ಮುಂಡರಗಿ: ಬಗರಹುಕುಂ ಸಾಗುವಳಿದಾರರು ಪೂರ್ವಜರ ಕಾಲದಿಂದ ತಮ್ಮ ಉಪಜೀವನಕ್ಕಾಗಿ ಉಳುಮೆ ಮಾಡುತ್ತಾ ಬಂದಿದ್ದಾರೆ ಅವರನ್ನು ಮುಂಡರಗಿ ಅರಣ್ಯಾಧಿಕಾರಿ ರೈತರನ್ನು ವಕ್ಕಲೇಬ್ಬಿಸಿ ಬೀದಿಪಾಲು ಮಾಡಿದ್ದಾರೆ ಅಷ್ಟೇ ಅಲ್ಲದೆ ರೈತರ ಮೇಲೆ ದೌರ್ಜನ್ಯ ಎಸಗುತ್ತಾ ಬಂದಿದ್ದಾರೆ ಮುಂಡರಗಿ ತಾಲೂಕಿನ ಶಿಂಗಟರಾಯನ ಕೆರೆ ತಾಂಡಾದ ಮಹಿಳೆ ಅರಣ್ಯ ಇಲಾಖೆಯ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿರುವುದು ಇಲ್ಲಿಯ ಅರಣ್ಯಾಧಿಕಾರಿ ಯ ಸರ್ವಾಧಿಕಾರಿ ದೋರಣೆ ಸಾಕ್ಷಿ ಹಾಗಾಗಿ ಇಂತಹ. ಅಧಿಕಾರಿಗಳನ್ನು ಕೂಡಲೇ ವಜಾ ಮಾಡಿ ಅವರ ವಿರುದ್ದ ಕ್ರಿಮಿನಲ ಮೊಕದ್ದಮೆ ಹಾಕಬೇಕು ಅದರೊಂದಿಗೆ ಅಧಿಕಾರಿಯನ್ನು ಕೂಡಲೇ ವಜಾ ಮಾಡಬೇಕೆಂದು ಮುಂಡರಗಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಆಗ್ರಹಿಸಿದರು ನಾಳೆ ಮುಂಡರಗಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು . ಮುಂಡರಗಿಯ ಅರಣ್ಯಾಧಿಕಾರಿಗಳ ಕಛೇರಿಯ ಮುಂದುಗಡೆ ಪ್ರತಿಭಟನೆ ಮಾಡಲಾಗುವುದು ಎಲ್ಲರೂ ಭಾಗವಹಿಸಿ ಪ್ರತಿಭಟನೆ ಯನ್ನು ಯಶಸ್ವಿ ಗೊಳಿಸಲು ಮನವಿ ಮಾಡಿದರು.

ಕೆಲೂರ, ಡೋಣಿ, ಡೋಣಿ ತಾಂಡಾ, ದಿಂಡೂರ, ಶಿಂಗಟರಾಯನಕೇರಿ, ಶಿಂಗಟರಾಯನಕೇರಿ ತಾಂಡಾ, ಅತ್ತಿಕಟ್ಟಿ, ಕಲಕೇರಿ, ಬಿಡನಾಳ, ವಿರಪಾಪುರ ತಾಂಡಾ, ಮುರಡಿ, ಮುರಡಿ ತಾಂಡಾ, ಕಕ್ಕೂರ, ಶಿರನಹಳ್ಳಿ, ಹಮ್ಮಿಗಿ, ಜಾಲವಾಡಗಿ, ಬಸಾಪೂರ, ಬಾಗೇವಾಡಿ, ಮಲ್ಲಿಕಾರ್ಜುನಪುರ, ಬುದಿಹಾಳ, ಚಿಕ್ಕವಡ್ಡಟ್ಟಿ, ಹಾರೋಗೇರಿ, ಹಿರೇವಡ್ಡಟ್ಟಿ , ದೇವಿಹಾಳ, ದೇವಿಹಾಳ ತಾಂಡಾ, ಛಬ್ಬಿ, ಹಂಗನಕಟ್ಟಿ, ಮಜ್ಜೂರು, ಜಲ್ಲಿಗೇರಿ, ಜಲ್ಲಿಗೇರಿ ತಾಂಡಾ, ಹೊಸಳ್ಳಿ, ಕಡಕೋಳ, ಗುಡ್ಡದಪುರ, ಯಲ್ಲಾಪುರ, ವರವಿ, ಸೂರಣಗಿ, ಅಕ್ಕಿಗುಂದ, ಶೆಟ್ಟಿಕೇರಿ, ಚನ್ನಪಟ್ಟಣ, ಆದರಳ್ಳಿ, ಗೂಳ್ಳಟ್ಟಿ, ದೊಡ್ಡೂರು, ಕೇರಳ್ಳಿ ತಾಂಡಾ, ತಾರಿಕೊಪ್ಪ, ನಾದಿಗಟ್ಟಿ, ಕೊಂಚಿಗೇರಿ, ಹೊಸಳ್ಳಿ, ಗದಗ ತಾಲೂಕ, ಗಜೇಂದ್ರಗಡ ತಾಲೂಕ, ರೋಣ ತಾಲೂಕ ತಾಲೂಕು ಸೇರಿದಂತೆ ಹಲವು ಗ್ರಾಮ ಹಾಗೂ ತಾಂಡಾಗಳ ಮುಖ್ಯಸ್ಥರು, ರೈತಪರ, ಕನ್ನಡಪರ, ಕಾರ್ಮಿಕರ ಪರ, ಜನಪರ, ಜೀವಪರ ಅನೇಕ ಸಂಘಟನೆಗಳು.

