ಹಾಸನ: ಕೊರೊನಾ ವಿರುದ್ಧ ಹೋರಾಡುತ್ತಿದ್ದ ವೈದ್ಯ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಿವಕಿರಣ್ ಮೃತ ದುರ್ದೈವಿ ವೈದ್ಯ. ಕೊರೊನಾ ವಿರುದ್ಧ ವೈದ್ಯ ಶಿವಕಿರಣ್ ರಜೆಯಿಲ್ಲದೇ ನಿರಂತರವಾಗಿ ಕೆಲಸ ಮಾಡಿದ್ದರು. ಕೆಲಸದ ಸಮಯದಲ್ಲಿ ತಲೆನೋವಿನಿಂದ ಬಳಲಿದ್ದ ಅವರು, ಶಿವಕಿರಣ್ ಸಹೋದ್ಯೋಗಿಗಳ ಬಳಿ ಈ ಕುರಿತು ಹೇಳಿಕೊಂಡಿದ್ದರು. ಆದರೆ ಕಳೆದು ಐದು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಶಿವಕಿರಣ್ ತಲೆ ಸುತ್ತಿ ಬಿದ್ದಿದ್ದರು.

ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನ ವೆಂಟಿಲೇಶನ್ನತಲ್ಲಿ ಇದ್ದ ವೈದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೆಳೆಯನೊಂದಿಗೆ ಅಪ್ರಾಪ್ತೆಯ ಸೆಕ್ಸ್ – ನೋಡಿದ್ದಕ್ಕೆ ಅಜ್ಜಿಯ ಕೊಲೆ!

ಲಕ್ನೋ: ಅಪ್ರಾಪ್ತ ಬಾಲಕಿ ತನ್ನ ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ಸಾಕು ಅಜ್ಜಿ ನೋಡಿದ್ದಾರೆ ಎಂಬ…

ಆಮರಣ ಉಪವಾಸ ಸತ್ಯಾಗ್ರಹ 3ನೇ ದಿನದತ್ತ : ಧರಣಿ ನಿರತರ ಆರೋಗ್ಯ ತಪಾಸಣೆ

ಉತ್ತರಪ್ರಭಆಲಮಟ್ಟಿ: ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿನ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಬೇಕು ಎಂದು…

ತೋಟಗಾರಿಕೆ ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜೂನ್ 30 ಕೊನೆಯ ದಿನ

ಪ್ರಸಕ್ತ ಸಾಲಿನ ಮುಂಗಾರು ಅವಧಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ದಾಳಿಂಬೆ ಮತ್ತು ಪಪ್ಪಾಯ (ಪರಂಗಿ) ಬೆಳೆಗೆ ವಿಮೆ ಸೌಲಭ್ಯ ಅಂತಿಮಗೊಳಿಸಲಾಗಿದ್ದು, ಬಜಾಜ್ ಅಲೆನ್ಸ್ ಇನ್ಸೂರೆನ್ಸ ಕಂಪನಿ ವಿಮೆ ನೀಡಲಿದೆ.