ಹಾವೇರಿ: ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದ ಕರಿಯಾಲದಲ್ಲಿ ವಿಜಯದಶಮಿ ಪ್ರಯುಕ್ತ ಶನಿವಾರ ಸಂಜೆ ನಡೆದ ಕಾರ್ಣಿಕದ ನುಡಿಗಳು. ದೇವರಗುಡ್ಡ ಗ್ರಾಮದ  ಗೊರವಯ್ಯ  ಕಾರ್ಣಿಕ ನುಡಿದರು.

ಈ ಕಾರ್ಣಿಕದ ನುಡಿಯನ್ನು ಆ ಬಳಿಕ ವಿಶ್ಲೇಷಿಸುವುದು ವಾಡಿಕೆ. ಅದರ ಪ್ರಕಾರ ಈ ಕಾರ್ಣಿಕವನ್ನು ಎಲ್ಲರಿಗೂ ಒಳಿತಾಗುವ ಧನಾತ್ಮಕ ನುಡಿ ಎಂದು ವಿಶ್ಲೇಷಿಸಲಾಗಿದೆ.

ವ್ಯಾದಿ ಬೂದಿ ಯಾಗುವುದು ಎಂದರೆ  ಜಗತ್ತಿಗೆ ಮಹಾಮಾರಿ ಯಾಗಿ ಕಾಡುತ್ತಿರುವ ಕೊರೊನಾ ಸೊಂಕು ನಿರ್ನಾಮ ವಾಗುವುದು ಎಂತಲೂ  ಸೃಷ್ಟಿ ಸಿರಿ ಆದಿತಲೆ ಎಂದರೆ  ಜಗತ್ತು ಸಹಜ ಸ್ಥಿತಿಗೆ ಮರಳಿ ಕೆಲಸ ಕಾರ್ಯಗಳು ವೃದ್ದಿಯಾಗಲಿವೆ ಎಂದು ವಿಶ್ಲೇಷಿಸಬಹುದು.

ಈ ಭಾಗದಲ್ಲಿ ಎರಡು ಬಾರಿ ಕಾರ್ಣಿಕ ನುಡಿಯಲಾಗುತ್ತದೆ. ಭಾರತ ಹುಣ್ಣಿಮೆಯಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರ ಮತ್ತು ವಿಜಯ ದಶಮಿ ನವರಾತ್ರಿ ದಸರಾ ಹಬ್ಬದಲ್ಲಿ ರಾಣೆಬೆನ್ನೂರ ತಾಲ್ಲೂಕಿನ ದೇವರಗುಡ್ಡದಲ್ಲಿ ಕಾರ್ಣಿಕ ನುಡಿಯುತ್ತಿದ್ದು, ಲಕ್ಷಾಂತರ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬಂದು ಪ್ರಾರ್ಥಿಸುತ್ತಾರೆ. ಸರಕಾರದ ಆದೇಶದಂತೆ ಕೊರೊನಾ ನಿಯಮಗಳನ್ನು ಅನುಸರಿಸಲಾಗಿತ್ತು.

ಕಾರ್ಣಿಕದ ಅಜ್ಜ

ಕಾರ್ಣಿಕ ನುಡಿಯುವ ಗೊರವಯ್ಯ   ಅವರನ್ನು ಅಜ್ಜನವರು ಎಂದೇ ಸಂಬೋಧಿಸುತ್ತಾರೆ. ಅವರು 9 ದಿನಗಳವರೆಗೆ ಹಾಲು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ವೃತ ಆಚರಿಸುತ್ತಾರೆ. ಕಾರ್ಣಿಕದ ದಿನದಂದು ಅಂದಾಜು 25 ಅಡಿ ಎತ್ತರದ ಬಿಲ್ಲನ್ನೇರಿ, ಸುತ್ತಲೂ ನೋಡಿ ಜನಸಾಗರದ ಮಧ್ಯೆ ಕಾರ್ಣಿಕ ನುಡಿದು, ಕೆಳಗೆ ಬೀಳುವುದು ವಾಡಿಕೆ. ಕಾರ್ಣಿಕದ ನುಡಿಯನ್ನು ಮಳೆ -ಬೆಳೆ, ರೈತ, ಸಮಾಜ, ರಾಜಕೀಯ ಮತ್ತಿತರ ಆಯಾಮಗಳ ಮೇಲೆ ವಿಶ್ಲೇಷಿಸಲಾಗುತ್ತದೆ. ಈ ಬಾರಿಯ ನುಡಿಯು ಜನತೆಗೆ ಖುಷಿ ನೀಡಿದೆ. ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್, ಮೃತ ಪಟ್ಟವರ ಸಂಖ್ಯೆ 10 : ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8281…

ಹಿರಿಯ ಸಾಹಿತಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ನಿಧನ

ಬೆಂಗಳೂರ: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)…

ರಾಜ್ಯದ ಉದ್ದಗಲಕ್ಕೂ ಶುರುವಾದ ಬಂದ್ ಬಿಸಿ!

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ತಾಳುತ್ತಿವೆ ಎಂದು ಆರೋಪಿಸಿ…

ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್ ಬಿಜೆಪಿ ಸೇರ್ಪಡೆ ವಿಚಾರ ಪಕ್ಷದಲ್ಲಿ ಚರ್ಚೆ ನಡೆದಿಲ್ಲ

ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಎಂ.ಬಿ ಪಾಟೀಲ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ನಮ್ಮ ಪಕ್ಷದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಜಗದೀಶ್ ಶೆಟ್ಟರ್ ಹಾಗೂ ನನ್ನ ಜೊತೆ ಯಾವುದೇ ನಾಯಕರು ಮಾತನಾಡಿಲ್ಲ. ನಮ್ಮ ಜೊತೆ ಚರ್ಚಿಸದೆ ಹೇಗೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲು ಸಾದ್ಯವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.