ಶಿರಹಟ್ಟಿ : ಸಂಕ್ರಾಂತಿ ಹಬ್ಬ ದಂದು ಸೂರಣಗಿ ಗ್ರಾಮದ ಬಾಲಕರ ಪಾಲಿಗೆ ಕರಾಳ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಅನೇಕ ಯುವಕರು ನೀರಿನಲ್ಲಿ ‌ ಮುಳುಗಿ ಜೀವ ಕಳೆದು ಕೊಂಡಿದ್ದಾರೆ .ಶನಿವಾರ ಮಧ್ಯಾಹ್ನ ಹೊಳೆಇಟಗಿ ಗ್ರಾಮಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯಲ್ಲಿ ಸಂಕ್ರಮಣ ನಿಮಿತ್ತ ಸ್ನಾನಕ್ಕಾಗಿ ಹೋದಾಗ ನದಿಯಲ್ಲಿರುವ ಆಳದ ಗುಂಡಿಯಲ್ಲಿ ಮುಳಗಿ ಸೂರಣಗಿ ಗ್ರಾಮದ ಪ್ರಜ್ವಲ್ ಬಸವರಾಜ ಮಾಸ್ತಮ್ಮನವರ (14) ಹಾಗೂ ಹೊಳೆ ಇಟಗಿ ಗ್ರಾಮದ ನಾಗರಾಜ ಕರಬಸಪ್ಪ ಬುರಡಿ (13) ಎಂಬ ಬಾಲಕರಿಬ್ಬರು ಮರಣ ಹೊಂದಿದ್ದಾರೆ.

ಮರಳುಗಾರಿಕೆಯಿಂದ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿದ್ದು ,ಅವುಗಳ ಬಗ್ಗೆ ಯಾರಿಗೂ ಮಾಹಿತಿ ಇರುವುದಿಲ್ಲ ಅದರಲ್ಲೂ ಅಕ್ರಮ ಮರಳು ದಂದೆ ಕೊರರು ಎಲ್ಲೆಂದರಲ್ಲಿ ಗುಂಡಿಗಳನ್ನ ತೊಡಿ ಮರಳು ಸಾಗಾಣಿಕೆ ಮಾಡುತ್ತಾರೆ .ಅಕ್ರಮ ಮರಳು ಸಾಗಾಣಿಕೆ ಮಟ್ಟ ಹಾಕುವಲ್ಲಿ ತಾಲೂಕಾಡಳಿತ ವಿಫಲವಾಗಿದೆವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದು ಸ್ಥಳೀಯರು ಈಜುಗಾರರ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ತಹಸೀಲ್ದಾರ್ , ಸಿಪಿಐ , ಪಿಎಸ್ಐ ಬೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಕುರಿಗಾಹಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರೋಣದಲ್ಲಿ ಪ್ರಾಣಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದ ಎಎಸ್ಐ ಎಚ್.ಎಮ್.ಸರ್ವಿ

ನಗರದ ಬಸ್ ನಿಲ್ದಾಣದ ಹತ್ತಿರ ಬೀಡು ಬಿಟ್ಟಿರುವ ಕೋತಿಗಳಿಗೆ ಬಾಳೆ ಹಣ್ಣು ನೀಡುವ ಮೂಲಕ ಎಎಸ್ಐ ಒಬ್ಬರೂ ಮಾನವೀಯತೆ ಮೆರೆದ ಘಟನೆ ರೋಣದಲ್ಲಿ ನಡೆದಿದೆ.

ರಾಜ್ಯದಲ್ಲಿ ಮತ್ತೆ 22 ಕೊರೋನಾ ಹೊಸ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಮತ್ತೆ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

ರೋಗಿಗಳ ಪಾಲಿಗೆ ಆಸ್ಪತ್ರೆಗಳೇ ಸಂಜೀವಿನಿ ಅಂತಾರೆ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳಂತೂ ಬಡರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ.