ವರದಿ: ವಿಠಲ ಕೆಳೂತ್
ಮಸ್ಕಿ: ತಾಲೂಕಿನ ಜಕ್ಕೇರಮಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೇವಿನ ಬಣಿವೆ ಸುಟ್ಟು ಭಸ್ಮ ಆಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಬಣಿವೆ ಜಕ್ಕೇರಮಡು ತಾಂಡದ ಶೇಖರಪ್ಪ ಕಾರಭಾರಿ ಅವರ ಕುಟುಂಬಕ್ಕೆ ಸಂಬಂಧಿಸಿದ್ದು, ಆಕಸ್ಮಿಕ ಬೆಂಕಿ ತಗುಲಿ 4 ಟ್ರ್ಯಾಕ್ಟರ್ ಜೋಳದ ಸೊಪ್ಪಿ, ಸುಟ್ಟು ಭಸ್ಮವಾಗಿದೆ.ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು, ಕೆಲವೇ ಕ್ಷಣದಲ್ಲಿ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ‌ ನಂದಿಸಿದರು, ಇದರಿಂದ ಅದರ ಪಕ್ಕದಲ್ಲಿನ ಎರಡು ಬಣಿವೆಗಳು ರಕ್ಷಣೆ ಆಯಿತು ಎಂದು ಗ್ರಾಮದ ಮುಖಂಡ ಮಾನಪ್ಪ ಚವ್ಹಾಣ, ರವಿಕುಮಾರ ತಿಳಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

You May Also Like

ಆಸ್ತಿ ಕಲಹ: ಪತ್ನಿ ಎದುರೆ ಪತಿಯ ಹತ್ಯೆ!

ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಮೇ. 15ರಂದು ಈ ಕೊಲೆ ನಡೆದಿದ್ದು, ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಉಮೇಶ್ ಬಾಳಗಿ (39) ಕೊಲೆಯಾದ ವ್ಯಕ್ತಿ. ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವರುಣನ ಆರ್ಭಟ – ಸಂತ್ರಸ್ಥರಿಗೆ ಪರಿಹಾರ ಘೋಷಿಸಿದ ಸರ್ಕಾರ!

ಪ್ರವಾಹ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆರಾಯನ ಅವಾಂತರ ಜೋರಾಗಿದೆ.

ನಾಳೆ ಆಲಮಟ್ಟಿ ಎಂ.ಎಚ್.ಎಂ.ಪಿಯು ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಆಲಮಟ್ಟಿ : ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ…

ಎರಡನೇ ಹಂತದ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಯಾವಾಗ?: ಸಿಎಂ ಹೇಳಿದ್ದೇನು?

ಬೆಂಗಳೂರು: ಈಗಾಗಲೇ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೊದಲ ಹಂತದ ಪ್ಯಾಕೇಜ್ ಕುರಿತು ಸಾಕಷ್ಟು ಮನವಿಗಳು ಹಾಗೂ ಬೇಡಿಕೆಗಳು ವ್ಯಕ್ತವಾದ ಹಿನ್ನೆಲೆ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡನೇ ಹಂತದ ಪ್ಯಾಕೇಜನ್ನು ಸಿಎಂ ಘೋಷಣೆ ಮಾಡಲಿದ್ದಾರೆ.