ಧಾರವಾಡ: ವಿದ್ಯಾಕಾಶಿ ಧಾರವಾಡ ನಗರದಲ್ಲಿ ಜಿಟಿಟಿಸಿ ವತಿಯಿಂದ ಡಿಪ್ಲೋಮಾ ಕೊರ್ಸಗಳಿಗೆ ಪ್ರವೇಶ ಪ್ರಾರಂಭವಾಗಿದ್ದು.

ಅರ್ಹತೆ:  ಡಿಪ್ಲೋಮಾ  ಕೊರ್ಸಗಳಾದ  ಟೂಲ್ ಆಂಡ್  ಡೈ ಮೇಕಿಂಗ್/ ಮೆಕ್ಯಾನಿಕಲ್/ಪ್ರೊಡಕ್ಷನ/ ಇಂಡಸ್ಟ್ರಿಯಲ್ ಇಂಜಿನಿಯರಿಂಗ್  ಕೊರ್ಸುಗಳಲ್ಲಿ   ಪ್ರತಿಶತ  ಶೇ.60 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಅಥವಾ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೆಕಾನಿಕಲ್ ಇಂಜಿನಿಯರಿಂಗ/ ಪ್ರೊಡಕ್ಷನ್  ಇಂಜಿನಿಯರಿಂಗ್/ಇಂಡಸ್ಟ್ರಿಯಲ್ ಇಂಜಿನಿಯರಿಂಗ್  ವಿಭಾಗದಲ್ಲಿ  ಪದವಿಯನ್ನು ಪಡೆದಿರಬೇಕು. ಪದವಿಯಲ್ಲಿ ಪ್ರತಿಶತ ಶೇ. 50 ಅಂಕಗಳನ್ನು ಪಡೆದು ಪಾಸಾಗಿರಬೇಕು.

ಕೊರ್ಸಿನ ಅವಧಿ: ಪಿಡಿಟಿಡಿ ( ಪೋಸ್ಟ್ ಡಿಪ್ಲೋಮಾ ಇನ್ನ ಟುಲ್ ಡಿಸೈನ್) ನ್ನು ಒಂದು ವರ್ಷದ ಅವಧಿಯಲ್ಲಿ ಪುರೈಸಬಹುದಾಗಿದೆ. ಪ್ರಸಕ್ತ  ಸಾಲಿನಲ್ಲಿ ಪ್ರವೇಶ ಪಡೆಯಲು ಅರ್ಜಿ ಕರೆಯಲಾಗಿದ್ದು, ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆಶಕ್ತ ವಿದ್ಯಾರ್ಥಿಗಳು ಧಾರವಾಡದ ರಾಯಾಪುರ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತು ಪಡೆದು ಪ್ರವೇಶವನ್ನು ಪಡೆಯಬಹುದಾಗಿದೆ. ಅರ್ಜಿಸಲ್ಲಿಸಲು ಅಥವಾ ಪ್ರವೇಶ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ದೂರವಾಣಿ ಸಂಖ್ಯೆ: 9035630312, 9448236279,  8050401115      ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ. ಅರ್ಜಿಸಲ್ಲಿಸಲು ಕೊನೆಯ ದಿನ: ದಿನಾಂಕ: 11.1.2022 ವಾಗಿರುತ್ತದೆ. ಕಲಿಕಾ ಅವಧಿಯಲ್ಲಿ ಅನುಭವಿ ಪ್ರಾಧ್ಯಾಪಕರಿಂದ ವಿಷಯಗಳ ಜೊತೆಗೆ  ಪ್ರಾಯೋಗಿಕ ವಿಷಯಗಳನ್ನು ಸಹ ಬೋಧಿಸಲಾಗುವುದು.

ಕೊರ್ಸಿನ ವಿಶೇಷತೆ: ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕಟ್ಟಡದ ವ್ಯವಸ್ಥೆ , ಪ್ರಾಯೋಗಿಕ ಭೋಧನೆಗಳನ್ನು ನೀಡಲು ಕಂಪ್ಯೂಟರ್ ಲ್ಯಾಬಿನ ವ್ಯವಸ್ಥೆ,  ಅತ್ಯುತ್ತಮ ತಂತ್ರ ಜ್ಞಾನವುಳ್ಳ ಮಷೀನ ಶಾಪ, ಅನೇಕ ಪ್ರಾಯೋಗಿಕ ಲಾಭಗಳು ಇರುತ್ತವೆ. ಕಲಿಕಾ ಅವಧಿಯಲ್ಲಿ ಬೇಸಿಕ್ ಕ್ಯಾಡ್- ಕ್ಯಾಂ ಸಾಫ್ಟ್ವೇರಗಳ ಬಳಕೆಯಿಂದ ಹಿಡಿದು Solidworks, Uni Graphics, Catia, Creo, Autodesk,  ಹಾಗೂ latest software ಗಳನ್ನು ಕಲಿಸಲಾಗುತ್ತದೆ.

