ಮನಸೊರೆಗೊಂಡ ಮಲ್ಲಕಂಬ ಪ್ರದರ್ಶನ

ಉತ್ತರಪ್ರಭ

ನರೆಗಲ್ಲ: ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ ಮಾಡುವ ಕಲೆಯೇ ಮಲ್ಲಕಂಬ ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಳಕಪ್ಪ ಜಿ,ಬಂಡಿ ಹೇಳಿದರು.

ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಆವರಣದಲ್ಲಿ ಗುರುವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಅಂತರ್ ಮಹಾವಿದ್ಯಾಲಯಗಳ ಬಾಲಕರ ಹಾಗೂ ಬಾಲಕಿಯರ ಮಲ್ಲಕಂಬ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಆಟಗಳಲ್ಲಿ ಮಲ್ಲಕಂಬ ಒಂದಾಗಿದ್ದು, ಮಲ್ಲಕಂಬವನ್ನು ಬಾಲ್ಯದಿಂದ ಆಡುತ್ತಾ ಬಂದ ವ್ಯಕ್ತಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ ಹಾಗೂ ಎಷ್ಟೇ ಊಟ ಮಾಡಿದರು ಕರಗಿಸಿಕೊಳ್ಳುವ ಶಕ್ತಿ ಇರುತ್ತದೆ ಎಂದರು.

ಪದ್ಮಾಸನ, ಮಯೂರಾಸನ, ವಜ್ರಾಸನ, ಬದ್ಧಕೋನಾಸನ, ಚಕ್ರಾಸನ ಹೀಗೆ ಹತ್ತಾರು ಆಸನಗಳನ್ನು ನೆಲದ ಮೇಲೆ ಮಾಡುವುದು ಸುಲಭ ಆದರೆ ಮಕ್ಕಳು ಕಂಬ, ಹಗ್ಗದ ಮೇಲೆ ಯೋಗ­ಸನ ಪ್ರದರ್ಶಿಸಿ ಮನಸೂರೆಗೊಂಡರು ಬಾಲಕಿಯರು ಹಗ್ಗದ ಮೇಲೆ ವಿವಿಧ ಆಸನಗಳನ್ನು ಲೀಲಾಜಾಲವಾಗಿ ಮಾಡು­­ತ್ತಿರುವುದನ್ನು ನೋಡುತ್ತಿದ್ದ ಸಾವಿರಾರು ಪ್ರೇಕ್ಷಕರು ಸಿಳ್ಳೆ ಹಾಕಿ ಕ್ರೀಡಾಳುಗಳಲ್ಲಿ ಹುರುಪು ತುಂಬು­ತ್ತಿದ್ದರು. ಇನ್ನು ಒಂಟಿ ಕಂಬದ ಮೇಲೆ ಬಾಲಕರು ಆಸನ ಪ್ರದರ್ಶನ ಮಾಡಿ ತಮ್ಮ ಸಾಹಸ ಮೆರೆದರು. ದೇಹ­ದಲ್ಲಿ ಮೂಳೆ ಇಲ್ಲವೇನೊ ಎಂಬಂತೆ ಬಾಲ­ಕರು ದೇಹ ಬಾಗಿಸಿ ಬಳುಕಿಸಿ ಕಂಬ ಏರಿ ಆಸನ ಪ್ರದರ್ಶಿಸಿದರು.ಎಂದು ಹರ್ಷ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಮಾಣ ದುಡ್ಡು ಕೊಟ್ಟು ಶಿಕ್ಷಣ ಪಡೆಯಲು ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ 25 ಸರ್ಕಾರಿ ಪ್ರೌಢಶಾಲೆ 6 ವಸತಿ ಶಾಲೆಗಳನ್ನು 1 ಡಿಪ್ಲೊಮಾ ಕಾಲೆಜು,ಅದರಂತೆ ಸರ್ಕಾರಿ ಪಿ,ಯು,ಕಾಲೆಜುಗಳನ್ನು ತೆರೆಯಲಾಗಿದೆ ಹಾಗೂ ಈಚೆಗೆ ಮಹಾವಿದ್ಯಾಲಯದ ಅಭಿವೃದ್ಧಿಗೆ 25 ಲಕ್ಷ ಅನುದಾನ ನಿಡಲಾಗಿದೆ ಎಂದರು.

ಈ ಸಂಧರ್ಭದಲ್ಲಿ ರೋಣ ಮಂಡಳ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ,ಪಟ್ಟಣ ಪಂಚಾಯತಿ ಅಧ್ಯಕ್ಷೆ,ಅಕ್ಕಮ್ಮ ಮಣ್ಣೋಡ್ಡರ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಬಸವರಾಜ ವಂಕಲಕುಂಟಿ,ಉಮೇಶ ಸಂಗನಾಳಮಠ,ಜ್ಯೋತಿ ಪಾಯಪ್ಪಗೌಡ್ರ,ಅಶೋಕ ಕಳಕೊಣ್ಣವರ,ಶಿವನಗೌಡ ಸೋಮನಗೌಡ್ರ,ಡಾ:ಆರ್,ಕೆ,ಗಚ್ಚಿನಮಠ,ಶ್ರೀ ಶೈಲಪ್ಪ ಬಂಡಿಹಾಳ,ಮಲ್ಲಿಕಾರ್ಜುನಗೌಡ ಭೂಮನಗೌಡ್ರ,ಯಲ್ಲಪ್ಪ ಮಣ್ಣೋಡ್ಡರ, ಇದ್ದರು

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 388 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 388 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾದಂತಾಗಿದೆ.

ನಾಳೆಯಿಂದ ನೀಲಗುಂದ ಗ್ರಾಮದಲ್ಲಿ ಮಹಾಶಿವರಾತ್ರಿ ಉತ್ಸವ

ಐತಿಹಾಸಿಕ, ಆಧ್ಯಾತ್ಮ ನೆಲೆಬೀಡು ನೀಲಗುಂದ ಗ್ರಾಮದ ಗುದ್ನೇಶ್ವರಮಠದ ದಿವ್ಯ ಚೇತನ ಟ್ರಸ್ಟ್ನಿಂದ ಮಾ.9 ರಿಂದ 11 ವರಗೆ ಮಹಾಶಿವರಾತ್ರಿ ಉತ್ಸವ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.

ತಮ್ಮ ತಪ್ಪುಗಳನ್ನು ಮರೆಮಾಚಲು ಜನರ ಮುಂದೆ ಮೋದಿ ಬಂದಿದ್ದಾರೆ – ಸಿದ್ದರಾಮಯ್ಯ!

ಬೆಂಗಳೂರು : ಇಂದು ಸಂಜೆ ದೇಶ ಉದ್ಧೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ ಚುನಾವಣೆ: ಮತಗಟ್ಟೆಗೆ ಜಿಲ್ಲಾಧಿಕಾರಿ ಬೇಟಿ

ಗದಗ ಮುನ್ಸಿಪಲ್ ಕಾಲೇಜಿನಲ್ಲಿ ನಡೆಯುತ್ತಿರುವ ಮತಗಟ್ಟೆಗೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಮತದಾನದ ವಿವರ ಪಡೆದರು.