ಧಾರವಾಡ: ರಾಯಪುರ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಜಿಟಿಟಿಸಿ ಸಂಸ್ಥೆ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಂಪೇಟೇಷನಲ್ಲಿ ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ವರ್ಲ್ಡ್ ಸ್ಕಿಲ್ ಕಾಂಪಿಟೆಶನ್ ೨೦೨೧ ರ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ GTTC ಧಾರವಾಡ ಕೇಂದ್ರದ ಕು. ಗಣೇಶ ಇರ್ಕಲ, ರವರು plastic die engineering ವಿಭಾಗದಲ್ಲಿ, ಕು. ಫರಾನ ಪಂತೋಜಿ CNC MILLING ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿ ಗೋಲ್ಡ್ ಮೆಡಲ್ ಹಾಗೂ ತಲಾ ೧,೦೦,೦೦೦/-ರೂಪಾಯಿ ಪ್ರೋತ್ಸಾಹಕರ ಮೊತ್ತವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳು ರಾಜ್ಯ ಮಟ್ಟ, ವಿಭಾಗಿಯ ರಾಜ್ಯ ಮಟ್ಟ ಹಾಗೂ ರಾಷ್ಟ್ರೀಯ ಮಟ್ಟದ ಸ್ಟೀಲ್ ಕಾಂಪೀಟೇಷನ ಆಯ್ಕೆ ಯಾಗಿದ್ದರು ಇಂದು ದೇಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ.ಈ ಸ್ಪರ್ಧೆಯು ೨೦೨೨ ರಲ್ಲಿ ಶಾಂಘೈ ನಲ್ಲಿ ನಡೆಯಲಿದೆ ( International world skill competition) ಅಂತರಾಷ್ಟ್ರೀಯ ಮಟ್ಟದಲ್ಲಿ  ಆಯ್ಕೆ ಆಗಿ gttc ಸಂಸ್ಥೆಯ ಘನತೆ ಗೌರವಗಳನ್ನು ಹೆಚ್ಚಿಸಿರುತ್ತಾರೆ. ಕುಮಾರ್ ಹರೀಶ್ ಹಿಂಡಸಗೇರಿ ಅಂತರಾಷ್ಟ್ರೀಯ ಮಟ್ಟದ ಕಾಂಪಿಟೇಷನ್ನಲ್ಲಿ ಮೀಡಿಯಮ್ ಎಕ್ಸಲೆಂಟ್ ಎಂಬ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಬೇಳಗಾವ GTTC ಮತ್ತು ಬೇಂಗಳೂರು GTTC ಕೇಂದ್ರ ಗಳಿಂದ ಐದು ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ. ಒಟ್ಟಾರೆ ಜಿಟಿಟಿಸಿ ಸಂಸ್ಥೆಯಿಂದ ಏಳು ವಿದ್ಯಾರ್ಥಿಗಳು ಅಂತ ರಾಷ್ಟ್ರದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ

ಕರ್ನಾಟಕ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಸಂಸ್ಥೆಯ ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಂಪೇಟೇಷನಗೆ ಆಯ್ಕೆ ಕರ್ನಾಟಕ ರಾಜ್ಯದ ಜಿಟಿಟಿಸಿ ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯ ಇಲಾಖೆಗೆ ಒಳಪಟ್ಟಿರುವ ಸಂಸ್ಥೆಯಾಗಿದೆ ಮತ್ತು ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಆಲ್ ಇಂಡಿಯಾ ಇಂಜಿನಿಯರಿಂಗ್ ಕೌನ್ಸಿಲ್ ಪಾರ್ ಟೆಕನಿಕಲ್ ಎಜುಕೇಶನ್ ನಿಂದಲೂ ಸಹಿತ ಮಾನ್ಯತೆಯನ್ನು ಪಡೆದಿರುವ ಏಕೈಕ ಕಲಿಕೆಯ ಜೊತೆಗೆ ಉದ್ಯೋಗಿಕ ತರಬೇತಿ ನೀಡುವ ಸಂಸ್ಥೆಯಾಗಿರುತ್ತದೆ.

