ನಿಡಗುಂದಿ: ಕೋವಿಡ್ ಲಾಕ್ ಡೌನ್ ನಂತರ ಭೌತಿಕ ತರಗತಿಯ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇನ್ನೂ ತಿಂಗಳ ಅಂತರದಲ್ಲಿ ನಡೆಯುತ್ತಿದ್ದು, ಫಲಿತಾಂಶ ಹೆಚ್ಚಳಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ, ಶೈಕ್ಷಣಿಕ ನೋಡಲ್ ಅಧಿಕಾರಿ ಗಜಾನನ ಮನ್ನಿಕೇರಿ ಹೇಳಿದರು.


ನಿಡಗುಂದಿ ಪಟ್ಟಣದ ಹೊರವಲಯದ ಮಣಗೂರ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದ ನಂತರ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟು ಮಾಡಿಸಬೇಕು, ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ವಸ್ತುವಾಗಿದ್ದ ಮೊಬೈಲ್ ನಿಂದ ವಿದ್ಯಾರ್ಥಿಗಳು ದೂರ ಇರುವಂತೆ, ಅವರನ್ನು ಸದಾ ಅಧ್ಯಯನ ದಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು ಎಂದರು. ಪಾಸಿಂಗ್ ಪ್ಯಾಕೇಜ್, ವಿಜ್ಞಾನದ ಪ್ರಯೋಗಗಳು , ನಕಾಶೆ ರಚನೆ, ವ್ಯಾಕಾರಣ, ಗಣಿತದಲ್ಲಿ ಪ್ರಮೇಯಗಳನ್ನು, ಮತ್ತೊಮ್ಮೆ ಮನನ ಮಾಡಿಸಬೇಕು. ಶಿಕ್ಷಕರು ಎಂದಿಗೂ ಕಲಿಯುವ ವಿದ್ಯಾರ್ಥಿ ಎಂದು ಅರಿತು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ :
ಪ್ರತಿ ಪಠ್ಯದ ಪಠ್ಯಕ್ರಮ ಪೂರ್ಣಗೊಂಡ ಬಗ್ಗೆ ಮಾಹಿತಿ ಪಡೆದು,
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಗಜಾನನ ಮನ್ನಿಕೇರಿ, ಈ ಒಂದು ತಿಂಗಳ ಅವಧಿಯನ್ನು ತಪಸ್ಸಿನಂತೆ ನಿರ್ವಹಿಸಬೇಕು ಎಂದರು. ಮೊಬೈಲ್, ದೂರದರ್ಶನದಿಂದ ದೂರವಿದ್ದು, ಕಲಿಕೆಯ ಅಂಶಗಳ ಮನದಟ್ಟು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಜೀವನದಲ್ಲಿ ಈ ಘಟ್ಟ ಬಹುಮುಖ್ಯವಾಗಿದೆ, ಇದರ ಫಲಿತಾಂಶದ ಮೇಲೆಯೇ ನಿಮ್ಮ ಬಹುತೇಕ ಜೀವನ ನಿರ್ಧಾರವಾಗುತ್ತದೆ, ಬಾಳು ಬಂಗಾರ ಮಾಡಿಕೊಳ್ಳುವ ಸುಸಮಯ ಇದು ಎಂದರು.
ವಿಷಯವಾರು ಕಲಿಕೆಯಲ್ಲಿ ಹಿಂದುಳಿದವರ ಗುಂಪು ಮಾಡಿ ಅವರಿಗೆ ವಿಶೇಷ ಕಲಿಕೆಗೆ ಹೆಚ್ಚುವರಿ ಅವಧಿ ತೆಗೆದುಕೊಳ್ಳಲು ಶಿಕ್ಷಕರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ,
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ‌‌.ಟಿ. ಗೌಡರ, ಇಸಿಓ ವಿ.ಪಿ. ಜುಳಜುಳಿ, ಎಂ.ಎಂ. ದೊಡಮನಿ, ಪದ್ಮಾವತಿ ದಾಸರ, ಬಿ.ಎಚ್. ನಾಯಕ, ನಿಂಗಪ್ಪ, ವಿನಾಯಕ ಹೊಂಗಲ್ ಇದ್ದರು.

Leave a Reply

Your email address will not be published. Required fields are marked *

You May Also Like

ಪ್ರಬುದ್ಧ ಜಾಣತನದ ನಿಲುವು ಪ್ರಕಟಿಸಲು ಪ್ರಧಾನಿಗೆ ಪತ್ರ

ಲಾಕ್ ಡೌನ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡ ಟಿ.ಈಶ್ವರ ಬಹಿರಂಗ ಪತ್ರ ಬರೆದಿದ್ದಾರೆ.

ಕರ‍್ಣಿಕೋತ್ಸವದಲ್ಲಿ ಗೊರವಯ್ಯ ನುಡಿದ ಭವಿಷ್ಯವೇನು.?

ಹಾವನೂರ ಗ್ರಾಮದಲ್ಲಿ ಭಾನುವಾರ ಮೈಲಾರಲಿಂಗೇಶ್ವರ ಕರ‍್ಣಿಕೋತ್ಸವದಲ್ಲಿ ಸವನಿಧಿ ಆಯಿತಲೇ ಪರಾಕ್ ಎಂದು ಗೊರವಯ್ಯ ಕರ‍್ಣಿಕ ನುಡಿದನು.

ರಾಜ್ಯದಲ್ಲಿಂದು 1694 ಕೊರೊನಾ ಸೋಂಕಿತರು ಪತ್ತೆ!: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1694 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಗದಗ ಜಿಲ್ಲೆಯಲ್ಲಿ 1307 ವರದಿ ನೆಗಟಿವ್

ಗದಗ ಜಿಲ್ಲೆಯ ಇವತ್ತಿನ ಕೊರೋನಾ ಅಂಕಿ ಸಂಖ್ಯೆಯ ವಿವರ