ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಮುಂಭಾಗದ ಅವರಣದಲ್ಲಿ ಮಂಗಳವಾರ ನೂತನ ನಂದಿನಿ ಮಿಲ್ಕ್ ಪಾರ್ಲರ್ ಪ್ರಾರಂಭಗೊಂಡಿದ್ದು ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿ ಅಧಿಕೃತ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಅಸಂಖ್ಯ ಪ್ರವಾಸಿಗರ ನೆಚ್ಚಿನ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳು ಸುಲಲಿತವಾಗಿ ದೊರಕಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾಯೋ೯ನ್ಮುಖಕ್ಕಿಳಿದಿರುವುದು ಸಂತಸ. ಪ್ರವಾಸಿಗರು ಖುಷ್,ತಾವು ಖುಷ್ ಎಂದರು.


ವಿಜಯಪುರ ವಿಮುಲ್ ನಿದೇ೯ಶಕ, ಬೆಂಗಳೂರಿನ ಕ.ಹಾ.ಮಾ.ನಿದೇ೯ಶಕರೂ ಅದ ಎಸ್.ಟಿ.ಪಾಟೀಲ, ವಿಜಯಪುರ, ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿದೇ೯ಶಕ ಡಾ,ಎಸ್.ಡಿ.ದಿಕ್ಷಿತ್, ಮಾಜಿ ಅಧ್ಯಕ್ಷ, ಹಾಲಿ ನಿದೇ೯ಶಕ ಎಸ್.ಜೆ.ಹಂಡಿ, ನಿದೇ೯ಶಕ ಜಿ.ಎಸ್.ಚಲವಾದಿ,ಕೆಬಿಜೆಎನ್ ಎಲ್ ಕಾರ್ಯನಿರ್ವಾಹಕ ಅಭಿಯಂತರ ಸಂಗಮೇಶ್ ಮುಂಡಾಸ, ಗೇಟ್ಸ್ ಸಬ್ ಡಿವ್ಹಿಜನ್ ದ ಎಸ್.ಬಿ.ಹಿರೇಗೌಡರ, ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ ಇತರ ಅಧಿಕಾರಿಗಳು ಸೇರಿದಂತೆ ಹಲವಾರು ಮುಖಂಡರು ಅತಿಥಿಗಳಾಗಿ ಭಾಗವಹಿಸಿದ್ದರು. ಮಿಲ್ಕ್ ಸುಚಿರುಚಿ ಎಲ್ಲರು ಸವಿದರು.


ವಿಶೇಷ ಮಿಲ್ಕ್ ಪಾರ್ಲರ್ ಆರಂಭದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದಂತಾಗಿದೆ.

Leave a Reply

Your email address will not be published. Required fields are marked *

You May Also Like

ನಿಡಗುಂದಿ: ಶಾಲಾ,ಕಾಲೇಜ್ ಆಡಳಿತ ಮಂಡಳಿ, ಶಿಕ್ಷಣ ಅಧಿಕಾರಿಗಳ ಸಭೆ- ಶಾಂತಿ,ಸುವ್ಯವಸ್ಥೆ ಕಾಪಾಡಲು ಮನವಿ ಹೈಕೋರ್ಟ್ ಆದೇಶ ಪಾಲಿಸಲು ಸಲಹೆ

ನಿಡಗುಂದಿ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ…

ದೆಹಲಿಗೆ ಆಮ್ಲಜನಕ ಕಳುಹಿಸಲು ಸಿದ್ಧತೆ ನೆಡಸಿದ ಕೇರಳ

ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ದಾಸ್ತಾನು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳವು ದೆಹಲಿಗೆ ಸಹಾಯ ಹಸ್ತ ಚಾಚಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮಲಯಾಳಿ ಸಂಘಟನೆಗಳ ಮನವಿಗಳಿಗೆ ಸ್ಪಂದಿಸಿ ನೆರವು ನೀಡಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.

ಲಾಕ್ ಡೌನ್ ತೆರವಿನಿಂದ ಕೊರೊನಾ ಪ್ರಮಾಣದಲ್ಲಿ ಹೆಚ್ಚಳ: ಕೇಜ್ರಿವಾಲ್

ಲಾಕ್ ಡೌನ್ ತೆರವಿನಿಂದಾಗಿ ದೆಹಲಿಯಲ್ಲಿ ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದರು.

ಕಳೆಗಟ್ಟಿದ ಚಂದ್ರಗಿರಿ ಜಾತ್ರೆ- ಎಲ್ಲೆಲ್ಲೂ ಜನ ಸಾಗರ ಚಂದ್ರಮ್ಮನ ಸನ್ನಿಧಿಯಲ್ಲಿ ಉರುಳು ಸೇವೆ ಜೋರು

ಗುಲಾಬಚಂದ ಜಾಧವಆಲಮಟ್ಟಿ : ಹಿಂದೆಂದೂ ಕಂಡರಿಯದಂತೆ ಎತ್ತ ನೋಡಿದರು ಜನರೋ ಜನ. ಭಕ್ತಿಭಾವದ ಲೀಲೆಯಲ್ಲಿ ಹರಿದು…