ತರಬೇತಿ ಪಡೆದಂತಹ ವಿದ್ಯಾರ್ಥಿಗಳು  ಸಂದರ್ಶನದ ಮೂಲಕ ದೇಶ-ವಿದೇಶಗಳಲ್ಲಿ  ಬೃಹತ್ ಮಟ್ಟದ, ಮೀಡಿಯಂ ಸ್ಕೇಲ ಮತ್ತು ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಟಿಟಿಸಿ ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯ ಇಲಾಖೆಗೆ ಒಳಪಟ್ಟಿರುವ ಸಂಸ್ಥೆಯಾಗಿದೆ ಮತ್ತು ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಆಲ್ ಇಂಡಿಯಾ ಇಂಜಿನಿಯರಿಂಗ್ ಕೌನ್ಸಿಲ್ ಪಾರ್ ಟೆಕನಿಕಲ್ ಎಜುಕೇಶನ್ ನಿಂದಲೂ ಸಹಿತ ಮಾನ್ಯತೆಯನ್ನು ಪಡೆದಿರುವ ಏಕೈಕ  ಕಲಿಕೆಯ ಜೊತೆಗೆ ಉದ್ಯೋಗಿಕ ತರಬೇತಿ ನೀಡುವ ಸಂಸ್ಥೆಯಾಗಿರುತ್ತದೆ.

 ಜಿಟಿಟಿಸಿ ಸಂಸ್ಥೆಯಲ್ಲಿ  ಹಲವಾರು ಕೋರ್ಸುಗಳಿವೆ ಇಲ್ಲಿ ಎಸ್ ಎಸ್ಎಲ್ ಸಿ  ತೇರ್ಗಡೆಯಾದ ನಂತರ ಡಿಟಿಡಿಎಂ, ಡಿಪಿಎಮ, ಮೆಕಾಟ್ರೋನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಮುಂತಾದ ಕೋರ್ಸುಗಳಿವೆ.

ಅಲ್ಪಾವಧಿಕೋರ್ಸು ಗಳಾದ: ಟರ್ನರ್ ,ಫಿಟ್ಟರ್ ಸಿಎನ್ ಸಿ ಆಪರೇಟರ ಇನ್ ಮಿಲ್ಲಿಂಗ್ ಅಂಡ್ ಟರ್ನಿಂಗ್,  ಸಿಎನ್ಸಿ ಪ್ರೋಗ್ರಾಮಿಂಗ, ಗ್ರೈಂಡರ್ , ಕ್ಯಾಡ್ ಕ್ಯಾಂ, ಸಿಎಂಎಂ ಹಾಗೂ ವೆಲ್ಡರ್ ಮುಂತಾದ ಕೋರ್ಸ್ಗಳಲ್ಲಿ ತರಬೇತಿ ನೀಡಲಾಗುತ್ತದೆ . ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು  ದೇಶ-ವಿದೇಶಗಳ ಕಂಪನಿಗಳಲ್ಲಿ ಕ್ಯಾಂಪಸ್/ ಸಂದರ್ಶನ ಮೂಲಕ  ಆಯ್ಕೆಯಾಗಿ  ಇಂಜಿನಿಯರಿಂಗ್ ವೃತ್ತಿಯಲ್ಲಿ   ಉದ್ಯೋಗ ಮಾಡುತಿದ್ದಾರೆ. ಈಗ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಸಲಾಗುತ್ತದೆ.

