ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು ಸಿಎಂ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವತ್ತು ನಾಳೆ ಕೋವಿಡ್ 19 ವಿಚಾರವಾಗಿ ಸರಣಿ ಸಭೆ ನಡೆಸಲಿದ್ದೇವೆ. ನಾಳೆ ಸರ್ವಪಕ್ಷಗಳ ಹಾಗೂ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆಯೊಣ. ಕೋವಿಡ್ 19 ವಿಚಾರವಾಗಿ ತಜ್ಞರಿಂದ ಅಂತಿಮ ವರದಿ ಕೂಡ ಬರಬೇಕಿದೆ. ಹೀಗಾಗಿ ಈಗಲೇ ಲಾಕ್ ಡೌನ್ ಮಾಡುವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಸ್.ಎಸ್ ಎಲ್.ಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಲಾಕ್ ಡೌನ್ ವದಂತಿಗಳಿಂದ ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲ ಆತಂಕ ಸೃಷ್ಟಿಯಾಗುತ್ತೆ ಎಂದು ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೆಕ್ಕೆಜೋಳ ರೈತರಿಗೆ ಪರಿಹಾರ: ಇದರಲ್ಲಿ ಸಂಶಯ ಬೇಡ

ಕೊಪ್ಪಳ: ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ…

ರಾಜ್ಯದಲ್ಲಿ ಮತ್ತೆ 22 ಕೊರೋನಾ ಹೊಸ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಮತ್ತೆ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಗದಗ-ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ಮನವಿ

ನಗರದ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್ ಸಿಂಗ್ ಶುಕ್ರವಾರ ಭೇಟಿ ನೀಡಿ, ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಸೀಮಸಾಹೇಬ್ ಹುಸೇನಸಾಹೇಬ

ಉತ್ತರಪ್ರಭನಿಡಗುಂದಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಜನಪದ ಸಾಹಿತಿ ಕಾಸೀಮಸಾಹೇಬ್ ಹುಸೇನಸಾಹೇಬ ಬಿಜಾಪುರ (87)…