ಉತ್ತರ ಪ್ರಭ ಸುದ್ದಿ
ರೋಣ : ಪಟ್ಟಣದ ಸಿದ್ದಾರೊಡ ಮಠದ ಮುಂದಿನ ರಸ್ತೆ ದುರಸ್ಥಿಯನ್ನು ಅತ್ಯಂತ ಕಳಪೆ ಮಾಡುತ್ತಿರುವುದನ್ನು ರೋಣ ಅಭಿವೃದ್ಧಿ ಸಮಿತಿಯವರು ತಡೆ ಹಿಡಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಪ್ರಮುಖ ರಸ್ತೆಯಾದ ಸೂಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿ ಹೋಗಿದ್ದು ಅವುಗಳನ್ನು ದುರಸ್ಥಿ ಮಾಡುತ್ತಿರುವ ಗುತ್ತಿಗೆದಾರರು ರಸ್ತಯಲ್ಲಿನ ಹಾಳಾದ ಮಣ್ಣನ್ನು ಸ್ವಚ್ಛಗೊಳಿಸಿ ಅನಂತರ ಕಡಿ ಹಾಕಿ ರೂಲರ ಹೊಡೆದು ಡಾಂಬರ್ ಹಾಕುವದನ್ನು ಬಿಟ್ಟು ಬರೀ ಧೋಳಲ್ಲಿ ಕಡಿ ಡಾಂಬರ್ ಹಾಕಿದರೆ ಮರುದಿನವೇ ಕಿತ್ತು ಹೋಗುವದು ಎಂದು ಅಭಿಷೇಕ ನವಲಗುಂದ ಗುತ್ತಿಗೆದಾರನ ಹಾಗೂ ಲೋಕೋಪಯೋಗಿ ಇಲಾಖೆಯವರ ಮೇಲೆ ನೇರ ಆರೋಪ ಮಾಡಿದರು.


ಲೋಕೋಪಯೋಗಿ ಇಲಾಖೆಯವರ ಬೇಜವಾಬ್ದಾರಿ ಮೆರೆಯಿತ್ತಿರುವುದು ಎದ್ದು ತೋರುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ, ಈ ಹಿಂದೆ ಮುಲ್ಲನಬಾವಿ ವೃತ್ತದಿಂದ ಕೋಟುಮಚಗಿ ರಸ್ತೆಯು ಇದೆ ರೀತಿ ಪುರಸಭೆ ಸದಸ್ಯರು ಕಳಪೆ ಆರೋಪ ಮಾಡಿ ಅಡ್ಡಿ ಪಡಿಸಿ ತಿಂಗಳು ಗತಿಸಿದರೂ ಇನ್ನೂವರೆಗೂ ಆ ರಸ್ತೆ ದುರಸ್ಥಿಯಾಗದೆ ಹಾಗೇ ಉಳಿದುಬಿಟ್ಟಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆ ರಸ್ತೆ ದುರಸ್ಥಿಯಾಗದೆ ಕಡಿ ಹಾಕಿ ಹಾಗೇ ಬಿಟ್ಟಿರುವುದು ವಾಹನ ಸವಾರರಿಗೆ ತಲೆನೋವಾಗಿದೆ.


ಒಟ್ಟಿನಲ್ಲಿ ರೋಣ ಪಟ್ಟಣದ ರಸ್ತೆಗಳು ಗುಂಡಿಗಳಿಂದ ಮುಕ್ತಿ ಹೊಂದುವುದು ಮಾತ್ರ ಮರೀಚಿಕೆಯಾಗಿದೆ ಎನ್ನುವರು ಪ್ರಜ್ಞಾವಂತ ಪ್ರಜೆಗಳು.

Leave a Reply

Your email address will not be published. Required fields are marked *

You May Also Like

ಫೆ.27,28 ರಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 27 ಮತ್ತು 28 ರಂದು ಜಿಲ್ಲಾ ಸಾಹಿತ್ಯ ಭವನದಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ ಹೇಳಿದರು.

ಗದಗ, ಶಿರಹಟ್ಟಿ, ರೋಣ, ಮುಂಡರಗಿ ಸೇರಿ 19ಪಾಸಿಟಿವ್, ಗದಗನಲ್ಲೇ ಅತಿ ಹೆಚ್ಚು

ಗದಗ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರಲ್ಲಿ ಗದಗ ತಾಲೂಕಿನಲ್ಲಿಯೇ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ನಾಳೆ ಗದಗ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉತ್ತರಪ್ರಭ ಸುದ್ದಿಗದಗ: ಜಿಲ್ಲೆಯಲ್ಲಿ ಶುಕ್ರವಾರ ನಿರಂತರವಾಗಿ ಮಳೆಯಾಗುತ್ತಿದ್ದು, ಶನಿವಾರ ಸಹ ಮಳೆ ಮುಂದುವರಿಯುವದಾಗಿ ಹವಾಮಾನ ಇಲಾಖೆ…

ಗದಗ ಜಿಲ್ಲೆಯಲ್ಲಿ ಸೋಂಕಿನ ಏಕ್-ದಮ್ ನೆಗೆತ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯ ಮಟ್ಟಿಗೆ ಈ ಹಿಂದೆ ಒಂದೇ ದಿನ 24 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಗರಿಷ್ಠ…