ಗದಗ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 27 ಮತ್ತು 28 ರಂದು ಜಿಲ್ಲಾ ಸಾಹಿತ್ಯ ಭವನದಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.27 ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ ನಡೆಯಲಿದ್ದು, ಗದಗ ತಾ.ಪಂ ಅಧ್ಯಕ್ಷ ವಿದ್ಯಾಧರ ರಾಷ್ಟ್ರ ಧ್ವಜ ನೆರವೆರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಶರಣು ಗೋಗೇರಿ ಪರಿಷತ್ತಿನ ಧ್ವಜ ನೆರವೆರಿಸಲಿದ್ದು, ಗದಗ ತಾಲೂಕು ಅಧ್ಯಕ್ಷ ರವಿ ಶಿಶ್ವಿನಹಳ್ಳಿ ಅವರು ನಾಡ ಧ್ವಜ ನೆರವೆರಿಸುವರು. ತಾ.ಪಂ ಉಪಾಧ್ಯಕ್ಷೆ ಮಮತಾಜಬಿ ನದಾಫ್, ತಹಶಿಲ್ದಾರ ಶ್ರೀನಿವಾಸ ಕುಲಕರ್ಣಿ, ತಾ.ಪಂ ಇಒ ಎಸ್.ಎಚ್. ಜಿನಗಾ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾಧವ, ಯುವಜನ ಹಾಗೂ ಸಬಲೀಕರಣ ಸಹಾಯಕ ನಿರ್ದೇಶಕ ವಿಶ್ವನಾಥ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಹೆಬ್ಬಾಳ, ಗದಗ ಗ್ರಾಮೀಣ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್ ಎಸ್ ತಳ್ಳಿಹಾಳ, ಗದಗ ಶಹರ ತಾಲೂಕು ದೈ. ಶಿಕ್ಷಣಾಧಿಕಾರಿ ಜೆ.ಬಿ. ಅಣ್ಣಿಗೇರಿ ಸೇರಿದಂತೆ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗ್ಗೆ 9ಕ್ಕೆ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಕಿತ್ತೂರು ರಾಣಿ ಚನ್ನಮ್ಮ ವೃತ್ತ ದಿಂದ ಮಹಾವೀರ ವೃತ್ತ, ಟಿಪ್ಪುಸುಲ್ತಾನ ವೃತ್ತದ ಮಾರ್ಗವಾಗಿ ಸಮ್ಮೇಳನ ವೇದಿಕೆ ವರೆಗೆ ಮೆರವಣಿಗೆ ನಡೆಯಲಿದೆ. ಜಿ.ಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ಜಿ.ಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ಚವ್ಹಾಣ್, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅಳವಂಡಿ ಸೇರಿದಂತೆ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶ್ರೀ ತೋಂಟದಾರ್ಯ ಸಂಸ್ಥಾನಮಠದ ಶ್ರೀ ಡಾ.ತೋಂಟದ ಸಿದ್ದಾರಮ ಸ್ವಾಮೀಜಿ ಸಾನಿಧ್ಯವಹಿಸುವರು. ಶಾಸಕ ಎಚ್.ಕೆ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಮದ್ಯಾಹ್ನ 1.15 ರಿಂದ 3ರ ವರೆಗೆ ಜಿಲ್ಲಾ ಅವಲೋಕನ ಮೊದಲನೇ ಕವಿಗೋಷ್ಠಿ ಆರಂಭವಾಗಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯ  ವಿಶ್ರಾಂತ ನ್ಯಾಯಾಧೀಶ ನಾಗರಾಜ ಅರಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸಿ.ವಿ ಕೆರಿಮನಿ, ಹೇಮಗಿರೀಶ ಹಾವಿನಾಳ, ಫಕ್ಕೀರೇಶ ಅಕ್ಕಿ, ಪ್ರಿಯಾಂಕ ನಡುವಿನಮನಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ 3 ರಿಂದ 4.45ರ ವರೆಗೆ ಸಮಕಾಲಿನ ಸಾಹಿತ್ಯದ 2ನೇ ಗೋಷ್ಠಿ ನಡೆಯಲಿದ್ದು, ಮುಂಡರಗಿ ವಿಶ್ರಾಂತ  ಪ್ರಾಧ್ಯಾಪಕ ಪ್ರೊ.ಆರ್.ಎಲ್. ಪೊಲೀಸ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಆಶಯ ನುಡಿಗಳಾಡುವರು. ಕರಾಸನೌ ಸಂಘದ ರಾಜ್ಯಪರಿಷತ್ ಸದಸ್ಯ ಪ್ರಕಾಶಗೌಡ ಪಾಟೀಲ, ಡಯಟ್ ಅಭಿವೃದ್ದಿ ಉಪ ನಿರ್ದೇಶಕ ಎಸ್.ಡಿ. ಗಾಂಜಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ, ಪ್ರಕಾಶ ಅಸುಂಡಿ, ಬಸವರಾಜ ಬಳ್ಳಾರಿ, ಕುಮಾರ ಅಣ್ಣಿಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು ಎಂದರು.

ಮದ್ಯಾಹ್ನ 4.45 ರಿಂದ 6.30 ರ ವರೆಗೆ ಸಂವಾದ 3ನೇ ಗೋಷ್ಠಿ  ನಡೆಯಲಿದ್ದು, ಹಿರಿಯ ಸಾಹಿತಿ ಪ್ರೊ.ರವೀಂದ್ರ ಕೊಪ್ಪರ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಸಾಹಿತಿ, ಪತ್ರಕರ್ತ ಅಂದಾನಪ್ಪ ವಿಭೂತಿ ಅವರು ಬದಕು ಮತ್ತು ಬರಹ ವಿಷಯ ಮಂಡಿಸಲಿದ್ದಾರೆ. ಹೊಳೆ ಆಲೂರಿನ ಕಲ್ಮೇಶ್ವರ ಪದವಿ ಕಾಅಲೇಜಿನ ಪ್ರಾಚಾರ್ಯ ಡಾ.ಎಸ್.ವಿ. ಅಂದಾನಶೆಟ್ಟಿ, ವಿಶ್ರಾಂತ ಪ್ರಾಚಾರ್ಯ ಪ್ರೊ.ಎಸ್.ಬಿ.ಕೆ ಗೌಡರ, ವೈಧ್ಯ ಡಾ.ಕೆ. ಯೋಗೇಶನ್, ಪ್ರಾ.ಶಾ.ಶಿ ಗೌರವಾಧ್ಯಕ್ಷ ಎಸ್.ಎಂ. ಪಾಟೀಲ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಐ.ಕೆ. ವಲೂಚಗಿ, ನೀಲಕಂಠ ಮರಡಿ, ಕಾಂತರಾಜ ಹಿರೇಮಠ, ವಿ.ಬಿ ತಾಳಿ, ಬಿ.ಎಂ ಹರಪ್ಪನಹಳ್ಳಿ, ದತ್ತಪ್ರಸನ್ನ ಪಾಟೀಲ, ಎಸ್.ಸಿ. ಚವಡಿ, ಹನುಮಂತಗೌಡ ಕಲ್ಮನಿ, ದಾನಪ್ಪಗೌಡ ದಾನಪ್ಪಗೌಡರ ಸಂವಾದದಲ್ಲಿ ಪಾಲಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಫೆ.28 ರಂದು ಕವಿ ಗೋಷ್ಠಿ ನಡೆಯಲಿದ್ದು, ಹಿರಿಯ ಕವಿಯತ್ರಿ ಶೋಬಾ ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಾಹಿತಿ ಕೆ.ಎ ಬಳಿಗೇರ ಆಶಯನುಡಿಗಳನ್ನಾಡುವರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮದ್ಯಾಹ್ನ 12 ರಿಂದ 1ರ ವರೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ರಾಜೇಂದ್ರ  ಜಿಲ್ಲೆಯ ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯದ ಬಗ್ಗೆ ವಿಷಯ ಮಂಡಿಸಲಿದ್ದಾರೆ. ಗಂಗಣ್ಣ ಕೋಟಿ, ಚಂದ್ರಣ್ಣ ಬಾಳಿಮಠ, ಎಂ.ಎಸ್. ದೊಡ್ಡಗೌಡರ, ವಿ.ಬಿ. ಸೋಮನಕಟ್ಟಿಮಠ, ಡಿ.ಐ ಅಸುಂಡಿ, ಎಚ್.ಎಸ್. ಬೀರಕಬ್ಬಿ, ಶಂಕರ ಹಡಗಲಿ, ಗೀರೀಶ ಅಗಡಿ, ಆಧಿನಾಥ ಬರಿಗಾಲಿ ಅತಿಥಿಗಳಾಗಿ ಆಗಮಿಸುವರು.

ಮದ್ಯಾಹ್ನ 1.15 ರಿಂದ 3ರ ವರೆಗೆ ಶಿಕ್ಷಣ ಮತ್ತು ಭಾಷೆ ಮೇಲೆ 4ನೇ ಗೋಷ್ಠಿ ನಡೆಯಲಿದ್ದು, ಅಖಿಲ ಭಾರತ ಶಿಕ್ಷಣ ಪೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಾ.ಶಿ. ಇಲಾಖೆ ಉಪ ನಿರ್ದೇಸಕ ಜಿ.ಎಂ ಬಸವಲಿಂಗಪ್ಪ, ಸಾ.ಶಿ. ಇಲಾಖೆ ವಿಶ್ರಾಂತ ಉಪ ನಿರ್ದೇಶಕ ಪ್ರಕಾಶ ಮನ್ನಂಗಿ, ಐ.ಆರ್. ಅಕ್ಕಿ, ಆರ್.ಎಸ್. ಬುರಡಿ ವಿಷಯ ಮಂಡಿಸಲಿದ್ದಾರೆ.

ಜಿ.ಎಲ್ ಬಾರಾಟಕ್ಕೆ, ಮಂಗಲಾ ತಾಪಸ್ಕರ, ವಿ.ಎಂ ಹಿರೇಮಠ, ಎಸ್.ಎಸ್. ಸೋಮಣ್ಣವರ, ಎಚ್.ಎಂ. ದೇವಗಿರಿ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಮದ್ಯಾಹ್ನ 3.15 ರಿಂದ 4ರ ವರೆಗೆ ವಿಶೇಷ ಉಪನ್ಯಾಸ ನಡೆಯಲಿದ್ದು, ದೇಶದ ಅಭಿವೃದ್ಧಿ ಯುವ ಜನತೆ ಪಾತ್ರ  ಎಂಬ ವಿಷಯದ ಮೇಲೆ ಪ್ರೊ.ಎ.ವೈ. ನವಲಗುಂದ ವಿಷಯ ಮಂಡಿಸಲಿದ್ದಾರೆ.

ಅAದಾನೆಪ್ಪ ಪಟ್ಟಣಶೆಟ್ಟಿ, ಕೆ.ವಿ. ಪಾಟೀಲ, ಕೆ.ಡಿ. ಬಡಿಗೇರ, ಆರ್.ಎಫ್. ಲೊಟಗೇರಿ, ತಿಮ್ಮರಡ್ಡಿ ಮರಡ್ಡಿ ಸೇರಿದಂತೆ ಮುಂತಾದೌರು ಅತಿಥಿಗಳಾಗಿ ಆಗಮಿಸುವರು ಎಂದರು.

ಮದ್ಯಾಹ್ನ 4 ರಿಂದ 5ರ ವರೆಗೆ ಬಹಿರಂಗ ಅಧಿವೇಶನ ನಡೆಯಲಿದ್ದದು, ಜಿಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪ್ರಕಾಶ ಮಂಗಳೂರು, ಅಶೋಕ ಹಾದಿ, ಡಾ.ಜಿ.ಎಸ್. ಯತ್ನಟ್ಟಿ ನಿರ್ಣಯಗಳ ಮಂಡನೆ ನೀಡಲಿದ್ದಾರೆ. ಸಂಜೆ 5 ರಿಂದ 7ರ ವರೆಗೆ ಸಮಾರೋ ಸಮಾರಂಬ ನಡೆಯಲಿಉದ್ದು, ವೀರೇಶ್ವರ ಪುಣ್ಯಾಶ್ರ ಶ್ರೀ ಕಲ್ಲಯ್ಯಜ್ಜನವರು, ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿAಗ ಸ್ವಾಮೀಜಿ ಸಾನಿಧ್ಯವಹಿಸುವರು. ಡಾ.ಶರಣು ಗೋಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬಿ.ಎಂ ಜಾಬಣ್ಣವರ ಸಮಾರೋಪ ನುಡಿಗಳನ್ನಾಡುವರು. ಎಸ್.ಎಸ್. ಪಾಟೀಲ, ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ಲ, ಜಿ.ಎಸ್. ಗಡ್ಡದೇವರಮಠ, ಡಿ.ಆರ್. ಪಾಟೀಲ, ಶ್ರೀಶೈಲ ಬಿದರೂರ ಸೇರಿದಂತೆ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ರವೀಂದ್ರ ಕೊಪ್ಪರ ಸಮ್ಮೇಳನಾಧ್ಯಕ್ಷರ ಬಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ಪ್ರೇಮನಾಥ ಗರಗ, ಅಂದಾನಪ್ಪ ವಿಭೂತಿ, ಇ.ಒ. ಪಾಟೀಲ, ಪ್ರಕಾಶ ಮಂಗಳೂರ, ಅಶೋಕ ಆದಿ, ಎಂ.ಎ ಯರಗುಡಿ, ರವಿರಾಜ ಪವಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಮುಂಬಯಿನ ಮೀನು ಮಾರುಕಟ್ಟೆಯಿಂದ ಬಂದ ಕೊರೊನಾ!

ಮುಂಬಯಿನ ಮೀನದ ಮಾರುಕಟ್ಟೆಯಲ್ಲಿ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ಮರಳಿ ಬಂದಿದ್ದ ಜಿಲ್ಲೆಯ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ದಿಂಗಾಲೇಶ್ವರ ಶ್ರೀಗಳ ಹೇಳಿಕೆ: ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆ ಕಟ್ಟಲಾಗದು

ಉಪಕಾರ ಸ್ಮರಣಯೇ ಜನ್ಮದಿನವಾಗಿರುತ್ತದೆ. ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆಯನ್ನು ಕಟ್ಟುವುದು ಅಸಾಧ್ಯವಾದ ಮಾತಾಗಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

ಸಂಘಗಳಲ್ಲಿ ಪಡೆದ ಸಾಲದ ಪೂರ್ತಿಬಾಕಿ ಕಟ್ಟಬೇಕು ಎಂಬ ಆದೇಶ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ/ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.