ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ ಪುಣ್ಯ ಕ್ಷೇತ್ರ ಭಾಯಾಗಡ ಸೂರಗೊಂಡನಕೊಪ್ಪ ದತ್ತ ಬಸವನ ಬಾಗೇವಾಡಿ ಹಾಗು ನಿಡಗುಂದಿ ತಾಲೂಕಿನ ಬಂಜಾರಾ ಸಮಾಜದ ಕುಲ ಬಾಂಧವರ ಪಡೆ ಭಾನುವಾರ ರಾತ್ರಿ ಪಯಣ ಬೆಳೆಸಿತು.

I


ಬಂಜಾರಾ ಸಮಾಜದ ಆರಾಧ್ಯ ಕುಲದೇವರಾದ ಸಂತ ಸೇವಾಲಾಲ್ ಅವರ 283 ನೇ ಜಯಂತಿ ಅಂಗವಾಗಿ ಸೇವಾಲಾಲ್ ದೇವರ ದರ್ಶನ ಪಡೆದು ಪುನೀತ್ ಭಾವ ತಾಳಲು ಸೂರಗೊಂಡನಕೊಪ್ಪ ಕಡೆಗೆ ಅಸಂಖ್ಯ ಭಕ್ತರು ಪ್ರಯಾಣ ಬೆಳೆಸಿದರು.


ಅತ್ತ ತೆರಳುವ ಮುನ್ನ ಈ ಭಾಗದ ರೊಳ್ಳಿ, ಗಣಿ,ಚಿಮ್ಮಲಗಿ, ಬೇನಾಳ,ಆಲಮಟ್ಟಿ, ನಿಡಗುಂದಿ ತಾಂಡಾದ ಬಂಜಾರಾ ಸಮಾಜದ ಅಪಾರ ಸೇವಾಲಾಲ್ ಭಕ್ತರು ಮಾಲೆ ಧರಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದು ಭಕ್ತಿ ಸಮಪಿ೯ಸಿದರು. ತಮ್ಮ ತಮ್ಮ ತಾಂಡಾಗಳಲ್ಲಿ ಐದು ದಿನಗಳ ಕಾಲ ಸೇವಾಲಾಲರ ಪೂಜೆ, ಪುರಸ್ಕಾರ, ಧಾಮಿ೯ಕ ಕೈಂಕರ್ಯ ಕೈಗೊಂಡರು. ಮರಿಯಮ್ಮನ ಗುಡಿ, ಸೇವಾಲಾಲರ ದೇಗುಲದಲ್ಲಿ ಶೃದ್ಧಾಪೂರ್ವಕ ಭಕ್ತಿಯಲ್ಲಿ ಲೀನರಾಗಿ ಪೂಜೆ ಸಲ್ಲಿಸಿದರು.
ಈ ಭಾಗದ ಬಂಜಾರಾ ಭಕ್ತರು ಬಾಗಲಕೋಟೆ ಬಳಿಯ ಶಿರೂರು ತಾಂಡಾಕ್ಕೆ ತೆರಳಿ ಸಮಾಜದ ಕುಮಾರ ಭಗತ್ ಮಹಾರಾಜರಿಂದ ಮಾಲೆ ಧರಿಸಿಕೊಂಡು ಬರುವ ಸಂಪ್ರದಾಯ ಇದೆ. ಆ ಹಿನ್ನೆಲೆಯಲ್ಲಿ ಬಂಜಾರಾ ಭಕ್ತರು ಸೇವಾಲಾಲ್ ಅವರ ಹೆಸರಿನಲ್ಲಿ ಕುಮಾರ ಭಗತ ಅವರಿಂದ ಮಾಲಾಧಾರಿಗಳಾಗಿ ಆರಾಧನಾ ಮಹೋತ್ಸವದಲ್ಲಿ ತನ್ಮಯರಾಗಿ ಭಕ್ತಿಭಾವ ಅಪಿ೯ಸುತ್ತಾರೆ. ಹರಕೆ ಹೊತ್ತ ಭಕ್ತಾದಿಗಳು ಭಯ,ಭಕ್ತಿಯಿಂದ ಸೇವಾಲಾಲ್ ಅವರನ್ನು ತಮ್ಮ ಹೃದಯ ಹಂದರದಲ್ಲಿ ಆರಾಧಿಸಿ ದೈವ ಸಂಕಲ್ಪ ಕಾಣುತ್ತಾರೆ. ವಿಶೇಷ ಆಧ್ಯಾತ್ಮಿಕ ರಂಗದಲ್ಲಿ ಮಿನುಗಿ ಬಂಜಾರಾ ಸಮಾಜದ ಈ ಮಹಾ ಗುರುವಿನ ಸ್ಮರಣೆ ಪ್ರಾಂಜಲ್ಯ ಮನದಿಂದ ಮಾಡುತ್ತಾರೆ. ಮಾರೋ ಭಾಯಾ ಸೇವಾಭಾಯಾ ಅಂತ ಜಯಘೋಷ ಮೊಳಗಿಸಿ ಧನ್ಯತೆ ಮೆರೆಯುತ್ತಾರೆ.
ಸಚಿನ ರಾಠೋಡ, ಅನಿಲ ರಾಠೋಡ, ಮುತ್ತುರಾಜ ಚವ್ಹಾಣ, ಕಾತಿ೯ಕ ರಾಠೋಡ,ರೋಹಿತ ಲಮಾಣಿ, ಸುಪ್ರೀತ ನಾಯಕ, ಸಂಪದ ರಾಠೋಡ, ರವಿ ಲಮಾಣಿ ಸೇರಿದಂತೆ ಬಂಜಾರಾ ಸಮಾಜದ ಅನೇಕ ಯುವಕರ ಪಡೆ ಅತ್ಯೋತ್ಸಾಹದಿಂದ ಮಾಲಾಧಾರಣೆ ಧರಿಸುವುದರೊಂದಿಗೆ ಭಾನುವಾರ ರಾತ್ರಿ ಸೂರಗೊಂಡನಕೊಪ್ಪ ಕಡೆಗೆ ತೆರಳಿದರು. ಅಪಾರ ಸಂಖ್ಯೆಯ ಬಂಜಾರಾ ಸಮಾಜದ ಬಂಧುಗಳು ಸೇವಾಲಾಲ್ ಅವರ ಸನ್ನಿಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪಾವನಭಾವದಿಂದ ನೆಮ್ಮದಿ ಕಂಡುಕೊಳ್ಳುತ್ತಾರೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರದಲ್ಲಿ ಗೊಬ್ಬರ ಖರೀದಿಗಾಗಿ ಕ್ಯೂ..!

ಲಕ್ಷ್ಮೇಶ್ವರ: ಜಿಲ್ಲೆಯಾದ್ಯಂತ ಮುಂಗಾರು ಬಿತ್ತನೆ ಅಬ್ಬರ ಜೋರಾಗಿದೆ. ಮುಂಗಾರು ಹಂಗಾಮಿನ ಹತ್ತಿ, ಹೆಸರು, ಶೇಂಗಾ, ಗೋವಿನ ಜೋಳ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಯಲ್ಲಿ ರೈತರು ತಲ್ಲೀನರಾಗಿದ್ದಾರೆ.

ಎಮ್.ಎಲ್.ಎ ಸಾಹೇಬರೆ ಮಾಸ್ಕ್ ಹಾಕ್ಕೊಳ್ಳಿ ಪ್ಲೀಸ್..!

ಶಾಸಕರಾಗಿ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದರಲ್ಲ ಎನ್ನುವುದು ನಿಜವಾಗಿಯೂ ಪ್ರಶಂಸನೀಯವೇ. ಆದರೆ ಯಾವುದನ್ನು ಪಾಲನೆ ಮಾಡುವ ಕುರಿತು ಶಾಸಕರು ಮಾತನಾಡುತ್ತಿದ್ದರೋ ಅದನ್ನೇ ಶಾಸಕರು ಮರೆತಿದ್ದರು.

ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳನ್ನು ಗುರುತಿಟ್ಟುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಬಲ ಪಂಥೀಯ ಸಂಘಟನೆಗಳು ಕಿಡಿ ಕಾರಿದ್ದವು. ಇದೊಂದು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದವು. ಈಗ ಕುಮಾರಸ್ವಾಮಿ ಅವರು ಈ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ಅಲ್ಪಾವಧಿ ಕೃಷಿ ಸಾಲ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ…