೆಪಿಯ ಮಾನ್ವಿಗೆ ಅದರ ಲಾಭ ವಾಗಬಹುದೆಂಬುದು ಮತ ದಾರರ ಲೇಕ್ಕಾಚಾರ ಮತ್ತು ಈ ಬಾರಿ ಅಶೋಕ ಮಂದಾಲಿ ಮಂದಾಗೋ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ಕೆಳಿಬರುತ್ತಿದೆ. ಅದರೊಂದಿಗೆ ಬದಲಾವಣೆ ಬಯಸಿದ್ದಾರೆ ಇದರಿಂದ ವಾರ್ಡ ಅಭಿವೃದ್ಧಿ ಆಗಬಹುದೆಂದು ಜನರು ಆಶಯ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿಯ ಕಾಗದಗೇರಿ, ಹಾಳದಿಬ್ಬಾ, ಮುಲ್ಲಾಓಣಿ, ಕರಿದೇವರ ಗುಡಿ ಸೇರಿದಂತೆ ವಾರ್ಡಿನ ಎಲ್ಲರ ಬೆಂಬಲವು ಮಾನ್ವಿ ಪರ ಇದೇ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಮತವನ್ನು ಹೊಂದಿರುವ ಲಿಂಗಾಯತ ಸಮುದಾಯ, ಎಸ್ ಎಸ್ ಕೆ ಸಮಾಜದ ಮತದಾರರು ಸೇರಿದಂತೆ ಎಲ್ಲರ ಒಲವು ಅವರ ಪರವಾಗಿ ಇರುವುದನ್ನು ನೋಡಿದರೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಕಷ್ಟ ಎಂದು ಮತದಾರರ ಮನದಾಳದ ಮಾತಾಗಿದೆ.
ಅದಲ್ಲದೆ ಚುನಾವಣೆಯು ಒಂತರಾ ಮ್ಯಾಜಿಕ್ ಇದ್ದಹಾಗೆ ಚುನಾವಣೆ ಮುಗಿದು ಫಲಿತಾಂಶ ಬರುವರೆಗು ಯಾರು ಗೆಲ್ಲುತ್ತಾರೆಂದು ಕಾದುನೋಡೊಣ.