ಜಿಟಿಟಿಸಿ ಸಂಸ್ಥೆಯಲ್ಲಿ ಹಲವಾರು ಕೋರ್ಸುಗಳಿವೆ ಇಲ್ಲಿ ಎಸ್ ಎಸ್ಎಲ್ ಸಿ ತೇರ್ಗಡೆಯಾದ ನಂತರ ಡಿಟಿಡಿಎಂ, ಡಿಪಿಎಮ, ಮೆಕಾಟ್ರೋನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್, ಡಿಪ್ಲೋಮಾ/ ಗ್ರಾಜುಯೇಷನ್ ಇಂಜಿನಿಯರಿಂಗ ತೇರ್ಗಡೆ ಆದವರಿಗೆ ಪಿಡಿಟಿಡಿ, ಮೆಕಾನಿಕಲ್ ಇಂಜನರಿಂಗ್ ಗ್ರಾಜುಯೇಷನ ಆದವರಿಗೆ M.Tech in tool ಎಂಜನರಿಂಗ ಮುಂತಾದ ಕೋರ್ಸು ಗಳಲ್ಲದೆ ವಿವಿಧ ಅಲ್ಪಾವಧಿ ಕೋರ್ಸು ಗಳಾದ ಟರ್ನರ್ ,ಫಿಟ್ಟರ್ ಸಿಎನ್ ಸಿ ಆಪರೇಟರ in ಮಿಲ್ಲಿಂಗ್ ಅಂಡ್ ಟರ್ನಿಂಗ್, ಸಿಎನ್ಸಿ ಪ್ರೋಗ್ರಾಮಿಂಗ, ಗ್ರೈಂಡರ್ , ಕ್ಯಾಡ್ ಕ್ಯಾಂ, ಸಿಎಂಎಂ ಹಾಗೂ ವೆಲ್ಡರ್ ಮುಂತಾದ ಕೋರ್ಸ್ಗಳ ತರಬೇತಿ ನೀಡಲಾಗುತ್ತದೆ . ಸಂಸ್ಥೆಯಲ್ಲಿ ತರಬೇತಿಯನ್ನು ಹೊಡೆದಿರುವ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ದೇಶ-ವಿದೇಶಗಳ ಕಂಪನಿಗಳಲ್ಲಿ ಕ್ಯಾಂಪಸ/ ಸಂದರ್ಶನ ಮೂಲಕ ಅನೇಕ ವಿವಿಧ ಇಂಜಿನಿಯರಿಂಗ್ ವೃತ್ತಿಯ ಗಳಿಗೆ ಉದ್ಯೋಗ ಕೊಡಿಸಲಾಗುತ್ತದೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ರಾಘವೇಂದ್ರ , ಆಡಳಿತ ಅಧಿಕಾರಿ ಶ್ರೀ ಮುನಿರ್ ಖತೀಬ್, ಸಹ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಮೇಶ, ಶ್ರೀ ಮುತ್ತುಕುಮಾರ್, ಶ್ರೀ ರಾಜಕುಮಾರ್ ಶ್ರೀ ಅಶೋಕ್ ವಾಲಿಕಾರ, ವಲಯ ಅಧಿಕಾರಿ ಶ್ರೀ ಮೋಗೇರ ಹಾಗೂ ಧಾರವಾಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶಿವಾನಂದ ಕುಂಬಾರ, HOD ಅವರಾದ ಪ್ರೊ.ಶ್ರೀ ಬಸವರಾಜ್ ಬಿ, ತರಬೇತಿ ದಾರಿ ಶ್ರೀ ಶಂಕರ ಆಡಳಿತಾಧಿಕಾರಿ ಶ್ರೀ ಶರೀಪ ಖಾಜಿ, ಶ್ರೀ ಮಂಜುನಾಥ ಆರ್. ಶ್ರೀ ದೇವದಾಸ್ ಎನ್, ಶ್ರೀ ರಘುನಾಥ, ಶ್ರೀ ಪ್ರಭು T. ಶ್ರೀ ಮಾರುತಿ ಬ. ಶ್ರೀ ಪ್ರಶಾಂತ, ಶ್ರೀ ಪಾಂಡು ಚವ್ಹಾಣ, ಶ್ರೀ ರಫೀಕ B. ಶ್ರೀ ಖತಿಬ ಶ್ರೀ ಇಮ್ರಾನ, ಶ್ರೀ ಪ್ರಕಾಶ, ಯುಸುಫ್, ರಾಕೇಶ, ಅಕ್ಬರ, ಮಹೇಶ್, ಜಯಶ್ರೀ, ಅಶ್ವಿನಿ, ಶರಣಮ್ಮ, ವಸಂತ, ಹಾಗೂ ಕಾಲೇಜಿನ ಸರ್ವ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

ಉತ್ತರ ಪ್ರಭ @ ಪಾಂಡು ಚೌಹಾಣ್

Leave a Reply

Your email address will not be published. Required fields are marked *

You May Also Like

ಕೊರೊನಾ ಆಸ್ಪತ್ರೆಯ ಬಿಲ್ ನೋಡಿ ಕುಸಿದು ಬಿದ್ದ ರೋಗಿ!

ವಾಷಿಂಗ್ಟನ್ : ಅಮೆರಿಕದಲ್ಲಿನ 70 ವರ್ಷದ ವೃದ್ಧರೊಬ್ಬರು ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.…

ಗಡಿಯಲ್ಲಿ ಕ್ಯಾತೆ ಆರಂಭಿಸಿದ ಚೀನಾ!

ನವದೆಹಲಿ: ಉತ್ತರ ಸಿಕ್ಕಿಂ ನಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಕ್ಯಾತಿ ತೆಗೆದಿದ್ದಾರೆ. ಪರಿಣಾಮವಾಗಿ ಭಾರತೀಯ…

ಗುಲಾಬ ನಬಿ ಆಜಾದರ ನಿರ್ಣಯ ಕೋಮುವಾದಿ ಶಕ್ತಿಗೆ ಬಲ ತಂದಂತಾಗಿದೆ: ಎಚ್ ಕೆ ಪಾಟೀಲ

ಉತ್ತರಪ್ರಭಗದಗ: ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಎಂಬ ರ್ಯಾಲಿಯ ಮೂಲಕ ಕೋಮುವಾದಿ ಶಕ್ತಿಗಳಿಗೆ ಶಡ್ಡು ಹೋಡೆದು…