ಬಹು ರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆ: ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳು  ಬಹು ರಾಷ್ಟ್ರೀಯ ಕಂಪನಿಗಳಿಗೆ  ಆಯ್ಕೆಯಾಗಿದ್ದಾರೆ.  ಪಿಡಿಟಿಡಿ ಕೋರ್ಸಿನ 11ನೇ ಬ್ಯಾಚಿನ 24 ವಿದ್ಯಾರ್ಥಿಗಳಲ್ಲಿ ಪ್ರಾರಂಭಿಕವಾಗಿ 11 ವಿದ್ಯಾರ್ಥಿಗಳು ದೊಡ್ಡ ದೊಡ್ಡ  ಕಂಪನಿಗಳಲ್ಲಿ  ಆಯ್ಕೆಯಾಗಿದ್ದಾರೆ. ಕಂಪನಿಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾದ ವಿದ್ಯಾರ್ಥಿಗಳಾದ  1) ಕು. ವಿಷ್ಣು ಜೋಶಿ- ರಾಕಿಂಗ್ ಸಿಸ್ಟಮ ಕಂಪನಿ ಪುಣೆ 2) ಸೋಮೇಶ್ ಎಚ್- ಐಡಿ ಪ್ರೊ ಏಷಿಯಾ LTD ಕಂಪನಿ, ಬೆಂಗಳೂರು 3) ಶಿವರಾಜ್ ಪಿ -ಐಡಿ ಪ್ರೊ ಏಷಿಯಾ LTD ಕಂಪನಿ ,ಬೆಂಗಳೂರು 4) ಓಂಕಾರ -ಒರಿಕಾನ್ HRS ಫ್ಲೋಸ್ ಕಂಪನಿ, ಪುಣೆ  5)ಪೂಜಾ ಉಪ್ಪಾರ್ -ಒರಿಕಾನ್ HRS ಫ್ಲೋಸ್ ಕಂಪನಿ, ಪುಣೆ 6) ಪವನ್ ಕುಮಾರ್ – ಟೂಲ್ ಕಂಪ್  ಕಂಪನಿ, ಬೆಂಗಳೂರು 7) ನಿಂಗಣ್ಣ- ಟೂಲ್ ಕಂಪ್  ಕಂಪನಿ, ಬೆಂಗಳೂರು 8)ಕಾರ್ತಿಕ- -ದೇವು ಟೂಲ್ಸ್ ಲಿಮಿಟೆಡ್ ಕಂಪನಿ,ಮುಂಬೈ 9) ಅವಧೂತ -ದೇವು ಟೂಲ್ಸ್ ಲಿಮಿಟೆಡ್ ಕಂಪನಿ,ಮುಂಬೈ 10) ಮೋಹಿನುದ್ದಿನ್ -ದೇವು ಟೂಲ್ಸ್ ಲಿಮಿಟೆಡ್ ಕಂಪನಿ,ಮುಂಬೈ, 11) ಶಿವಕುಮಾರ್ ಎಂ ದೇವು ಟೂಲ್ಸ್ ಲಿಮಿಟೆಡ್ ಕಂಪನಿ, ಮುಂಬೈ. 

 ಕ್ಯಾಂಪಸ್ ಸಂದರ್ಶನದ ಮೂಲಕ  ಆಯ್ಕೆಯಾಗಿರುವ  ವಿದ್ಯಾರ್ಥಿಗಳಿಗೆ ಹಾಗೂ ಇತ್ತೀಚಿಗೆ ವರ್ಲ್ಡ್ ಸ್ಕಿಲ್ ಕಾಂಪಿಟೇಷನ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು. ಆಯ್ಕೆಯಾದ ವಿದ್ಯಾರ್ಥಿಗಳಾದ: ಗಣೇಶ, ಹರೀಶ ಮತ್ತು ಫರಾನ ವಿದ್ಯಾರ್ಥಿಗಳಿಗೆ  ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶಿವಾನಂದ ಕುಂಬಾರ, HOD ಪ್ರೊ. ಬಸವರಾಜ್ ಬಿ, ಆಡಳಿತಾಧಿಕಾರಿ ಶ್ರೀ ಶರೀಪ   ಖಾಜಿ, ಶ್ರೀ ಮಂಜುನಾಥ  ಆರ್. ಶ್ರೀ ದೇವದಾಸ್ ಎನ್, ಶ್ರೀ ಶಂಕರ, ಶ್ರೀ ರಘುನಾಥ , ಶ್ರೀ ಪ್ರಭು T, ಶ್ರೀ ರಫೀಕ B.  ಶ್ರೀ  ಖತಿಬ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ  ವ್ಯಕ್ತಪಡಿಸಿ ಅಭಿನಂದನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

ವರದಿ : ಪಾಂಡು ಚೌಹಾಣ್

Leave a Reply

Your email address will not be published. Required fields are marked *

You May Also Like

ಪ್ಲೀಸ್…..ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ!

ಬೆಂಗಳೂರು : ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಈ ಸಂದರ್ಭದಲ್ಲಿ ಮಾಡಿದರೆ ಸಮಾಜಕ್ಕೆ ಬೇರೆ ಸಂದೇಶ ರವಾಣೆ ಮಾಡಿದಂತಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಮಂದಿರದಲ್ಲಿ ಪ್ರೇಕ್ಷಕರ ಕಡಿತವಿಲ್ಲ

ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಸಿನಿಮಾ ಮಂದಿರಗಳು ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ: ಗದಗನಲ್ಲಿ ಜನ ಜಾಗೃತಿ ರಥಕ್ಕೆ ಚಾಲನೆ

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸಂಘ ಇವರ ಸಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜನಜಾಗೃತಿ ರಥಕ್ಕೆ ಜಿಲ್ಲಾಡಳಿತ ಭವನದಲ್ಲಿಂದು ಚಾಲನೆ ನೀಡಲಾಯಿತು.