ಬೆಳಗಾವಿ: ಕಳೆದ ವರ್ಷ ಪ್ರವಾಹದಿಂದ ಇಡೀ ಉತ್ತರ ಕರ್ನಾಟಕ ಅಕ್ಷರಶ: ನಲುಗಿ ಹೋಗಿತ್ತು. ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ತತ್ತರಿಸಿದ್ದವು. ಈ ನೋವು ಇನ್ನು ಮಾದಿಲ್ಲ. ಇದರ ಮದ್ಯದಲ್ಲೆ ಈಗ ಮತ್ತೆ ಮಲಪ್ರಭ ನದಿ ಪಾತ್ರದ ಜನರಿಗೆ ಆತಂಕ ಶುರುವಾಗಿದೆ. ಪ್ರವಾಹ ಪೀಡಿತ ಗ್ರಾಮಸ್ಥರು ಈ ಆತಂಕದಲ್ಲಿರುವಾಗಲೇ ಆಡಳಿತ ವ್ಯವಸ್ಥೆ ಪ್ರವಾಹ ಮುನ್ನೆಚ್ಚರಿಕೆಯ ಡಂಗೂರ ಸಾರಿದೆ. ಪ್ರವಾಹ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಲಪ್ರಭ ನದಿಯ ಪ್ರವಾಹ ಪೀಡಿತ ಗ್ರಾಮಸ್ಥರು ತಮ್ಮ ಪರಿಚಿತರು ಅಥವಾ ಸಂಬಂಧಿಗಳ ಮನೆಗೆ ಹೋಗಿ ಆಶ್ರಯ ಪಡೆಯಲು ಸ್ವತ: ತಹಶೀಲ್ದಾರ್ ಆದೇಶ ನೀಡಿದ ಘಟನೆ ರಾಮದುರ್ಗದಲ್ಲಿ ನಡೆದಿದೆ.

ತಹಶೀಲ್ದಾರ್ ಆದೇಶದಲ್ಲಿ ಏನಿದೆ?

ನದಿ ಪ್ರವಾಹ ಬರಬಹುದು ಅಂತ ಗಮನದಲ್ಲಿಟ್ಟುಕೊಂಡು ತಮ್ಮ ಹೊಬಳಿಗೆ ಸಂಬಂಧಿಸಿದ ನದಿ ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರಿಗೆ ಡಂಗೂರ ಮೂಲಕ ತಿಳುವಳಿಕೆ ಮೂಡಿಸುವುದು ಅವಶ್ಯವಿರುವುದರಿಂದ ಮತ್ತೆ ಮಲಪ್ರಭ ನದಿಗೆ ಪ್ರವಾಹ ಬರುವ ನಿರೀಕ್ಷೆ ಇದ್ದ ಕಾರಣ ಗ್ರಾಮದ ಜನರು ತಮ್ಮ ಸ್ವಂತ ಜವಾಬ್ದಾರಿ ಮೇಲೆ ಸುರಕ್ಷಿತ ಸ್ಥಳದಲ್ಲಿ ಅಥವಾ ತಮ್ಮ ಸಂಬಂಧಿಕರ ಮನೆಗಳಲ್ಲಿ ಇರುವ ಸಲುವಾಗಿ ಮುಂಚಿತವಾಗಿ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು ಅಂತ ಪ್ರತಿ ಗ್ರಾಮದಲ್ಲಿ ಡಂಗೂರದ ಮೂಲಕ ತಿಳುವಳಿ ನೀಡುವಂತೆ ಮತ್ತು ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದೆ ಎಂದು ಸುರೇಬಾನ್, ಮುದಕವಿ, ಕಟಕೊಳ, ಕೆ.ಚಂದರಗಿ ಗ್ರಾಮಗಳ ಉಪತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ರಾಮದುರ್ಗ ತಹಶೀಲ್ದಾರ್ ಆದೇಶ ನೀಡಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ಕೇವಲ 4 ಟಿ.ಎಮ್.ಸಿ ನೀರಿತ್ತು. ಜಲಾಶಯದ ಒಟ್ಟು ಸಾಮರ್ಥ್ಯ 37.7 ಟಿ.ಎಮ್.ಸಿ ಇದೆ. ಆದರೆ ಜನರಿಗೆ ಮುಂಜಾಗ್ರತ ಕ್ರಮವಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದ್ದ ಆಡಳಿತ ವ್ಯವಸ್ಥೆ ಜನರ ಮೇಲೆ ಜವಾಬ್ದಾರಿ ಹಾಗೂ ಸಂಬಂಧಿಕರ ಮನೆಗೆ ಹೋಗಿ ಎಂದು ಕೈಚಲ್ಲಿದರೆ ಹೇಗೆ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಕೊರೊನಾ ಭಯದಲ್ಲಿ ಮನೆಗೆ ಕರೆಯುವವರು ಯಾರು?

ಈಗಾಗಲೇ ಕೊರೊನಾ ಭಯ ಎಲ್ಲರನ್ನು ಕೊರೆಯುತ್ತಿದೆ. ಇಂಥ ಸ್ಥಿತಿಯಲ್ಲಿ ನಾವು ನಮ್ಮ ಸಂಬಂಧಿಕರ ಮನೆಗೆ ಹೋಗುವುದು ಎಷ್ಟು ಸೂಕ್ತ? ಅವರಾದರೂ ನಮ್ಮನ್ನು ಎಷ್ಟು ದಿನ ಮನೆಯಲ್ಲಿಟ್ಟುಕೊಳ್ಳಬಹುದು? ಎಂಬುದು ಜನರ ಪ್ರಶ್ನೆಯಾಗಿದೆ. ಆದರೆ ತಹಶೀಲ್ದಾರರ ಆದೇಶ ಮಾತ್ರ ವ್ಯಾಪಕ ಟೀಕೆಗೆ ಕಾರಣವಾಗಿದೆ. ՆGN/%

Leave a Reply

Your email address will not be published. Required fields are marked *

You May Also Like

ಕಲೆಯ ಅಭಿರುಚಿ ಇಲ್ಲದದಿದ್ದರೆ ನಕಾರಾತ್ಮಕ ಅಪಸವ್ಯಗಳು ಮೈದಳೆಯುತ್ತವೆ

ಲಲಿತಕಲೆ, ಸಾಹಿತ್ಯ, ಸಂಗೀತದಥ ಕಲೆಗಳ ಅಭಿರುಚಿ ಇಲ್ಲದಿರುವುದರಿಂದಲೇ ಆಧನಿಕ ಯುವಜನರಲ್ಲಿ ನಕಾರಾತ್ಮಕ ಚಿಂತನೆಗಳು ಮೂಡುತ್ತಿವೆ

ಗದಗನಲ್ಲಿ ಗುಣಮುಖನಾಗಿ ಮನೆಗೆ ಮರಳಿದ ಸೋಂಕಿತ

ಗದಗ:ಕೊರೋನಾ ಸೋಂಕಿತ 62 ವರ್ಷದ ವ್ಯಕ್ತಿ ಇಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಗರದ ಜಿಮ್ಸ್ ಆಸ್ಪತ್ರೆಯಿಂದ…