ಹಕ್ಕೊತ್ತಾಯಗಳು
• ಅರಣ್ಯ ಹಕ್ಕು ಅಧಿನಿಯಮ-2005ರ ಅರಣ್ಯ ವಾಸಿಗಳಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮತ್ತು ಬುಡಕಟ್ಟು ಜನಾಂಗದವರಿಗೆ ಉಳುಮೆ ಜಮೀನಿಗೆ ಹಕ್ಕುಪತ್ರ ನೀಡಲು ಸೂಕ್ತ ಪರಿಶೀಲನೆ ಮಾಡದೇ ತಿರಸ್ಕರಿಸಿದ್ದಾರೆ. ಕೂಡಲೇ ಈ ಬಗ್ಗೆ ಮರು ಪರಿಶೀಲಿಸಿ ಹಕ್ಕುಪತ್ರ ನೀಡಬೇಕು ಅದರೊಂದಿಗೆ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು.
• ಕಂದಾಯ-ಅರಣ್ಯ-ಹುಲ್ಲುಗಾವಲು ಹಾಗು ಮಾಲ್ಕಿ ಜಮೀನಿನಲ್ಲಿ ವಾಸವಿರುವ ತಾಂಡಾ ಹಾಡಿ-ಹಟ್ಟಿ, ಗ್ರಾಮ ದ ಜನರಿಗೆ ಮನೆಗಳ ಹಾಗು ನಿವೇಶನಗಳ ಹಕ್ಕುಪತ್ರ ನೀಡಬೇಕು. ಕೆಲವು ಕಡೆ ಕಟ್ಟಿದ ಮನೆಗಳನ್ನು ಕೆಡವಲಾಗುತ್ತಿದೆ. ಇಂತಹ ಹೇಯ ಕೃತ್ಯ ನಿಲ್ಲಬೇಕು.
• ರೈತರು ಈ ದೇಶದ ಬೆನ್ನೆಲಬು ಅಂತ ಹೇಳುವ ಸರ್ಕಾರಗಳು, ಅನ್ನ ಆಹಾರ ಸಮಗ್ರಿಗಳನ್ನು ಉತ್ಪಾದನೆ ಮಾಡುವ ರೈತರಿಗೆ ಜಮೀನುಗಳನ್ನು ನೀಡದೆ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡಿ ಅವರ ಜಮೀನುಗಳನ್ನು ವಶಪಡಿಸಿಕೊಂಡು ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ ಮತ್ತು ಅವರ ಹಕ್ಕನ್ನು ಧಮನ ಮಾಡುವ ಬೆಳವಣಿಗೆಯನ್ನು ಕೂಡಲೇ ಕೈ ಬಿಡಬೇಕು.
• ಪದೇ-ಪದೇ ಅರಣ್ಯ ಇಲಾಖೆ ಈ ವ್ಯಾಪ್ತಿಯ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಕ್ಷಣವೇ ನಿಲ್ಲಿಸಬೇಕು.
• ಉಳುವವನೇ ಒಡೆಯನಿಗೆ ಹೊಲಬಿಟ್ಟು ಹೋಗು ಎನ್ನುವ ಸಂಸ್ಕೃತಿಗೆ ಕಡಿವಾಣ ಹಾಕಬೇಕು.
• ಕೇಲೂರಿನ ಪರಿಶಿಷ್ಠ ಪಂಗಡಕ್ಕೆ ಸೇರಿದ ರೈತರ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಧ್ವಂಸ ಗೋಳಿಸಿ ದೌರ್ಜನ್ಯದಿಂದ ಅವರ ಜಮೀನುಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ ಅವರ ವಿರುದ್ಧ ಕ್ರಿಮೀನಲ್ ಮೊಕದ್ದಮೆಯನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ನೊಂದ ರೈತರಿಗೆ ಅವರ ಜಮೀನುಗಳನ್ನು ಕೂಡಲೇ ಮರಳಿ ನೀಡಬೇಕು.
• ಶಿಂಗಟರಾಯನ ಕೆರೆ ತಾಂಡಾದಲ್ಲಿ ಅರಣ್ಯ ಇಲಾಖೆಯ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿದ ಸೊನವ್ವ ರಾಮಜಿ ಕಾರಭಾರಿ ಇವರ ಸಾವಿಗೆ ಕಾರಣರಾದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ ಅವರ ವಿರುದ್ಧ ಕ್ರಿಮೀನಲ್ ಮೊಕದ್ದಮೆಯನ್ನು ದಾಖಲಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು.
• ವೀರಪಾಪೂರ ತಾಂಡಾದ ರೈತರು ಒಡಾಡುವ ರಸ್ತೆಗೆ ಬೇಲಿ ಹಾಕಿ ಅಲ್ಲಿಯ ಜನರಿಗೆ ತೊಂದರೆ ಕೊಟ್ಟ ಅಧಿಕಾರಿಗಳನ್ನು ವಜಾ ಮಾಡಬೇಕು. ರಸ್ತೆಯನ್ನು ಜನರ ಉಪಯೋಗಕ್ಕಾಗಿ ಮೂಕ್ತಗೊಳಿಸಬೇಕು.
• ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದು ಕೆಲವು ರೈತರ ಜಮೀನುಗಳನ್ನು ಏಕಾಎಕಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡ ಜಮೀನುಗಳನ್ನು ನೊಂದ ರೈತರಿಗೆ ಮರಳಿ ನೀಡಬೇಕು